ಮುಖ್ಯ ಸುದ್ದಿ
municipal space: ನಗರಸಭೆ ಜಾಗಗಳನ್ನು ರಕ್ಷಿಸಲು ವಿಶೇಷ ಅಭಿಯಾನ | ಶ್ರೀನಿವಾಸ್
CHITRADURGA NEWS | 16 NOVEMBER 2024
ಚಿತ್ರದುರ್ಗ: ನಗರಸಭೆ(City Council)ಗೆ ಸೇರಿದ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿ(Property)ಗಳನ್ನು ಉಳಿಸಲು ಅಭಿಯಾನ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಸದಸ್ಯ ಶ್ರೀನಿವಾಸ್ ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಕನಕ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ | ಬಿ.ಟಿ.ಜಗದೀಶ್
ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳ್ಳಕೆರೆ ರಸ್ತೆಯಲ್ಲಿರುವ ಆದಿಶಕ್ತಿ ಬಡಾವಣೆಯಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿ ವ್ಯಕ್ತಿಯೊಬ್ಬರು ಗುಜರಿ ಅಂಗಡಿ ಹಾಕಿಕೊಂಡಿದ್ದು, ಅಲ್ಲಿ ನಗರಸಭೆಯ ಜಾಗ ಎಂಬ ನಾಮಫಲಕ ಅಳವಡಿಸಲು ಹೋದಾಗ ನಗರಸಭೆ ಸದಸ್ಯ ದೀಪು ಅಡ್ಡಿಪಡಿಸಿ ಅಕ್ರಮಕ್ಕೆ ಕೈಜೋಡಿಸುತ್ತಿರುವುದು ಬೇಸರ ತರಿಸಿದೆ ಎಂದರು.
ನಗರಸಭೆ ಖಾಲಿ ಜಾಗವನ್ನು ಲೂಟಿ ಹೊಡೆಯಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಆದಿಶಕ್ತಿ ನಗರ ಮೂರು ಮತ್ತು ನಾಲ್ಕನೆ ತಿರುವಿನಲ್ಲಿ 60*40 ವಿಸ್ತೀರ್ಣದ ಎಂಟು ನಿವೇಶನಗಳಿದ್ದು, ನಗರಸಭೆ ಗಮನಕ್ಕೆ ತಾರದೆ ಕೆಲವರು ಅಕ್ರಮವಾಗಿ ಅತಿಕ್ರಮಣ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಜಾಗಗಳಲ್ಲಿ ನಗರಸಭೆ ಸ್ವತ್ತು ಎಂಬ ನಾಮಫಲಕ ಅಳವಡಿಸಲು ಬಿಡುತ್ತಿಲ್ಲ. ಜಾಗ ಸಂರಕ್ಷಣೆಗೆ ಹೋದರೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಕ್ಲಿಕ್ ಮಾಡಿ ಓದಿ: ಉಪ್ಪರಿಗೇನಹಳ್ಳಿ ಮಹಿಳೆ ಕೊಲೆಗಾರರ ಬಂಧನಕ್ಕೆ ಗಡುವು | ನ.30 ರಿಂದ ಎಸ್‌ಪಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ | ಪ್ರಣವಾನಂದ ಶ್ರೀ
1984-85 ರಲ್ಲಿ ನಾಲ್ಕುವರೆ ಎಕರೆ ಜಾಗವನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ಹರಾಜು ಹಾಕಿದಾಗ ಕೆಲವರು ಕಿಮ್ಮತ್ತು ಕಟ್ಟಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ. ಹಣ ಕಟ್ಟದ ಕೆಲವರು ನಿವೇಶನಗಳನ್ನು ಪಡೆದುಕೊಂಡಿಲ್ಲ. ಕೆಲವು ಪ್ರಭಾವಿಗಳು ತಮ್ಮ ಹೆಸರಿನಲ್ಲಿಟ್ಟುಕೊಂಡಿದ್ದಾರೆ. ಮೂವತ್ತರಿಂದ ನಲವತ್ತು ಕೋಟಿ ರೂ.ಆಸ್ತಿಯಿದೆ.
ನಗರಸಭೆ ಜಾಗವನ್ನು ಕಾಪಾಡುವಂತೆ ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿದ್ದೇವೆ. ಜಿಲ್ಲಾಧಿಕಾರಿ ಹಾಗೂ ನಗರಸಭೆ ಪೌರಾಯುಕ್ತರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ನಗರಸಭೆ ಜಾಗಗಳನ್ನು ಉಳಿಸುವಂತೆ ನಗರಸಭೆ ಸದಸ್ಯರಾದ ಶ್ರೀನಿವಾಸ್ ಮತ್ತು ಭಾಸ್ಕರ್ ಒತ್ತಾಯಿಸಿದರು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಭರ್ತಿಗೆ 1.20 ಟಿಎಂಸಿ ನೀರಿನ ಅಗತ್ಯ
ಆದಿಶಕ್ತಿ ನಗರದಲ್ಲಿ ನಗರಸಭೆ ಜಾಗದಲ್ಲಿ ಗುಜರಿ ಅಂಗಡಿಗಳನ್ನಿಟ್ಟುಕೊಂಡಿರುವ ರಮೇಶ್, ರವಿ ಜಾಗ ಬಿಟ್ಟುಕೊಡಲು ತಯಾರಿದ್ದರು. ನಗರಸಭೆ ಸದಸ್ಯ ದೀಪು ಕ್ಯಾತೆ ತೆಗೆಯುತ್ತಿದ್ದಾರೆ.
ನಗರಸಭೆಯಲ್ಲಿ ಬಿಜೆಪಿ ಬಹುಮತ ಪಡೆದುಕೊಂಡಿದ್ದರು ನಮ್ಮ ಪಕ್ಷದವರೆ ನಾಲ್ವರು ಸದಸ್ಯರು ಹಣದ ಆಸೆಗೆ ಕಾಂಗ್ರೆಸ್ ಜೊತೆ ಕೈಜೋಡಿಸಿ ನಗರಸಭೆ ಜಾಗಗಳನ್ನು ಲೂಟಿ ಮಾಡಲು ಹೊರಟಿದ್ದಾರೆ. ಅದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕ್ಲಿಕ್ ಮಾಡಿ ಓದಿ: ಸಹ್ಯಾದ್ರಿ ದುರ್ಗ | ಬಯಲು ಸೀಮೆಯ ಹೊಸ ಶೇಂಗಾ ತಳಿ ಸಂಶೋಧನೆ | ಬಬ್ಬೂರು ಕೃಷಿ ವಿಜ್ಞಾನಿಗಳ ಸಾಧನೆ
ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷೆ ಅನುರಾಧ ರವಿಕುಮಾರ್, ಸದಸ್ಯ ಹರೀಶ್, ಗುಜರಿ ಅಂಗಡಿಯ ರಮೇಶ್, ರವಿ ಇದ್ದರು.