Connect with us

    ವೀರಶೈವ ಸಮಾಜದಿಂದ ಡಾ.ಬಸವಪ್ರಭು ಸ್ವಾಮೀಜಿಗೆ ಅಭಿನಂದನೆ 

    ಮುಖ್ಯ ಸುದ್ದಿ

    ವೀರಶೈವ ಸಮಾಜದಿಂದ ಡಾ.ಬಸವಪ್ರಭು ಸ್ವಾಮೀಜಿಗೆ ಅಭಿನಂದನೆ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 08 FEBRUARY 2025

    ಚಿತ್ರದುರ್ಗ: ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶನಿವಾರ ವೀರಶೈವ ಸಮಾಜದ ವತಿಯಿಂದ ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ.ಬಸವಪ್ರಭು ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    Also Read: SJM ಕಾಲೇಜಿನ ವಿದ್ಯಾರ್ಥಿನಿಗೆ 5ನೇ ರ್ಯಾಂಕ್

    ಶ್ರೀಗಳು ಡಾ.ಸಣ್ಣರಾಮಪ್ಪ ಅವರ ಮಾರ್ಗದರ್ಶನದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯದ ಮೇಲೆ PHD ಮಹಾಪ್ರಬಂಧವನ್ನು ಮಂಡಿಸಿದ್ದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಬಸವಪ್ರಭು ಸ್ವಾಮಿಗಳು, ಜೀವನದಲ್ಲಿ ಋಣಾನುಬಂಧ ಇರುತ್ತದೆ. ತಂದೆ, ತಾಯಿ, ಗುರುಗಳ ಋಣ ಎಲ್ಲರಲ್ಲೂ ಇರುತ್ತೆ. ನನ್ನ ಗುರುಗಳನ್ನು ನಾನು ಯಾವತ್ತೂ ಮರೆಯುವುದಿಲ್ಲ. ಓದಲು ಮುರುಘಾಮಠಕ್ಕೆ ಬಂದೆ. ನಂತರದಲ್ಲಿ ನನಗೆ ದಾವಣಗೆರೆ ವಿರಕ್ತಮಠದ ಜವಾಬ್ದಾರಿ ವಹಿಸಿದರು.

    ನಮ್ಮ ಪೂರ್ವಿಕರಿಗೆ ಶ್ರೀಮಠದ ಬಗ್ಗೆ ಅಪಾರ ಭಕ್ತಿ ಇತ್ತು. ನನ್ನನ್ನು ಸಮಾಜದವರು ಗುರುತಿಸಿ ಸನ್ಮಾನಿಸಿರುವುದು ಅತೀವ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.

    Also Read: ದೆಹಲಿಯಲ್ಲಿ ಭರ್ಜರಿ ಗೆಲುವು | ಚಿತ್ರದುರ್ಗದಲ್ಲಿ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು

    ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್. ತಿಪ್ಪೇಸ್ವಾಮಿ ಮಾತನಾಡಿದರು.

    ಎಸ್.ಜೆ.ಎಂ. ಬ್ಯಾಂಕ್‌ನ ಮ್ಯಾನೇಜರ್ ಟಿ.ಕೆ. ರಾಜಶೇಖರ್, ವೈಜ್ಞಾನಿಕ ಪರಿಷತ್‌ನ ನಾಗರಾಜ್ ಸಂಗಮ್, ವಿವಿಧ ಸಂಘಟನೆಗಳು ಶ್ರೀಗಳನ್ನು ಸನ್ಮಾನಿಸಿದರು.

    Also Read: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಚುನಾವಣೆ | ಕಾರೇಹಳ್ಳಿ ಉಲ್ಲಾಸ್ ಪುನರಾಯ್ಕೆ

    ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್, ಸಹಕಾರ್ಯದರ್ಶಿ ಜಿತೇಂದ್ರ ಎನ್.ಹುಲಿಕುಂಟೆ, ನಿರ್ದೇಶಕ ಎಸ್.ವಿ. ನಾಗರಾಜಪ್ಪ ಸಿದ್ದಾಪುರ, ಡಿ.ಎಸ್.ಮಲ್ಲಿಕಾರ್ಜುನ, ಎಸ್. ಷಡಾಕ್ಷರಯ್ಯ, ಎಸ್.ವಿ.ಕೊಟ್ರೇಶ್, ಡಿ.ವಿ.ಎಸ್. ಪ್ರದೀಪ್, ಕೆ.ಎನ್.ವಿಶ್ವನಾಥಯ್ಯ, ನಿರಂಜನ ದೇವರಮನೆ, ಚಿನ್ಮಯಾನಂದ, ಲತಾ ಉಮೇಶ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top