ಮುಖ್ಯ ಸುದ್ದಿ
Road: ರಸ್ತೆ ಸಂಪರ್ಕ ಕಲ್ಪಿಸುವಂತೆ ಮಾರುತಿ ನಗರ ಬಡಾವಣೆ ನಿವಾಸಿಗಳಿಂದ ಮನವಿ

CHITRADURGA NEWS | 21 NOVEMBER 2024
ಚಿತ್ರದುರ್ಗ: ರಸ್ತೆ(Road) ಸಂಪರ್ಕ ಕಲ್ಪಿಸುವಂತೆ ಮಾರುತಿ ನಗರ ಬಡಾವಣೆ ನಿವಾಸಿಗಳಿಂದ ಗುರುವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: ನುಲೇನೂರು ಶಂಕ್ರಪ್ಪ ನೆನಪು | ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯವ್ಯಾಪಿ ಹೋರಾಟ | ಬಡಗಲಪುರ ನಾಗೇಂದ್ರ
ರಸ್ತೆ ಸಂಪರ್ಕವಿಲ್ಲದೆ ಹಲವಾರು ವರ್ಷಗಳಿಂದಲೂ ತೊಂದರೆ ಅನುಭವಿಸುತ್ತಿದ್ದೇವೆ, ಮೆದೇಹಳ್ಳಿ ರಸ್ತೆ ಪೂರ್ವ ಮತ್ತು ಚಿತ್ರದುರ್ಗ-ರಾಯದುರ್ಗ ರೈಲು ಮಾರ್ಗದ ದಕ್ಷಿಣಕ್ಕಿರುವ ಮಾರುತಿ ನಗರ ಬಡಾವಣೆಗೆ ರಸ್ತೆ ಸಂಪರ್ಕವಿಲ್ಲದಿರುವುದಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.
ಪ್ರತಿನಿತ್ಯವೂ ಶಾಲೆಗೆ ಹೋಗುವ ಮಕ್ಕಳು ಮೆದೇಹಳ್ಳಿ ರಸ್ತೆವರೆಗೆ ಬೆನ್ನಿಗೆ ಮಣ ಬಾರದ ಚೀಲಗಳನ್ನು ಹೊತ್ತುಕೊಂಡು ಹೋಗಬೇಕಿದೆ. ತುರ್ತು ಸಂದರ್ಭಗಳಲ್ಲಿ ಯಾರನ್ನಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದರೆ ಆಟೋ, ಅಂಬ್ಯುಲೆನ್ಸ್ ಬರಲು ರಸ್ತೆಯಿಲ್ಲ. ಹಾಗಾಗಿ ಮೆದೇಹಳ್ಳಿ ರಸ್ತೆಯಿಂದ ಮಾರುತಿ ನಗರ ಬಡಾವಣೆಗೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಅಪರ ಜಿಲ್ಲಾಧಿಕಾರಿಗೆ ವಿನಂತಿಸಿದರು.
ಕ್ಲಿಕ್ ಮಾಡಿ ಓದಿ: ಹಿರಿಯೂರು ತಾಲೂಕಿನಲ್ಲಿ ನಾಳೆ ವಿದ್ಯುತ್ ವ್ಯತ್ಯಯ
ಈ ವೇಳೆ ವಿನಾಯಕ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷ ಡಿ.ದಿನೇಶ್, ಅಧ್ಯಕ್ಷ ಎ.ಎನ್.ತಿರುಮಲಯ್ಯ, ಉಪಾಧ್ಯಕ್ಷರುಗಳಾದ ಜಿ.ಬಿ.ನೂರುಲ್ಲಾ, ವೆಂಕಟೇಶ ರೆಡ್ಡಿ, ಕಾರ್ಯದರ್ಶಿ ಎನ್.ವೆಂಕಟೇಶ್, ಜಂಟಿ ಕಾರ್ಯದರ್ಶಿ ಕೆ.ಎಂ. ವಿನಾಯಕ, ಸಂಘಟನಾ ಕಾರ್ಯದರ್ಶಿ ಟಿ.ರಾಮಾಂಜನೇಯ ಹಾಗೂ ಪದಾಧಿಕಾರಿಗಳು ಇದ್ದರು.
