ಮುಖ್ಯ ಸುದ್ದಿ
ಮೈಸೂರು ಮಹಾರಾಜರಿಂದ ವಾಣಿವಿಲಾಸ ಸಾಗರಕ್ಕೆ ಬಾಗೀನ ಅರ್ಪಣೆ
CHITRADURGA NEWS | 21 JANUARY 2025
ಚಿತ್ರದುರ್ಗ: ಮೈಸೂರು ಅರಸರ ಆಡಳಿತ ಕಾಲದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನಿರ್ಮಾಣವಾದ ವಾಣಿವಿಲಾಸ ಸಾಗರ ಜಲಾಶಯ ಮೂರನೇ ಬಾರಿಗೆ ಭರ್ತಿಯಾಗಿ ಕೋಡಿ ಬಿದ್ದಿದೆ.
ಈ ಹಿನ್ನೆಲೆಯಲ್ಲಿ ಇಂದು ಮೈಸೂರು ಮಹಾರಾಜರು, ಮೈಸೂರು-ಕೊಡಗು ಸಂಸದರಾದ ಶ್ರೀ ಯದುವೀರ ಕೃಷ್ಣದತ್ತ ಒಡೆಯರ್ ಜಲಾಶಯಕ್ಕೆ ಭೇಟಿ ನೀಡಿ ಬಾಗೀನ ಅರ್ಪಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಈ ವೇಳೆ ಹಾಜರಿದ್ದ ನೂರಾರು ರೈತರು ಹರ್ಷೊದ್ಘಾರ ವ್ಯಕ್ತಪಡಿಸಿ, ಮೈಸೂರು ಸಂಸ್ಥಾನಕ್ಕೆ ಜಯಕಾರದ ಘೋಷಣೆ ಕೂಗಿದರು.
ಈ ಹಿಂದೆ 2022ರಲ್ಲಿ ಜಲಾಶಯ ಭರ್ತಿಯಾದಾಗಲೂ ದಂಪತಿ ಸಮೇತ ಆಗಮಿಸಿ ಬಾಗೀನ ಆರ್ಪಿಸಿದ್ದ ಯದುವೀರ ಒಡೆಯರ್, ಅವರು ಮೂರನೇ ಸಲ ಭರ್ತಿಯಾದಾಗಲೂ ಆಗಮಿಸಿ ವೇದಾವತಿಗೆ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಸಹಾಯಧನಕ್ಕೆ ಅರ್ಜಿ ಆಹ್ವಾನ
ಮೈಸೂರು ಸಂಸ್ಥಾನದ ಬಗ್ಗೆ ಜಿಲ್ಲೆಯಲ್ಲಿ ವಿಶೇಷ ಪ್ರೀತಿ ಹಾಗೂ ಭಕ್ತಿಯಿದ್ದು, ಜಲಾಶಯ ಕೋಡಿ ಬಿದ್ದ ನಂತರ ಯದುವೀರ ಕೃಷ್ಣದತ್ತ ಒಡೆಯರ್ ಆಗಮಿಸಿ ಬಾಗೀನ ಅರ್ಪಣೆ ಮಾಡಿದ್ದು, ಈ ಪ್ರೀತಿಯನ್ನು ಇಮ್ಮಡಿಗೊಳಿಸಿದೆ.
ಈ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯ್ಯಣ್ಣ, ಮಾಜಿ ಅಧ್ಯಕ್ಷ ಡಿ.ಯಶೋಧರ, ಬಿಜೆಪಿ ಮುಖಂಡ ಲಕ್ಷ್ಮೀಕಾಂತ್, ಮುಖಂಡರಾದ ಕೆ.ಜಿ.ಹನುಮಂತರಾಯ, ಕಣಿವೆ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯವರಾದ ಜಯರಾಮಪ್ಪ, ಕಾಂತರಾಜ್, ಮಹೇಶ್, ಕೆಂಚೇಗೌಡ, ವಿವಿಪುರ ಗ್ರಾಮಸ್ಥರಾದ ಚಂದ್ರಕಾಂತ್, ನರೇಂದ್ರ, ವೀರಭದ್ರ, ಸಂತೋಷ್, ಕೆ.ಎಚ್.ಕಾಂತಪ್ಪ ಮತ್ತಿತರರಿದ್ದರು.
ಇದನ್ನೂ ಓದಿ: ಜ.24 ರಿಂದ ಮೆಕ್ಕೆಜೋಳ ಮಾರುಕಟ್ಟೆ ಬಂದ್ | ರೈತರು ಮಾರುಕಟ್ಟೆಗೆ ಮೆಕ್ಕೆಜೋಳ ತರದಂತೆ ಸೂಚನೆ
ಜನವರಿ 23 ಗುರುವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿ ರಾಜ್ಯ ಸರ್ಕಾರದ ಪರವಾಗಿ ವಾಣಿವಿಲಾಸ ಸಾಗರಕ್ಕೆ ಬಾಗೀನ ಅರ್ಪಿಸಲಿದ್ದಾರೆ.