Connect with us

    ಬಸವೇಶ್ವರ ಮೆಡಿಕಲ್ ಕಾಲೇಜಿನಿಂದ ಕ್ಯಾನ್ಸರ್ ಕುರಿತು ಕಾರ್ಯಾಗಾರ | ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟನೆ

    ಮುಖ್ಯ ಸುದ್ದಿ

    ಬಸವೇಶ್ವರ ಮೆಡಿಕಲ್ ಕಾಲೇಜಿನಿಂದ ಕ್ಯಾನ್ಸರ್ ಕುರಿತು ಕಾರ್ಯಾಗಾರ | ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟನೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 17 FEBRUARY 2025

    ಚಿತ್ರದುರ್ಗ: ಮುರುಘಾಮಠದ ಅನುಭವ ಮಂಟಪದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ, ಜಿಲ್ಲಾ ಪ್ರಸೂತಿ, ಸ್ತ್ರೀ ರೋಗ ವೈದ್ಯರ ಸಂಘ ಸಹಯೋಗದಲ್ಲಿ ನಡೆದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಜಾಗೃತಿ ಅಭಿಯಾನ ಹಾಗೂ ಮುಂಜಾಗ್ರತ ಕಾರ್ಯಕ್ರಮಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಉದ್ಘಾಟಿಸಿದರು.

    Also Read: 34 ಲಕ್ಷ ರೂ. ವಂಚಿಸಿದ್ದ ಮೂವರು ಆರೋಪಿಗಳ ಬಂಧನ | ಸೈಬರ್ ಪೊಲೀಸ್ ಕಾರ್ಯಚರಣೆ

    ನಂತರ ಮಾತನಾಡಿದ ಶ್ರೀಗಳು, ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಎಲ್ಲ ರಂಗದಲ್ಲಿ ಗುರುತಿಸಿಕೊಳ್ಳುತ್ತಿರುವುದು ಅಭಿಮಾನದ ಸಂಗತಿಯಾದರೂ ಶೋಷಣೆಗೆ ಒಳಗಾಗುತ್ತಿದ್ದಾಳೆ. ಒತ್ತಡಕ್ಕೆ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾಳೆ. ಮಹಿಳೆಯರ ಸಮರ್ಪಣಾ ಭಾವ ದೊಡ್ಡದು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದು ಅರ್ಥಪೂರ್ಣವಾದ ಕೆಲಸ. ಮಹಿಳೆಯ ಆರೋಗ್ಯವಂತ ಬದುಕಿನ ಬಗ್ಗೆ ಆಲೋಚಿಸಬೇಕು ಎಂದು ಹೇಳಿದರು.

    ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ವಾಮಿಗಳು ಕಟ್ಟಿ ಬೆಳೆಸಿದ್ದಾರೆ. ಅನೇಕ ಸಾಮಾಜಿಕ ಜವಾಬ್ದಾರಿಯನ್ನು ಶ್ರೀಮಠ ಮಾಡುತ್ತಿದೆ. 25ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಆಸ್ಪತ್ರೆಯ ಅವಶ್ಯಕತೆಯಿತ್ತು. ಸದ್ಯ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಉಚಿತವಾಗಿ ಹೆರಿಗೆ, ಔಷೊಧೋಪಚಾರ, ತಪಾಸಣೆ ಮಾಡಲಾಗುತ್ತದೆ. ನಮ್ಮ ಸಂಸ್ಥೆ ಬಡವರ, ಮಧ್ಯಮ ವರ್ಗದವರ ಆಶಾಕಿರಣವಾಗಿ ಕೆಲಸ ಮಾಡುತ್ತಿದೆ ಎಂದರು.

    Also Read: ಮಾರ್ಚ್ 16 | ನಾಯಕನಹಟ್ಟಿ ಜಾತ್ರೆ | ಅಗತ್ಯ ಸಿದ್ಧತೆಗೆ ಸಚಿವ ಸುಧಾಕರ್ ಸೂಚನೆ

    ಜಿಲ್ಲಾ ಸರ್ಜನ್ ಡಾ.ರವೀಂದ್ರ ಮಾತನಾಡಿ, ಆಶಾ ಕಾರ್ಯಕರ್ತರಿಗೆ ಅನೇಕ ಜವಾಬ್ದಾರಿಗಳಿರುತ್ತವೆ, ಸ್ವಚ್ಛತೆ ಬಗ್ಗೆ ನಿಮಗೆ ಅರಿವು ಇರುತ್ತದೆ, ನೀವು ಜನರಲ್ಲಿ ಜಾಗೃತಿ ಮೂಡಿಸಬೇಕು. ಸಭೆ ಸಮಾರಂಭಗಳಲ್ಲಿ ತಾವು ಕಲಿತದ್ದನ್ನು ತಿಳಿಹೇಳಬೇಕೆಂದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ ಕಂಬಾಳಿ ಮಠ ಮಾತನಾಡಿ, ಪ್ರತಿ ಮನೆಗೆ ಜಿಲ್ಲೆಯಾದ್ಯಂತ ಭೇಟಿ ಮಾಡಿ ರಕ್ತದೊತ್ತಡ, ಸಕ್ಕರೆಕಾಯಿಲೆ, ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

    ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ಮಟ್ಟದ ಆಸ್ಪತ್ರೆಗೆ ಕಳುಹಿಸಲು ಪ್ರಾರಂಭಿಸುತ್ತೇವೆ. ಸ್ತನ, ಗರ್ಭ ಮತ್ತು ಬಾಯಿ ಗಂಟಲು ಕ್ಯಾನ್ಸರ್‌ಗಳು ಮೂರು ರೀತಿ ಇರುತ್ತವೆ. ಜನರ ಹತ್ತಿರ ಹೋಗಿ ಆರೋಗ್ಯ ವಿಚಾರಿಸಿ ಕ್ಯಾನ್ಸರ್ ರೋಗ ಲಕ್ಷಣಗಳು ಇದ್ದರೆ ಆಪರೇಷನ್ ಮಾಡಲಾಗುತ್ತದೆ.

    Also Read: ರಾತ್ರಿ ಸಿಂಗಲ್ ಫೇಸ್ ಕರೆಂಟ್ | ಕೃಷಿ ಪಂಪ್ ಸೆಟ್ ಬಳಸದಂತೆ ಬೆಸ್ಕಾಂ ಮನವಿ 

    ಈ ಮೊದಲು ಶಿವಮೊಗ್ಗ, ದಾವಣಗೆರೆಯಲ್ಲಿ ಮಾತ್ರ ಇತ್ತು. ಇನ್ನೆರಡು ತಿಂಗಳಲ್ಲಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್ ಆಸ್ಪತ್ರೆ (ಚಿಕಿತ್ಸಾ ಘಟಕ) ಬರುತ್ತಿದೆ. ಅದು ಸುಸಜ್ಜಿತವಾಗಿರುತ್ತದೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

    ಈಗಾಗಲೇ ಪ್ರತಿ ಹಳ್ಳಿಗೆ ಸಕ್ಕರೆ ಕಾಯಿಲೆ, ಬಿ.ಪಿ. ಮಾತ್ರೆಗಳನ್ನು ಕಳುಹಿಸಿದ್ದೆವೆ. ಮಹಿಳೆಯರ ಕ್ಯಾನ್ಸರ್ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟದ ಕೆಲಸ. ದೂರದ ಊರುಗಳಿಗೆ ಆಶಾ ಕಾರ್ಯಕರ್ತೆಯರು ಹೋಗಿ ಸಂಬಂಧಿಸಿದ ರೋಗಿಯನ್ನು ಗುಣಮುಖಪಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

    ಕಾಲೇಜಿನ ಡೀನ್ ಡಾ.ಜಿ.ಪ್ರಶಾಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಡಾ.ಭಾರತಿ, ಡಾ.ಅಭಿನವ್ ಮಾತನಾಡಿದರು.

    Also Read: Kannada Novel: 20. ಕಾಮಜ್ಜ ಒಡ್ಡು ಕಟ್ಟಿದ

    ಡಾ.ರಾಜೇಶ್, ಡಾ.ಪಾಲಾಕ್ಷಪ್ಪ, ಡಾ. ನಾರಾಯಣಮೂರ್ತಿ, ಡಾ.ಗೀತಾ ಪಾಲಾಕ್ಷಪ್ಪ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top