ಮುಖ್ಯ ಸುದ್ದಿ
ಕ್ರೀಡಾಂಗಣದಲ್ಲಿ ಬೇಸಿಗೆ ಶಿಬಿರಕ್ಕೆ ಅನುಮತಿ ಕಡ್ಡಾಯ

CHITRADURGA NEWS | 05 MARCH 2025
ಚಿತ್ರದುರ್ಗ: ಜಿಲ್ಲಾ ಕ್ರೀಡಾಂಗಣದಲ್ಲಿ 2024-25ನೇ ಸಾಲಿನಲ್ಲಿ ಬೇಸಿಗೆ ತರಬೇತಿ ಶಿಬಿರ ಆಯೋಜಿಸಲು ಇಚ್ಚಿಸುವವರು ಮುಂಗಡವಾಗಿ ಸಹಾಯಕ ನಿರ್ದೇಶಕರಿಗೆ ಯಾವ ದಿನಾಂಕದಿಂದ ಪ್ರಾರಂಭಿಸಲಾಗುವುದು, ತರಬೇತುದಾರರ ಹೆಸರು, ತರಬೇತುದಾರರ ವಿದ್ಯಾರ್ಹತೆ, ಯಾವ ಕ್ರೀಡೆಯ ತರಬೇತಿ ಶಿಬಿರ ಹಾಗೂ ಎಷ್ಟು ಮಕ್ಕಳು ಭಾಗವಹಿಸುವವರು ಎಂಬುದಾಗಿ ಪೂರ್ಣ ವಿವರ ಒಳಗೊಂಡಂತೆ ಪತ್ರ ನೀಡಿ, ಸಹಾಯಕ ನಿರ್ದೇಶಕರಿಂದ ಪೂರ್ವಾನುಮತಿ ಪಡೆದು ಬೇಸಿಗೆ ತರಬೇತಿ ಶಿಬಿರ ನಡೆಸಲು ಕ್ರಮವಹಿಸುವುದು.
Also Read: ಅಡಿಕೆ ತೋಟದಲ್ಲಿದ್ದ ಕುರಿಗಳ ಮೇಲೆ ಚಿರತೆ ದಾಳಿ | ಹತ್ತು ಕುರಿ ಸಾವು
ಪೂರ್ವಾನುಮತಿ ಪಡೆಯದೇ ಬೇಸಿಗೆ ತರಬೇತಿ ಶಿಬಿರ ನಡೆಸಲು ಯಾವುದೇ ಅವಕಾಶ ಇರುವುದಿಲ್ಲ. ಆದ್ದರಿಂದ ಬೇಸಿಗೆ ತರಬೇತಿ ಶಿಬಿರ ನಡೆಸಲು ಇಚ್ಚಿಸುವವರು ಮಾರ್ಚ್ 20 ರೊಳಗಾಗಿ ಕಚೇರಿಗೆ ಪತ್ರ ನೀಡುವುದು. ದಿನಾಂಕ ಮುಗಿದ ನಂತರ ಬಂದು ಮನವಿ ಮಾಡಲು ಅವಕಾಶ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08194-235635 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
