Connect with us

    special package; ಓಬೇನಹಳ್ಳಿಗೆ ಸಂಸದ ಗೋವಿಂದ ಕಾರಜೋಳ ಭೇಟಿ | ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ಭರವಸೆ

    ಓಬೇನಹಳ್ಳಿಗೆ ಸಂಸದ ಗೋವಿಂದ ಕಾರಜೋಳ ಭೇಟಿ

    ಮುಖ್ಯ ಸುದ್ದಿ

    special package; ಓಬೇನಹಳ್ಳಿಗೆ ಸಂಸದ ಗೋವಿಂದ ಕಾರಜೋಳ ಭೇಟಿ | ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ಭರವಸೆ

    CHITRADURGA NEWS | 24 AUGUST 2024

    ಚಿತ್ರದುರ್ಗ: ಕಳೆದ ವಾರ ಸುರಿದ ಹೆಚ್ಚಿನ ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲ್ಲೂಕಿನ ಓಬಣ್ಣನಹಳ್ಳಿ ಗ್ರಾಮಕ್ಕೆ ಸಂಸದ(MP) ಗೋವಿಂದ ಎಂ ಕಾರಜೋಳ ಶನಿವಾರ ಭೇಟಿ(visit) ನೀಡಿ, ಪರಿಶೀಲನೆ ನಡೆಸಿ ಸಂತ್ರಸ್ಥರ ಅಹವಾಲು ಆಲಿಸಿದರು.

    ಕ್ಲಿಕ್ ಮಾಡಿ ಓದಿ: POLICE: ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಪೊಲೀಸ್ ಇಲಾಖೆಯಿಂದ ಮಹತ್ವದ ಸೂಚನೆ

    ತೀವ್ರ ಮಳೆಯಿಂದಾಗಿ ಓಬಣ್ಣನಹಳ್ಳಿ ಗ್ರಾಮದ ಬಹುತೇಕ ಮನೆಗಳು ಹಾನಿಯಾಗಿರುವುದನ್ನು ಕಂಡು ಮರುಕ ವ್ಯಕ್ತಪಡಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಗೋವಿಂದ ಎಂ.ಕಾರಜೋಳ ಅವರು, ಓಬಣ್ಣನಹಳ್ಳಿ ಸುತ್ತಮುತ್ತ ಬೆಟ್ಟ ಇದೆ. ಹೀಗಾಗಿ ಹೆಚ್ಚಿನ ಮಳೆಯಿಂದಾಗಿ, ಬೆಟ್ಟದಿಂದ ಮಳೆನೀರು ಹರಿದು ಇಡೀ ಗ್ರಾಮದ ಮನೆಗಳಿಗೆ ನೀರು ನುಗ್ಗಿ ಅನೇಕ ಮನೆಗಳು ಹಾನಿಗೀಡಾಗಿವೆ. ಮಳೆ ನೀರು ನುಗ್ಗಿದ್ದರಿಂದ ಮನೆಯ ಸಾಮಾಗ್ರಿಗಳು ಹಾನಿಯಾಗಿವೆ.

    ಈಗಾಗಲೇ ತಹಶೀಲ್ದಾರ್ ಅವರು ಹಾನಿಯಾದ ಮನೆಗಳಿಗೆ ₹ 5 ಸಾವಿರ ತುರ್ತು ಪರಿಹಾರ ನೀಡಿದ್ದಾರೆ ಎಂದು ತಿಳಿಸಿದ ಅವರು, ಗ್ರಾಮದಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳು, ಗುಡಿಸಲುಗಳನ್ನು ಪಟ್ಟಿ ಮಾಡಿ ಮನೆ ನಿರ್ಮಾಣಕ್ಕೆ ಕ್ರಮಕ್ಕೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಮಾಡಿದರು.

    ಕ್ಲಿಕ್ ಮಾಡಿ ಓದಿ: Land acquisition: ವಾರದೊಳಗೆ ಭೂಸ್ವಾಧೀನ ಪೂರ್ಣಗೊಳಿಸಿ | ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚನೆ

    ಗ್ರಾಮಕ್ಕೆ ವಿಶೇಷ ಪ್ಯಾಕೇಜ್(special package) ಭರವಸೆ:

    ಓಬಣ್ಣನಹಳ್ಳಿ ಗ್ರಾಮಕ್ಕೆ ಎಸ್‍ಸಿಪಿ, ಟಿ ಎಸ್ ಪಿ ಯೋಜನೆ ಅನುದಾನದಲ್ಲಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕೂಡಲೇ ಸಲ್ಲಿಸಿ ವಿಶೇಷ ಪ್ಯಾಕೇಜ್ ನೀಡಲು ಪ್ರಯತ್ನಿಸಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಭರವಸೆ ನೀಡಿದರು.

    ಗ್ರಾಮದಲ್ಲಿ ಲೇ ಔಟ್ ನಿರ್ಮಾಣ:

    ಓಬಣ್ಣನಹಳ್ಳಿ ಗ್ರಾಮದ ಕೆಲವರಿಗೆ ನಿವೇಶನದ ಸಮಸ್ಯೆ ಇದ್ದು, ಇದರ ಜೊತೆಗೆ ಹಳ್ಳ ಒತ್ತುವರಿ ಮಾಡಿಕೊಂಡು ಹಲವರು ಮನೆಗಳನ್ನು ನಿರ್ಮಿಸಿದ್ದು, ಅವುಗಳನ್ನು ತೆರವುಗೊಳಿಸಿ, ಗ್ರಾಮದಲ್ಲಿ 3 ಎಕೆರೆ ಗ್ರಾಮಠಾಣಾ ಲಭ್ಯವಿದ್ದು, ಇದನ್ನು ಲೇ ಔಟ್ ಮಾಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ಪ್ರಕಾರ ಹಕ್ಜುಪತ್ರಗಳನ್ನು ನೀಡಿ, ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಕೊಡಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಂಸದರು ಹೇಳಿದರು.

    ತಹಶೀಲ್ದಾರ್ ಡಾ.ನಾಗವೇಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top