CHITRADURGA NEWS | 22 APRIL 2025
ಚಿತ್ರದುರ್ಗ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೇ.100 ರಷ್ಟು ಕರ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕರ ವಸೂಲಿಗಾರರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಸನ್ಮಾನಿಸಿದರು.
Also Read: ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ | ಯಾವ ಯಾವ ದಾಖಲಾತಿ ಸಲ್ಲಿಸಬೇಕು?
ನಂತರ ಮಾತನಾಡಿದ ಸಿಇ, ವ್ಯವಸ್ಥಿತವಾಗಿ ಯೋಜನೆ ರೂಪಿಸಿಕೊಳ್ಳುವ ಮೂಲಕ ಶೇ.100ರಷ್ಟು ಕರ ವಸೂಲಾತಿಯಲ್ಲಿ ಸಾಧನೆ ಮಾಡಬಹುದಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕರ ವಸೂಲಾತಿ ಮಾಡಬೇಕಿದೆ. ಪಂಚಾಯತಿಗಳ ಸಮಗ್ರ ಅಭಿವೃದ್ಧಿಗೆ ಕರ ವಸೂಲಿ ಅತ್ಯಗತ್ಯ ಎಂದು ಹೇಳಿದರು.
ಕರ ವಸೂಲಾತಿ ಅಂದೋಲನ, ಜಾಗೃತಿ, ಸಮನ್ವಯತೆ, ಯೋಜಿತ ಯೋಜನೆ, ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೇ.100 ರಷ್ಟು ಕರ ವಸೂಲಾತಿ ಮಾಡಿರುವುದು ಉತ್ತಮ ಬೆಳೆವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ತೆರಿಗೆಯಿಂದ ಸಂಗ್ರಹಿಸುವ ಆದಾಯವನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಂಬಳ, ಗ್ರಾಮದ ಅಭಿವೃದ್ಧಿಗೆ ಮತ್ತು ಅಲ್ಲಿನ ನಿವಾಸಿಗಳ ಮೂಲಭೂತ ಸೌಕರ್ಯ ಒದಗಿಸಲು ಬಳಸಲಾಗುತ್ತಿದೆ ಎಂದು ಹೇಳಿದರು.
Also Read: ಕೃಷಿಯಲ್ಲಿ ಜೈವಿಕ ಇದ್ದಿಲು | ಗೂಗಲ್ ಮೀಟ್ ಕಾರ್ಯಕ್ರಮ | ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ
ಚಿತ್ರದುರ್ಗ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಮಾತನಾಡಿ, ಪ್ರತಿನಿತ್ಯವೂ ಜಿ.ಪಂ ಸಿಇಒ, ಮುಖ್ಯ ಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿಗಳು ಸಭೆ, ವಿಡಿಯೋ ಕಾನ್ಪ್‍ರೆನ್ಸ್‍ನಲ್ಲಿ ಚರ್ಚಿಸಿ, ಅವರು ನೀಡಿರುವ ಮಾರ್ಗದರ್ಶನದಂತೆ ಕರ ವಸೂಲಾತಿ ಅಭಿಯಾನ ನಡೆಸಿ, ಕರ ವಸೂಲಾತಿಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು.
ಪ್ರಸಕ್ತ ವರ್ಷ ಶೇ.100ರಷ್ಟು ಕರವಸೂಲಾತಿ ಸಾಧನೆಗೆ ಈಗಾಗಲೇ ಯೋಜನೆ ರೂಪಿಸಲಾಗಿದ್ದು, ಕಾರ್ಯಗತಗೊಳಿಸಲಾಗುತ್ತಿದೆ. ಶೇ.100ರಷ್ಟು ಕರ ವಸೂಲಾತಿಗೆ ಕ್ರಮ ವಹಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಹೆಚ್.ಯರ್ರಿಸ್ವಾಮಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಶೇ.100ರಷ್ಟು ಕರ ವಸೂಲಾತಿ ಸಾಧನೆ ತೋರಿದ ಇಂಗಳದಾಳ ಗ್ರಾಮ ಪಂಚಾಯಿತಿ ಪಿಡಿಒ ವಿದ್ಯಾಶ್ರೀ, ಕರವಸೂಲಿಗಾರ ಹೆಚ್.ನಾಗರಾಜ್, ಮಾಡನಾಯಕನಹಳ್ಳಿ ಪಿಡಿಒ ಟಿ.ಲಲಿತಾ, ಕರವಸೂಲಿಗಾರ ಎಸ್.ಎನ್.ಮಲ್ಲಿಕಾ, ಮಲ್ಲಾಡಿಹಳ್ಳಿ ಪಿಡಿಒ ಈ.ಚೂಡಾಮಣಿ ಕರವಸೂಲಿಗಾರ ಎಂ.ನವೀನ್ ಕುಮಾರ್, ಗುಂಡೇರಿ ಪಿಡಿಒ ಎಸ್.ಉಷಾ, ಕರವಸೂಲಿಗಾರ ಜಿ.ಕೆ.ಶಿವಕುಮಾರ್, ಮತ್ತೊಡು ಪಿಡಿಒ ಜಿ.ಶೇಖರಪ್ಪ, ಕರವಸೂಲಿಗಾರ ಎಸ್.ಈಶ್ವರಪ್ಪ, ಲಕ್ಕಿಹಳ್ಳಿ ಪಿಡಿಒ ಎನ್.ಹನುಮಂತಪ್ಪ, ಕರವಸೂಲಿಗಾರ ಕುಮಾರ್, ಕಂಗುವಳ್ಳಿ ಪಿಡಿಒ ಎಸ್.ಗೋವಿಂದ ರಾಜು, ಕರವಸೂಲಿಗಾರ ಟಿ.ಧನಂಜಯ, ಬೋಕಿಕೆರೆ ಪಿಡಿಒ ಬಿ.ಆರ್.ಜಯಣ್ಣ, ಕರವಸೂಲಿಗಾರ ಟಿ.ಮಂಜುನಾಥ್, ದೊಡ್ಡ ಉಳ್ಳಾರ್ತಿ ಪಿಡಿಒ ಸುರೇಶ್, ಕರವಸೂಲಿಗಾರ ಬಿ.ಜಯರಾಮ್, ಅಬ್ಬೇನಹಳ್ಳಿ ಪಿಡಿಒ ಎಂ.ಮೋಹನ್ ದಾಸ್, ಕರವಸೂಲಿಗಾರ ಶೇಖರಪ್ಪ ಹಾಗೂ 2024-25ನೇ ಸಾಲಿನಲ್ಲಿ ಕರವಸೂಲಿಯಲ್ಲಿ ಜಿಲ್ಲೆಯಲ್ಲಿ ಶೇ.77.58 ರಷ್ಟು ಸಾಧನೆ ಮಾಡಿರುವ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಹಾಗೂ ನರೇಗಾ ಸಹಾಯಕ ನಿರ್ದೇಶಕ ಹೆಚ್.ಯರ್ರಿಸ್ವಾಮಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು.
Also Read: ಈಜಲು ಹೋಗಿದ್ದ ಬಾಲಕ ಸಾವು | ಮೃತ ದೇಹಕ್ಕೆ 6 ತಾಸು ಹುಡುಕಾಟ
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ತಿಮ್ಮಪ್ಪ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಮುಖ್ಯ ಲೆಕ್ಕಾಧಿಕಾರಿ ಮಧು, ಜಿಲ್ಲಾ ಯೋಜನಾ ವ್ಯವಸ್ಥಾಪಕ (ಇ-ಆಡಳಿತ) ಹೆಚ್.ಶಶಿಧರ್, ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕಿ ಸೈಯದ್ ಪಿಜಾ ಏ ಇರಮ್, ನರೇಗಾ ಶಾಖೆಯ ವ್ಯವಸ್ಥಾಪಕ ಸುನೀಲ್, ಜಿಲ್ಲಾ ನರೇಗಾ ಎಡಿಪಿಸಿ ಮೋಹನ್, ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ. ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
