Connect with us

    ಸರಿಗಮ ಸಂಗೀತ ನಾಟಕೋತ್ಸವ | ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟನೆ

    ಮುಖ್ಯ ಸುದ್ದಿ

    ಸರಿಗಮ ಸಂಗೀತ ನಾಟಕೋತ್ಸವ | ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 22 FEBRUARY 2025

    ಚಿತ್ರದುರ್ಗ: ಗಾನಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳವರ ಜಯಂತ್ಯೋತ್ಸವದ ಅಂಗವಾಗಿ ಪಂಚಮರತ್ನ ಸಂಗೀತ ಸಂಸ್ಥೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಎರಡು ದಿನಗಳ ಕಾಲ ನಡೆಯುವ ಸರಿಗಮ ಸಂಗೀತ ನಾಟಕೋತ್ಸವನ್ನು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು.

    Also Read: ಮೇ.10ರ ಒಳಗಾಗಿ ಇ-ಖಾತೆ ಪಡೆಯಿರಿ | ಜಿಲ್ಲಾಧಿಕಾರಿ ವೆಂಕಟೇಶ್

    ನಂತರ ಮಾತನಾಡಿದ ಶ್ರೀಗಳು, ಸಾಹಿತ್ಯ ಲೋಕ ಅನಾವರಣಗೊಳ್ಳದಿದ್ದರೆ ಬದುಕು ನಿರರ್ಥಕ. ಸಂಗೀತ ಪರಂಪರೆಯಲ್ಲಿ ಪಂಡಿತ ಪಂಚಾಕ್ಷರ ಗವಾಯಿಗಳು ಕ್ರಾಂತಿ ಮಾಡಿದ್ದರಿಂದ ಇಡೀ ವಿಶ್ವವೇ ಆಶ್ರಮದ ಕಡೆ ತಿರುಗಿ ನೋಡುವಂತಾಯಿತು.

    ಕಣ್ಣಿಲ್ಲದವರು ಕುರುಡರಲ್ಲ, ಕರುಣೆಯಿಲ್ಲದವರು ನಿಜವಾಗಿಯೂ ಕುರುಡರು. ಸಾಹಿತ್ಯ, ಸಂಗೀತ, ಕಲೆ, ನಾಟಕ ಪರಂಪರೆಯನ್ನು ಉಳಿಸಿಕೊಂಡಿದ್ದೇವೆಯಾ ಎಂದು ಪ್ರತಿಯೊಬ್ಬರು ಚಿಂತಿಸಬೇಕಿದೆ. ಸಾಹಿತ್ಯಕ್ಕೆ ನಿಜವಾದ ಜೀವ ಬರುವುದು ಸಂಗೀತದಿಂದ, ಸಂಗೀತವನ್ನು ಬದುಕಿನ ಸುತ್ತ ಅಳವಡಿಸಿಕೊಳ್ಳಬೇಕು.

     ಪ್ರತಿ ವರ್ಷ ಮುರುಘಾಮಠದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರತಿದಿನವೂ 18 ನಿಮಿಷಗಳ ಕಾಲ ಸಂಗೀತ ಕಾರ್ಯಕ್ರಮ ನಡೆಸಿಕೊಡಿ. ಗೌರವಾರ್ಥವಾಗಿ 50 ಸಾವಿರ ರೂ.ಗಳನ್ನು ನೀಡುತ್ತೇವೆ. ಇದು ಕಲಾವಿದರಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

    Also Read: ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?

    ಗುರು ಪರಂಪರೆ, ಸಂಗೀತ ಪರಂಪರೆಯನ್ನು ಬೆಳೆಸಬೇಕು. ಜಯದೇವ ಜಗದ್ಗುರುಗಳು ವಿದ್ಯಾರ್ಥಿಗಳನ್ನು ದೇವರೆಂದು ಭಾವಿಸಿ ರಾಜ್ಯಾದ್ಯಂತ ವಿದ್ಯಾರ್ಥಿಗಳ ತಂಡ ಕಟ್ಟಿದ್ದರು. ಅಂದಿನ ಮೈಸೂರು ಮಹಾರಾಜರು ಜಯದೇವ ಜಗದ್ಗುರುಗಳನ್ನು ಸನ್ಮಾನಿಸಿದರೆಂದು ಸ್ಮರಿಸಿಕೊಂಡರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಭಾರತ ದೇಶದ ಚರಿತ್ರೆಯಲ್ಲಿ ಗುರು ಪರಂಪರೆಗೆ ದೊಡ್ಡ ಇತಿಹಾಸವಿದೆ.

    ಮಹಾಭಾರತದಲ್ಲಿ ದ್ರೋಣಾಚಾರ್ಯ-ಏಕಲವ್ಯ, ಗುರುಗೋವಿಂದಭಟ್ಟ-ಸಂತಶಿಶುನಾಳ ಷರೀಪರ ಗುರುಪರಂಪರೆಯಿದೆ. ಕರ್ನಾಟಕದ ಕರಾವಳಿಯಲ್ಲಿ ಯಕ್ಷಗಾನ ಪ್ರಸಿದ್ದಿ ಪಡೆದಿದೆ. ಸಾಂಸ್ಕೃತಿಕ ವಾತಾವರಣದಿಂದ ಆರೋಗ್ಯ ಪೂರ್ಣ ಮನಸ್ಸುಗಳನ್ನು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

    ಸರಿಗಮ ಸಂಗೀತ ನಾಟಕೋತ್ಸವ ಸಮಿತಿ ಅಧ್ಯಕ್ಷ ಸತ್ಯನಾರಾಯಣರೆಡ್ಡಿ ಮಾತನಾಡಿ, ಬುದ್ದ, ಬಸವ, ಗಾಂಧಿ, ಅಂಬೇಡ್ಕರ್ ಈ ದೇಶದ ಮಹಾ ಪುರಷರು. ಅವರುಗಳ ತತ್ವ, ಸಿದ್ದಾಂತ, ಹಾದಿಯಲ್ಲಿ ಎಲ್ಲರೂ ಸಾಗೋಣ. ಸಂಗೀತ ನಾಟಕೋತ್ಸವವನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದಾಗ ಕಲಾವಿದರು ಉಳಿಯುತ್ತಾರೆಂದು ಹೇಳಿದರು.

    ಉದ್ಯಮಿ ಸೈಟ್ ಬಾಬಣ್ಣ, ಸರಿಗಮ ಸಂಗೀತ ನಾಟಕೋತ್ಸವ ಸಮಿತಿ ಕಾರ್ಯದರ್ಶಿ ಸುಜೀತ ಕುಲಕರ್ಣಿ ಮಾತನಾಡಿದರು.

    Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ? 

    ಈ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ರೈತ ಮುಖಂಡ ಕೆ.ಪಿ.ಭೂತಯ್ಯ ಅವರನ್ನು ಸನ್ಮಾನಿಸಲಾಯಿತು.

    ಈ ಸಂದರ್ಭದಲ್ಲಿ ಸರಿಗಮ ಸಂಗೀತ ನಾಟಕೋತ್ಸವ ಸಮಿತಿ ಉಪಾಧ್ಯಕ್ಷೆ ಡಾ.ಟಿ.ಭವ್ಯರಾಣಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top