ನಿಧನವಾರ್ತೆ
ನಿವೃತ್ತ ಇಂಜಿನಿಯರ್ ಕೆ.ಸಿ.ನಿಂಗಪ್ಪ ನಿಧನ

CHITRADURGA NEWS | 14 APRIL 2025
ಹೊಸದುರ್ಗ: ನಿವೃತ್ತ ಇಂಜಿನಿಯರ್, ತಾಲೂಕು ಪಂಚಾಯಿತಿ ಇಓ ಆಗಿದ್ದ ಕೆ.ಸಿ.ನಿಂಗಪ್ಪ ನಿಧನರಾಗಿದ್ದಾರೆ.
Also Read: ನಿಮ್ಮ ಮಗುವಿಗೆ ಆಟಿಸಂ ಸಮಸ್ಯೆ ಇದೇ ಎಂಬುದನ್ನು ಈ ಲಕ್ಷಣಗಳ ಮೂಲಕ ತಿಳಿದುಕೊಳ್ಳಿ
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ (ಇಂದು) ಬೆಳಗಿನ ಜಾವ ನಿಧನರಾಗಿದ್ದಾರೆ.
ಮೃತರು, ಪತ್ನಿ, SJM ಕಾನೂನು ಕಾಲೇಜು ಪ್ರಾಚಾರ್ಯರಾಗಿದ್ದ ವಿಶ್ವನಾಥ್ ಸೇರಿದಂತೆ ಇಬ್ಬರು, ಪುತ್ರರು, ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಹೊಸದುರ್ಗ ತಾಲೂಕು ಕೆಂಕೆರೆ ಮೂಲದ ಕೆ.ಸಿ.ನಿಂಗಪ್ಪ, ಬಿಜಾಪುರದಲ್ಲಿ ಎಇಇ, ಚಿತ್ರದುರ್ಗ ನಗರಸಭೆ ಮುಖ್ಯಾಧಿಕಾರಿ, ಮೊಳಕಾಲ್ಮೂರು ತಾಲೂಕಿನಲ್ಲಿ ರಾಯದುರ್ಗ ಪ್ರಾಜೆಕ್ಟ್ ಇಂಜಿನಿಯರ್, ಭದ್ರಾವತಿ, ಹಿರಿಯೂರು ಮತ್ತಿತರೆಡೆಗಳಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
Also Read: ಬೇಸಿಗೆಯಲ್ಲಿ ತ್ವಚೆಯ ಕಾಂತಿ ಹೆಚ್ಚಾಗಲು ಮಲಗುವ ಮೊದಲು ಇವೆರಡನ್ನು ಮುಖಕ್ಕೆ ಹಚ್ಚಿ
ಬುಧವಾರ ಅಂತ್ಯಕ್ರಿಯೆ ನಡೆಯಲಿದ್ದು, ಏ.14 ಸೋಮವಾರ ಸಂಜೆ 5 ಗಂಟೆಯಿಂದ ಹೊಸದುರ್ಗ ವಿದ್ಯಾನಗರದ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹೊಸದುರ್ಗ ತಾಲೂಕು ಕುಂಚಿಟಿಗ ಸಮಾಜದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಕೆ.ಸಿ.ನಿಂಗಪ್ಪ ಅವರ ನಿಧನಕ್ಕೆ ಹೊಸದುರ್ಗ ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
