Connect with us

    JDS ಸದಸ್ಯತ್ವ ನೋಂದಣಿಗೆ ತುರುವೇಕೆರೆ ಶಾಸಕ ಕೃಷ್ಣಪ್ಪ ಚಾಲನೆ

    ಮುಖ್ಯ ಸುದ್ದಿ

    JDS ಸದಸ್ಯತ್ವ ನೋಂದಣಿಗೆ ತುರುವೇಕೆರೆ ಶಾಸಕ ಕೃಷ್ಣಪ್ಪ ಚಾಲನೆ

    https://chat.whatsapp.com/Jhg5KALiCFpDwME3sTUl7x

    CHITRADURG NEWS | 11 FEBRUARY 2025

    ಚಿತ್ರದುರ್ಗ: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ತುರುವೇಕೆರೆ ಶಾಸಕ ಕೃಷ್ಣಪ್ಪ ಚಾಲನೆ ನೀಡಿದರು.

    Also Read: ನಿಧಿ ಆಸೆಗೆ ನರಬಲಿ | ಜಿಲ್ಲೆಯಲ್ಲಿ ನಡೆಯಿತು ಘೋರ ಕೃತ್ಯ

    ನಂತರ ಮಾತನಾಡಿದ ತುರುವೇಕೆರೆ ಶಾಸಕ ಕೃಷ್ಣಪ್ಪ, ಯಾವುದೇ ಪಕ್ಷ ಸ್ಥಿರವಾಗಿ ನಿಲ್ಲಲು ಪಕ್ಷದ ಸದಸ್ಯತ್ವ ಅತಿ ಮುಖ್ಯವಾಗಿದೆ. ಸದಸ್ಯತ್ವ ಹೆಚ್ಚಾದಷ್ಟು ಪಕ್ಷ ಸಧೃಢವಾಗುತ್ತದೆ. ಈ ಹಿನ್ನಲೆಯಲ್ಲಿ ಪಕ್ಷದ ಸದಸ್ಯತ್ವಕ್ಕೆ ಹೆಚ್ಚಿನ ಒತ್ತು ನೀಡುಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

    ಜನರ ಹತ್ತಿರ ಹೆಚ್ಚಿನ ಒಡನಾಟ ಇದ್ದವರು ಪಕ್ಷದ ಸದಸ್ಯತ್ವಕ್ಕೆ ಹೆಚ್ಚಿನ ಹೊಣೆಯನ್ನು ಹೊರಬೇಕಿದೆ. ಚುನಾವಣೆಯ ಸಮಯದಲ್ಲಿ ಹೊರಗಿನಿಂದ ತರುವದನ್ನು ಬಿಡಿ, ನಿಮ್ಮಲ್ಲೆ ಪಕ್ಷದ ಅಭ್ಯರ್ಥಿಗಳಿದ್ದರೆ ಹೂರಗಡೆಯಿಂದ ತರುವ ಪ್ರಯತ್ನ ಇರುವುದಿಲ್ಲ. ಪಕ್ಷ ಟಿಕೆಟ್ ನೀಡದಿದ್ದರೂ ಸಹಾ ಪಕ್ಷೇತರನಾಗಿ ಸ್ಪರ್ದೆ ಮಾಡುವ ಛಲ ಇರಬೇಕು ಅಗಾ ಪಕ್ಷದವರೇ ನಿಮ್ಮನ್ನು ಕರೆದು ಟಿಕೆಟ್ ನೀಡುತ್ತಾರೆ.

    ಅಭ್ಯರ್ಥಿಯಾದವರು ಹೋರಾಟ ಮಾಡಬೇಕು, ಇಂದಿನ ಸಮಯದಲ್ಲಿ ಹಲವಾರು ಸಮಸ್ಯೆಗಳು ಇವೆ, ಅವುಗಳ ವಿರುದ್ದ ಹೋರಾಟ ಮಾಡುವುದರ ಮೂಲಕ ನಿಮ್ಮನ್ನು ನೀವು ಗುರುತಿಸಿಕೊಳ್ಳಿ.

    Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ? 

    ನಾನು ಸಹಾ ನಿಮ್ಮ ಜೊತೆಯಲ್ಲಿ ಇರುತ್ತೇನೆ. ದರಗಳು ಗಗನಕ್ಕೆ ಹೋಗಿವೆ, ರೈತರ ಬದುಕು ದುಸ್ತರವಾಗಿದೆ. ಇದರ ವಿರುದ್ದ ಹೋರಾಟ ಮಾಡುವುದರ ಮೂಲಕ ಜನರ ಗಮನವನ್ನು ಸೆಳೆಯಬೇಕಿದೆ. ಇದರ ಮೂಲಕ ನಾಯಕರಾಗಬೇಕಿದೆ.

    ಇಂದಿನ ದಿನಮಾನದಲ್ಲಿ ರಾಷ್ಟ್ರೀಯ ಪಕ್ಷಗಳ ಗತಿ ಏನಾಗಿದೆ ಎಂದು ನೋಡುತ್ತಿದ್ದೀರಾ. ಈ ಸಮಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದರ ಲಾಭವನ್ನು ನಾವುಗಳು ಪಡೆಯಬೇಕಿದೆ. ಹೆಚ್ಚಿನ ರೀತಿಯಲ್ಲಿ ಸದಸ್ಯತ್ವ ಮಾಡುವುದರ ಮೂಲಕ ಪಕ್ಷವನ್ನು ಸಂಘಟಿಸಬೇಕಿದೆ. ಪ್ರತಿಯೊಂದು ಬೂತ್‍ನಲ್ಲಿಯೂ ಸಹಾ ಹಿರಿಯರಿಗೆ ಮಹಿಳೆಯರಿಗೆ ಯುವ ಜನಾಂಗಕ್ಕೆ ಅದ್ಯತೆ ನೀಡಿ.

    ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಬಿಜೆಪಿಯೊಂದಿಗೆ ಮೃತ್ರಿಯನ್ನು ಮಾಡಿಕೊಳ್ಳಲಾಗಿದೆ ವಿನಃ ಮೀಲಿನವಾಗಿಲ್ಲ, ಮುಂಬರುವ ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ನಮ್ಮ ಪಕ್ಷದಿಂದಲೂ ಸಹಾ ಇಷ್ಟು ಸೀಟುಗಳನ್ನು ನಮಗೆ ನೀಡಿ ಎಂದು ಕೇಳಬೇಕಾದರೆ ನಾವು ಬಲಿಷ್ಠರಾಗಿರಬೇಕಿದೆ.

    Also Read: ಸೇವಂತಿಗೆ, ತೆಂಗು, ಅಡಿಕೆ ಬೆಳೆ | 3 ದಿನ ಸುಧಾರಿತ ಬೇಸಾಯ ಕ್ರಮಗಳ ಕುರಿತು ತರಬೇತಿ

    ಈ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳಿದ್ದಾರೆ ಈ ಕ್ಷೇತ್ರವನ್ನು ನಮಗೆ ನೀಡಿ ಎಂಬ ಧೈರ್ಯ ನಮ್ಮಲ್ಲಿ ಬರಬೇಕಾದರೆ ನಾವು ಮುಂಚೆ ಪಕ್ಷದಿಂದ ಅಭ್ಯರ್ಥಿಗಳನ್ನು ಹುಡುಕಿಕೊಂಡು ತಯಾರಾಗಿ ಇರಬೇಕಿದೆ, ಇದಕ್ಕೆ ಈ ಸದಸ್ಯತ್ವ ಅನುಕೂಲವಾಗಲಿದೆ ಎಂದು ತಿಳಿಸಿದರು.

    ತುಮಕೂರಿನ ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಇಂದಿನ ದಿನಮಾನದಲ್ಲಿ ಸದಸ್ಯತ್ವ ನೊಂದಾಣಿ ಮಾಡುವುದು ಅಗತ್ಯ ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಆರು ಕ್ಷೇತ್ರದಲ್ಲಿ ಪ್ರತಿಯೊಂದು ಬೂತ್ ಮಟ್ಟದಲ್ಲಿ 20 ಸದಸ್ಯತ್ವ ಮಾಡಿಸಿದಾಗ ಕ್ಷೇತ್ರದಲ್ಲಿ 5000 ಜನ ಸದಸ್ಯರಾಗುತ್ತಾರೆ.

    ಇದೇ ರೀತಿ 6 ಕ್ಷೇತ್ರದಿಂದ 30,000 ಜನ ಪಕ್ಷದ ಸದಸ್ಯರಾಗುತ್ತಾರೆ. ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರವನ್ನು ಗೆಲ್ಲಬಹುದಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ಹಲವಾರು ಜನ ಜಿ.ಪಂ. ತಾ.ಪಂ. ಚುನಾವಣೆಯ ಬಗ್ಗೆ ಹಿನ್ನಡೆ ಸಾಧಿಸಿದ್ದಾರೆ. ನಾವು ಎಲ್ಲಿ ಬಲಿಷ್ಠವಾಗಿರುತ್ತೇವೆ ಅಲ್ಲಿ ಬೆಲೆ ಸಿಗುತ್ತದೆ ಎಲ್ಲಿ ಕನಿಷ್ಠವಾಗಿರುತ್ತೇನೆ ಅಲ್ಲಿ ಹಿನ್ನಡೆಯಲ್ಲಿ ಸಾಧಿಸಲಾಗುತ್ತದೆ ಎಂದರು.

    ಜಿಲ್ಲಾ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಎಂ.ಜಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    Also Read: ಒಂದು ಲೋಡ್ ಯೂರಿಯಾ ವಶಕ್ಕೆ | 12.74 ಲಕ್ಷ ಮೊತ್ತದ ಗೊಬ್ಬರ ಅಕ್ರಮ ಸಾಗಾಣೆ

    ಈ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದಡಿ ತಾಲ್ಲೂಕುವಾರು ಅಧ್ಯಕ್ಷರುಗಳಿಗೆ ಸದಸ್ಯತ್ವದ ರಸೀದಿ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಜಿಲ್ಲಾ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷ ಡಿ.ಯಶೋಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿನಾಯಕ ವಿಧಾನಸಭಾ ಪರಾಜಿತ ಅಭ್ಯರ್ಥಿಗಳಾದ ರವೀಂದ್ರಪ್ಪ, ವೀರಭದ್ರಪ್ಪ, ಜಿಲ್ಲಾ ಘಟಕದ ಕಾರ್ಯಧ್ಯಕ್ಷ ಜಿ.ಬಿ. ಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಸಣ್ಣತಿಮ್ಮಪ್ಪ, ಹನುಮಂತರಾಯಪ್ಪ, ಕರಿಬಸಪ್ಪ, ಗಣೇಶಮೂರ್ತಿ, ಪರಮೇಶ್ವರಪ್ಪ, ಪಿ.ತಿಪ್ಪೇಸ್ವಾಮಿ, ವಿವಿಧ ಘಟಕಗಳ ಅಧ್ಯಕ್ಷರಾದ ಲಿಂಗರಾಜ್, ಪ್ರತಾಪ್ ಜೋಗಿ, ಪರಮೇಶ್ ಅಬ್ಬು, ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top