ಹೊಸದುರ್ಗ
Hosdurga: ಬೆಲಗೂರು ವಸಿಷ್ಠಾಶ್ರಮದಲ್ಲಿ ವಿಜೃಂಭಣೆಯ ಹನುಮ ಜಯಂತಿ
CHITRADURGA NEWS | 14 DECEMBER 2024
ಹೊಸದುರ್ಗ: ತಾಲೂಕಿನ ಬೆಲಗೂರು ಗ್ರಾಮದ ವಸಿಷ್ಠಾಶ್ರಮದಲ್ಲಿ ಅವದೂತ ಸದ್ಗುರು ಶ್ರೀ ಬಿಂದುಮಾಧವ ಶರ್ಮ ಸ್ವಾಮಿಜಿ ಅವರ ಅಧಿಷ್ಠಾನ ಮಂದಿರದಲ್ಲಿ ಹನುಮಜಯಂತಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಕ್ಲಿಕ್ ಮಾಡಿ ಓದಿ: ಬೆಲಗೂರು ಶ್ರೀ ಆಂಜನೇಯ ಸ್ವಾಮಿ ರಥೋತ್ಸವ
ನೂರಾರು ಸಂಖ್ಯೆಯ ಭಕ್ತರು ಮಹೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಹನುಮಜಯಂತಿ ಮಹೋತ್ಸವದ ಆಂಗವಾಗಿ ವಸಿಷ್ಠಾಶ್ರಮದ ಅವದೂತ ಬಿಂದುಮಾಧವ ಶ್ರೀಗಳ ಅಧಿಷ್ಠಾನ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿವು. ವಸಿಷ್ಠಾಶ್ರಮದ ಧರ್ಮಾಧಿಕಾರಿ ಗುರುದತ್ತ ಶರ್ಮ ಗುರೂಜಿ ದಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಬಿಂದುಮಾಧವ ಶ್ರೀಗಳ ಅಧಿಷ್ಠಾನ ಮಂದಿರದಲ್ಲಿರುವ ಗುರುಗಳ ಸ್ಥಿರ ಹಾಗೂ ಚರ ಪಾದುಕೆಗಳಿಗೆ ರುದ್ರಾಭಿಷೇಕ, ಅಲಂಕಾರ ಪೂಜೆ, ಮಹಾ ನೈವೆದ್ಯ, ಅಷ್ಠೋತ್ತರ, ಷೋಡಶೋಪಚಾರ ಪೂಜೆ, ಮಹಾ ಮಂಗಳಾರತಿ ಮತ್ತಿತರ ವಿಶೇಷ ಕಾರ್ಯಕ್ರಮಗಳು ನಡೆದವು.
ಕ್ಲಿಕ್ ಮಾಡಿ ಓದಿ: ಒಂಟಿ ಮಹಿಳೆ ಮೇಲೆ ಅಟ್ಯಾಕ್ | ಚಿನ್ನದ ಸರ ಕಿತ್ತುಕೊಂಡು ಪರಾರಿ | ಮಹಿಳೆಯ ತಲೆಗೆ ರಾಡ್‍ನಿಂದ ಹಲ್ಲೆ
ಆಶ್ರಮದ ಪ್ರಧಾನ ದೈವ ಅಭಯಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಅಭಯಾಂಜನೇಯ ಸ್ವಾಮಿಯ ಮೂಲ ಶೀಲಾಮೂರ್ತಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯ ಭಕ್ತರು ಆಶ್ರಮಕ್ಕೆ ಬೇಟಿ ನೀಡಿ ಅಭಯಾಂಜನೇಯ ಹಾಗೂ ಅದಿಷ್ಠಾನ ಮಂದಿರದಲ್ಲಿ ಗುರುಗಳ ದರ್ಶನ ಪಡೆದರು.
ದತ್ತ ಜಯಂತಿ ಕಾರ್ಯಕ್ರಮ :
ವಸಿಷ್ಠಾಶ್ರಮದಲ್ಲಿ ಭಾನುವಾರ ಶ್ರೀ ದತ್ತ ಜಯಂತಿ ಕಾರ್ಯಕ್ರಮ ನೆರವೆರಲಿದೆ. ಗುರುಗಳ ಅಧಿಷ್ಠಾನ ಮಂದಿರ ಹಾಗೂ ಅಭಯಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೆರಲಿವೆ. ವಿಶೇಷ ದತ್ತ ಮೂಲಮಂತ್ರ ಹೋಮ, ಪೂರ್ಣಾಹುತಿ ಹಾಗೂ ಸಾದು ಪೂಜಾ ಕಾರ್ಯಕ್ರಮಗಳು ನೆರವೆರಲಿವೆ.