Connect with us

    ಮಾನವನನ್ನು ಜಾತಿಯಿಂದ ಗುರುತಿಸದೇ ಆತನ ಗುಣದಿಂದ ಗುರುತಿಸಬೇಕು | ಮಂಜುನಾಥ್ ಸ್ವಾಮಿ

    ಶ್ರೀ ಕಬೀರಾನಂದಾಶ್ರಮದಲ್ಲಿ 94ನೇ ಮಹಾ ಶಿವರಾತ್ರಿ ಮಹೋತ್ಸವದ ಎರಡನೇ ದಿನದಂದು ನಡೆದ ಕಾರ್ಯಕ್ರಮ

    ಮುಖ್ಯ ಸುದ್ದಿ

    ಮಾನವನನ್ನು ಜಾತಿಯಿಂದ ಗುರುತಿಸದೇ ಆತನ ಗುಣದಿಂದ ಗುರುತಿಸಬೇಕು | ಮಂಜುನಾಥ್ ಸ್ವಾಮಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 07 MARCH 2024

    ಚಿತ್ರದುರ್ಗ: ಇಂದಿನ ದಿನಮಾನದಲ್ಲಿ ಮಾನವನನ್ನು ಜಾತಿಯಿಂದ ಗುರುತಿಸದೇ ಆತನ ಗುಣದಿಂದ ಗುರುತಿಸುವ ಕೆಲಸವಾಗಬೇಕು, ಜಾತಿಯನ್ನು ನಾವು ಮಾಡಿಕೊಂಡಿದ್ದು ಗುಣ ದೇವರು ನೀಡಿದ್ದು ಎಂದು ವಿಹಿಂಪನ ದಕ್ಷಿಣ ಪ್ರಾಂತ್ಯದ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ್ ಸ್ವಾಮಿ ತಿಳಿಸಿದರು.

    ನಗರದ ಶ್ರೀ ಕಬೀರಾನಂದಾಶ್ರಮದ ವತಿಯಿಂದ ಶ್ರೀಮಠದ ಆವರಣದಲ್ಲಿ ನಿರ್ಮಿತವಾಗಿರುವ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಮಹಾ ಮಂಟಪದಲ್ಲಿ ನಡೆಯುತ್ತಿರುವ 94ನೇ ಮಹಾ ಶಿವರಾತ್ರಿ ಮಹೋತ್ಸವದ ಎರಡನೇ ದಿನದಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,

    ಇದನ್ನೂ ಓದಿ: ಹೆರಿಗೆ ವಿಚಾರದಲ್ಲಿ ಬಯಲಾಯ್ತು ಆತಂಕಕಾರಿ ಸಂಗತಿ | ಗರ್ಭಿಣಿಯರಿಗೆ ಕಾಡುತ್ತಿದೆ ಅನಿಮಿಯಾ ಸಮಸ್ಯೆ

    ಸಾಮಾಜಿಕ ಸಾಮರಸ್ಯವನ್ನು ಜಾಗೃತಿ ಮೂಡಿಸುವ ವಾತಾವರಣ ಇದಾಗಿದೆ. ಭಗವಂತನಿಗೆ ಯಾವುದೇ ರೀತಿಯ ಜಾತಿಯ ಸೂಂಕು ಇಲ್ಲ, ಆತನಿಗೆ ನಿರ್ಮಲವಾದ ಭಕ್ತಿ ಮಾತ್ರ ಮುಖ್ಯ. ಸಿದ್ದಾರೂಢ ಸಂಪ್ರಾದಾಯ ಜನತೆಯನ್ನು ಮೇಲೆತ್ತುವ ಸಂಪ್ರದಾಯವಾಗಿದೆ. ಜಾತಿ, ಮೇಲು, ಕೀಲು, ಆಸ್ಪøಶ್ಯತೆ ಸಮಾಜದ ಕಳಂಕವಾಗಿದೆ ಎಂದರು.

    ದೇವರನ್ನು ಜಾತಿಗೆ ಹೊಲಿಸುವುದು ಸರಿಯಲ್ಲ, ಶ್ರೀರಾಮ ಕ್ಷತ್ರೀಯ, ಕೃಷ್ಣ ಗೂಲ್ಲ ಸಮುದಾಯದವನು, ರಾಮಾಯಣ ಬರದೆ ವಾಲ್ಮೀಕಿ ನಾಯಕ ಜನಾಂಗದವರು, ಆದರೆ ಅವರು ಮಾಡುವ ಕೆಲಸಗಳು ಮಾತ್ರ ಎಲ್ಲರಿಗೂ ಅನ್ವಯವಾಗುವಂತಹದಾಗಿದೆ. ಆರಾಧನೆಯಲ್ಲಿ ಜಾತಿಗಿಂತ ಗುಣ ಮುಖ್ಯವಾಗಿದೆ. ಮಾನವ ಗುಣವನ್ನು ಅರಿತು ಆರಾಧಿಸುವುದು ಅಗತ್ಯವಾಗಿದೆ.

    ಇದನ್ನೂ ಓದಿ: ಕುಡಿಯುವ ನೀರಿನ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ

    ಸಂಸ್ಕøತ ಭಾಷೆ ಸಮಾಜದ ಭಾಷೆಯಾಗಿದೆ, ಇದರಲ್ಲಿ 1 ಲಕ್ಷ ಶ್ಲೋಕಗಳು ಇವೆ, ಜಾತಿಯಿಂದ ವ್ಯಕ್ತಿಯನ್ನು ನೋಡಬಾರದು ಆತನ ಗುಣದಿಂದ ಆತನನ್ನು ನೋಡಬೇಕಿದೆ, ಮಾನವ ಜಾತಿಯಿಂದ ಮಹಾನೀಯನಾಗದೆ ಗುಣದಿಂದ ಮಹಾನೀಯನಾಗಬೇಕಿದೆ,  ಧರ್ಮವನ್ನು ಉಳಿಸುವ ಅಗತ್ಯ ಎಲ್ಲಡೆ ಇದೆ, ಧರ್ಮದ ಕಡೆ ಜನತೆಯನ್ನು ವಾಲಿಸಬೇಕಿದೆ ಎಂದು ಹೇಳಿದರು.

    ನಮ್ಮದು ಶ್ರೇಷ್ಠವಾದ ಸಂಸ್ಕøತಿಯಾಗಿದೆ ಇದರ ಆರಾಧನೆಯಲ್ಲಿ ಕೀಳಿರಿಮೆಯನ್ನು ತೋರಬಾರದು, ಮಕ್ಕಳಿಗೆ ನಮ್ಮ ರಾಜ ಮಹಾರಾಜ ಶೌರ್ಯ, ಪರಾಕ್ರಮದ ಬಗ್ಗೆ ತಾಯಂದಿರು ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ಧರ್ಮ ಮತ್ತು ಸಂಸ್ಕøತಿ ಉಳಿಯಬೇಕಾದರೆ ಇಂತಹ ಕಾರ್ಯಕ್ರಮಗಳಿಗೆ ನಾವು ಬರಬೇಕು ನಮ್ಮ ಮಕ್ಕಳನ್ನು ಕರೆತರಬೇಕಿದೆ ನಮ್ಮಲ್ಲಿನ ಸಣ್ಣ-ಸಣ್ಣ ಆಚರಣೆಗಳನ್ನು ನಾವು ಸರಿಯಾದ ರೀತಿಯಲ್ಲಿ ನೋಡಬೇಕಿದೆ ಎಂದು ಮಂಜುನಾಥ್ ಸ್ವಾಮಿ ಸಲಹೆ ನೀಡಿದರು.

    ಇದನ್ನೂ ಓದಿ: ನಾಲ್ಕು ತಿಂಗಳಲ್ಲೇ ರೂ.38 ಲಕ್ಷ ಸಂಗ್ರಹ | ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ

    ಮಾಜಿ ಸಚಿವರಾದ ಹೆಚ್.ಆಂಜನೇಯ ಮಾತನಾಡಿ, ನಗರದ ಶ್ರೀ ಕಬೀರಾನಂದಾಶ್ರಮ ವತಿಯಿಂದ ನಡೆಯುತ್ತಿರುವ ಶಿವನಾಮ ಸಪ್ತಾಹ ಕಾರ್ಯಕ್ರಮವೂ ವರ್ಷದಿಂದ ವರ್ಷಕ್ಕೆ ವಿಜೃಂಭೀಸುತ್ತಿದೆ. ಆರ್ಥಿಕ ಸಹಾಯ ಜಾತಿಯ ಸೂಂಕು ಇಲ್ಲದ ಜಾತ್ಯಾತೀತ ಮಠವಾದ ಕಬೀರಾನಂದಾ ಆಶ್ರಮ ಎಲ್ಲರನ್ನು ಸಹಾ ಪ್ರೀತೀಸುತ್ತದೆ. ನೊಂದವರ ಕಣ್ಣೀರನ್ನು ಒರೆಸುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ. ಮಠದ ಪ್ರಗತಿಯಲ್ಲಿ ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಶ್ರೀಗಳು ಸಹಾಯ ಆಪಾರವಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಕಬೀರಾನಂದಾಶ್ರಮ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಮಕ್ಕಳಿಗೆ ಶಿಕ್ಷಣ, ವೃದ್ದಾಶ್ರಮ ಗೋವುಗಳ ಸಂರಕ್ಷಣೆಯನ್ನು ಮಾಡುವುದರ ಮೂಲಕ ಸಮಾಜಮುಖಿಯಾದ ಕೆಲಸವನ್ನು ಮಾಡುತ್ತಿದೆ. ಇದ್ದಲ್ಲದೆ ಮಠಕ್ಕೆ ಸಹಾಯವನ್ನು ಮಾಡಿದವರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾದ್ದು, ಶಿವರಾತ್ರಿ ಸಪ್ತಾಹವನ್ನು ಮಾಡುವುದರ ಮೂಲಕ ಭಕ್ತರಿಗೆ ಭಕ್ತಿಯಲ್ಲಿ ತೇಲುವಂತ ಕಾರ್ಯವನ್ನು ಮಾಡುತ್ತಿದೆ ಎಂದರು.

    ಇದನ್ನೂ ಓದಿ: ಚರ್ಮದ ಬ್ರಾಂಡೆಡ್ ಉತ್ಪನ್ನ | ರಿಯಾಯಿತಿ ದರದಲ್ಲಿ ಮಾರಾಟ

    ಕಾರ್ಯಕ್ರಮಕ್ಕೂ ಮುನ್ನಾ ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದ ಶ್ರೀಗಳು, ಬೀದರ್‍ನ ಮುಚಳಾಂಬದ ಶ್ರೀ ನಾಗಭೂಷಣ ಮಠದ ಶ್ರೀ ಪ್ರಣವಾನಂದ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಶ್ರೀಗಳು, ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ದೀಪವನ್ನು ಬೆಳಗುವುದರ ಮೂಲಕ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಇದನ್ನೂ ಓದಿ: ಮುರುಘಾ ಮಠ, ಎಸ್‍ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿ ಶಿವಯೋಗಿ ಕಳಸದ್

    ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ಕುಮಾರಗೌಡ, ಮಹಾರಾಷ್ಟ್ರದ ಸಂಗಧರಿಯ ಗುರುನಾಥ್ ಮಹಾರಾಜ್, ದಾವಣಗೆರೆ ಜಿ.ಪಂ. ಮಾಜಿ ಅಧ್ಯಕ್ಷರಾದ ವೈ.ರಾಮಪ್ಪ, 94ನೇ ಮಹಾ ಶಿವರಾತ್ರಿ ಸಪ್ತಾಹದ ಅಧ್ಯಕ್ಷರಾದ ಕೆ.ಸಿ.ನಾಗರಾಜು, ಉಪಾಧ್ಯಕ್ಷರಾದ ಸಿದ್ದವ್ವನಹಳ್ಳಿಯ ಪರಮೇಶ್, ವಿಜಯಕುಮಾರ್, ಕಸಾಪ ಅಧ್ಯಕ್ಷರಾದ ಶಿವಸ್ವಾಮಿ, ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top