ಚಳ್ಳಕೆರೆ
ಸರಗಳ್ಳನನ್ನು ಬಂಧಿಸಿದ ಚಳ್ಳಕೆರೆ ಪೊಲೀಸರು | 7 ಸರ, 2 ಬೈಕ್ ವಶಕ್ಕೆ

CHITRADURGA NEWS | 25 JANUARY 2025
ಚಳ್ಳಕೆರೆ: ತಾಲೂಕಿನ ಬಾಲೇನಹಳ್ಳಿ ಗ್ರಾಮದ ಬಳಿ ದಿನಾಂಕ 10.07.2024 ರಂದು ಬಸಮ್ಮ ಎಂಬುವರ 40 ಗ್ರಾಂ ತೂಕದ ಸುಮಾರು 1 ಲಕ್ಷ 50 ಸಾವಿರ ಮೌಲ್ಯದ ಸರವನ್ನು ಅಪರಿಚಿತ ವ್ಯಕ್ತಿ ಒಬ್ಬ ಕಂದು ಪರಾರಿಯಾಗಿದ್ದ.
Also Read: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಶನಿವಾರದ ಹತ್ತಿ ರೇಟ್ ಎಷ್ಟಿದೆ?
ಚಳ್ಳಕೆರೆ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಚಳ್ಳಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಬಿ.ರಾಜಣ್ಣ ಇವರುಗಳ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಆರ್.ಎಫ್.ದೇಸಾಯಿ ಇವರ ನೇತೃತ್ವದಲ್ಲಿ ಪಿಎಸ್ಐ ಜೆ.ಶಿವರಾಜ್ ಅವರ ತಂಡ ರಚಿಸಲಾಗಿತ್ತು.
ಪೊಲೀಸ್ ನಿರೀಕ್ಷಕ ಆರ್.ಎಫ್.ದೇಸಾಯಿ ಇವರ ನೇತೃತ್ವದಲ್ಲಿ ಪಿಎಸ್ಐ ಜೆ.ಶಿವರಾಜ್ ಅವರ ತಂಡ ಹಿರಿಯೂರು ತಾಲೂಕಿನ ರೋಷನ್(34 ವರ್ಷ) ಎಂಬ ಆರೋಪಿಯನ್ನು ಬಂಧಿಸಿ, ಒಟ್ಟು 206ಗ್ರಾಂ ತೂಕದ 07 ಬಂಗಾರದ ಸರಗಳು, ಬೆಲೆ ರೂ.970000, 2 ಮೋಟಾರ್ ಸೈಕಲ್ ಗಳು ಬೆಲೆ ರೂ.170000, ಒಟ್ಟು ರೂ.1140000 ವಶಪಡಿಸಿಕೊಂಡಿದ್ದಾರೆ.
Also Read: ರೈತರಿಂದ KEB ಸ್ಟೇಷನ್ ಮುತ್ತಿಗೆ | ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಚಳ್ಳಕೆರೆ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
