Connect with us

    ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಹುಂಡಿ ಎಣಿಕೆ | ಪರೀಕ್ಷೆ ಪಾಸು ಮಾಡಿಸು, ಕೊಟ್ಟ ಸಾಲು ವಾಪಾಸು ಕೊಡಿಸು | ಚೀಟಿ ಬರೆದು ಹಾಕಿದ ಭಕ್ತರು

    Nayakanahatty sri Thipperudraswamy

    ಮುಖ್ಯ ಸುದ್ದಿ

    ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಹುಂಡಿ ಎಣಿಕೆ | ಪರೀಕ್ಷೆ ಪಾಸು ಮಾಡಿಸು, ಕೊಟ್ಟ ಸಾಲು ವಾಪಾಸು ಕೊಡಿಸು | ಚೀಟಿ ಬರೆದು ಹಾಕಿದ ಭಕ್ತರು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 24 APRIL 2025

    ಚಿತ್ರದುರ್ಗ: ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಜಿಲ್ಲೆಯ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ಬಳಿಕ ಬುಧವಾರ ಹೊರಮಠ ಹಾಗೂ ಒಳಮಠದ ಹುಂಡಿ ಎಣಿಕೆ ಕಾರ್ಯ ನಡೆಯಿತು.

    ಜಾತ್ರೆ ನಂತರ ನಡೆದ ಎಣಿಕೆ ಕಾರ್ಯದಲ್ಲಿ ಬರೋಬ್ಬರಿ 66,29,155 ರೂ. ಸಂಗ್ರಹವಾಗಿತ್ತು.

    ಇದನ್ನೂ ಓದಿ: 61 ಸಾವಿರದತ್ತ ಅಡಿಕೆ ರೇಟ್‌

    ಇದರಲ್ಲಿ ಒಳಮಠದ ಹುಂಡಿಯಲ್ಲಿ 47,29,060 ರೂ. ಸಂಗ್ರಹವಾಗಿದ್ದರೆ, ಹೊರಮಠದ ಹುಂಡಿಗಳಲ್ಲಿ 35,05,500 ರೂ. ಸಂಗ್ರಹವಾಗಿತ್ತು.

    ಈ ಬಾರಿ ಜಾತ್ರೆಯಲ್ಲಿ 100 ರೂ. ಟಿಕೆಟ್‌ ನಿಗಧಿ ಮಾಡಿ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ನೇರ ದರ್ಶನದಿಂದ 6,75,000 ರೂ. ಸಂಗ್ರಹವಾಗಿದೆ.

    ಇದನ್ನೂ ಓದಿ: ಮೆಡಿಕಲ್ ಕಾಲೇಜು ನೇಮಕಾತಿ ಅಕ್ರಮ | ಸಚಿವರಿಗೆ ಪತ್ರ | ಕೆ.ಎಸ್.ನವೀನ್

    ಈ ಬಾರಿ ಇ-ಹುಂಡಿ ಸ್ಥಾಪಿಸಿ ಅಲ್ಲಲ್ಲಿ ಸ್ಕ್ಯಾನರ್‌ ಅಂಟಿಸಿದ್ದ ಪರಿಣಾಮ ಸಾಕಷ್ಟು ಭಕ್ತರು ನೇರವಾಗಿ ಮೊಬೈಲ್‌ ಮೂಲಕ ಇ-ಹುಂಡಿಗೆ ಹಣ ಹಾಕಿದ್ದಾರೆ. ಇದರ ಮೊತ್ತ 4,13,435 ರೂ.ಗಳಾಗಿದೆ.

    ಹುಂಡಿ ಎಣಿಕೆ ವೇಳೆ 2.26 ಲಕ್ಷ ರೂ.ಗಳಷ್ಟು ಚಿಲ್ಲರೆ ಹಣ ಸಿಕ್ಕಿದ್ದು, ವ್ಯಾಪಾರಿಗಳು ಬ್ಯಾಂಕುಗಳಿಂದ ಪಡೆದುಕೊಳ್ಳುತ್ತಿದ್ದರು. ಕೆನರಾ ಬ್ಯಾಂಕಿನಲ್ಲೂ ಈ ಚಿಲ್ಲರೆ ಸಿಗಲಿದೆ.

    ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ

    ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ

    ಇದನ್ನೂ ಓದಿ: ಸಿರಿಗೆರೆಯಲ್ಲಿ ಏ.25 ರಂದು ಕನ್ನಡ ಕರಡು ತಿದ್ದುವ ಕಾರ್ಯಾಗಾರ

    ಇದರೊಟ್ಟಿಗೆ ಹುಂಡಿಗಳಲ್ಲಿ ತೊಟ್ಟಿಲು, ಮೀಸೆ, ಕಣ್ಣು, ಕರಡಿಗೆ, ಬೆಳ್ಳಿ ನಾಣ್ಯಗಳು, ಸೊಂಟದ ಚೈನ್‌ ಸೇರಿದಂತೆ ನಾನಾ ರೀತಿಯ ವಸ್ತುಗಳನ್ನು ಹಾಕಿದ್ದರು.

    ವರ್ಷದಲ್ಲಿ ಮೂರು ಬಾರಿ ನಾಯಕನಹಟ್ಟಿಯಲ್ಲಿ ಹುಂಡಿ ಎಣಿಕೆ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಜಾತ್ರೆಗೆ ಮೊದಲು, ಜಾತ್ರೆಯ ನಂತರ ಹಾಗೂ ಶ್ರಾವಣ ಮಾಸ ಮುಗಿದ ಮೇಲೆ ಹುಂಡಿ ಎಣಿಕೆ ಮಾಡುತ್ತಿದ್ದು, ಇದರಿಂದ ಕೋಟ್ಯಾಂತರ ರೂ. ಹಣ ಸಂಗ್ರಹವಾಗುತ್ತಿದೆ.

    ಕೊಟ್ಟ ಸಾಲ ವಾಪಾಸು ಕೊಡಿಸಪ್ಪ:

    ಚಿತ್ರದುರ್ಗದ ವ್ಯಕ್ತಿಯೊಬ್ಬನಿಗೆ ೪೦ ಸಾವಿರ ಸಾಲ ಕೊಟ್ಟಿದ್ದೇನೆ. ವಾಪಾಸು ಕೊಡುತ್ತಿಲ್ಲ. ಅದನ್ನು ವಾಪಾಸು ಕೊಡುವಂತ ಬುದ್ದಿ ಕೊಡಪ್ಪ ಎಂದು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಗೆ ಚೀಟಿ ಬರೆದು ಹಾಕಿದ್ದು, ಅದು ಹುಂಡಿ ಎಣಿಕೆಯಲ್ಲಿ ಪತ್ತೆಯಾಗಿದೆ.

    ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?

    ರಾಹುಲ್‌ ಎನ್ನುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ತನ್ನ ಹಾಲ್‌ಟಿಕೇಟ್‌ ಸಂಖ್ಯೆ ಬರೆದು, ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡು ಎಂದು ದೇವರಲ್ಲಿ ಬೇಡಿಕೊಂಡಿದ್ದಾನೆ.

    ಮತ್ತೋರ್ವ ಭಕ್ತ, ದಾವಣಗೆರೆಯಲ್ಲಿ ಎರಡು ಸೈಟು, 4 ಎಕರೆ ತೋಟ ಕೊಡಿಸು, ಮಗಳ ಮದುವೆ ಮಾಡಿಸು ಎಂದು ಹಟ್ಟಿ ತಿಪ್ಪೇಶನ ಮೇಲೆ ಭಾರ ಹಾಕಿ ಚೀಟಿ ಬರೆದಿದ್ದು ಗಮನ ಸೆಳೆಯಿತು.

    ಇದನ್ನೂ ಓದಿ: ಕಾಶ್ಮೀರದ ಪಹಲ್‌ಗಾಮದಲ್ಲಿ ಉಗ್ರರ ದಾಳಿ | ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದಿಂದ ಸಹಾಯವಾಣಿ | ಇಲ್ಲಿದೆ ವಿವರ

    ಮಹಿಳೆಯೊಬ್ಬರು ನನಗೆ ಮುತ್ತೈದೆಯಾಗಿ ಸಾಯುವ ಭಾಗ್ಯ ಕೊಡಪ್ಪ ಎಂದರೆ, ಮತ್ತೋರ್ವ ಭಕ್ತ ಮಕ್ಕಳಿಗೆ ಒಳ್ಳೆಯ ಬುದ್ದಿ, ಶಿಕ್ಷಣ ಕೊಡುವಂತೆ ಪ್ರಾರ್ಥಿಸಿ ಚೀಟಿ ಬರೆದು ಹುಂಡಿಗೆ ಹಾಕಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top