Connect with us

    ಹಸುವಿನ ಕೆಚ್ಚಲು ಕೊಯ್ದ ಪಾಪಿಗಳನ್ನು ಬಂಧಿಸಿ | ಚಿತ್ರದುರ್ಗದಲ್ಲಿ ಆಕ್ರೋಶ 

    ಮುಖ್ಯ ಸುದ್ದಿ

    ಹಸುವಿನ ಕೆಚ್ಚಲು ಕೊಯ್ದ ಪಾಪಿಗಳನ್ನು ಬಂಧಿಸಿ | ಚಿತ್ರದುರ್ಗದಲ್ಲಿ ಆಕ್ರೋಶ 

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 JANUARY 2025

    ಚಿತ್ರದುರ್ಗ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಿರುವ ದುಷ್ಟರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಗೋ ಸಂವರ್ಧನಾ ಸಂರಕ್ಷಣಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.

    Also Read: ಹಿರಿಯೂರು ತೋಟಗಾರಿಕೆ ವಿದ್ಯಾರ್ಥಿಗಳಿಂದ ಹಾಲಿನ ಮೌಲ್ಯವರ್ಧನೆ ಕುರಿತು ತರಬೇತಿ

    ನಗರದ ಆನೆ ಬಾಗಿಲಿನಿಂದ ಒನಕೆ ಓಬವ್ವ ವೃತ್ತದವರೆಗೆ ಸುಬ್ರಹ್ಮಣ್ಯ ದೇವಸ್ಥಾನದ ಹಸುಗಳೊಂದಿಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಸಂಘ ಪರಿವಾರದ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನೆ ಉದ್ದೇಶಿಸಿ ವಿಶ್ವಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಬಿ.ವಿ.ಸುರೇಶ್ ಮಾತನಾಡಿ, ಚಾಮರಾಜಪೇಟೆಯ ಒಂದು ಸರ್ಕಾರಿ ಗೋವಿನ ಆಸ್ಪತ್ರೆ ಇದೆ. ಈ ಜಾಗ ಕಬಳಿಸಲು ದುಷ್ಟರು ಹುನ್ನಾರ ನಡೆಸಿದ್ದಾರೆ. ಆದರೆ, ಇದಕ್ಕೆ ಕಡಿವಾಣ ಬಿದ್ದ ಹಿನ್ನೆಲೆಯಲ್ಲಿ ಬೆದರಿಸುವ ಉದ್ದೇಶದಿಂದ ಹಸುವಿನ ಕೆಚ್ಚಲು ಕತ್ತರಿಸಲಾಗಿದೆ ಎಂದರು.

    ಯಾರೋ ಒಬ್ಬ ಹುಚ್ಚನನ್ನು ಬಂಧಿಸಿ ಕೆಚ್ಚಲು ಕೊಯ್ದವನನ್ನು ಬಂಧಿಸಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ನಿಜವಾದ ಆರೋಪಿಗಳು ಬೇರೆ ಇದ್ದಾರೆ. ಯಾರು ಎನ್ನುವುದು ಪೊಲೀಸರಿಗೆ, ಸರ್ಕಾರಕ್ಕೆ, ಚಾಮರಾಜಪೇಟೆ ಶಾಸಕರಿಗೂ ಗೊತ್ತಿದೆ. ಆದರೆ, ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡಲು ಬಂಧಿಸುತ್ತಿಲ್ಲ ಎಂದು ದೂರಿದರು.

    Also Read: ಕೊಲ್ಕತ್ತಾದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಸಭೆ | ಸಂಸದ ಗೋವಿಂದ ಕಾರಜೋಳ ಭಾಗೀ

    ಜಗತ್ತಿನ 197 ದೇಶಗಳಲ್ಲಿ ಭಾರತ ಮಾತ್ರ ಹಿಂದೂ ರಾಷ್ಟ್ರ ಭಾರತದ ವಿಸ್ತೀರ್ಣ ಹಿಂದೆ 78 ಲಕ್ಷ ಚದರ ಕಿ.ಮೀ ಇತ್ತು. ಆಫ್ಘಾನಿಸ್ಥಾನ, ಪಾಕಿಸ್ಥಾನ, ನೇಪಾಳ, ಶ್ರೀಲಂಕವೂ ಸೇರಿತ್ತು. ಆದರೆ, ಪರರ ಆಕ್ರಮಣ, ಒಳಗಿನ ಒಡಕುಗಳಿಂದಾಗಿ ಭಾರತ ತುಂಡು ತಂಡಾಗಿ ಈಗ 34 ಲಕ್ಷ ಚದರ ಕಿ.ಮೀ ಆಗಿದೆ ಎಂದರು.

    ಎರಡು ಸಾವಿರ ವರ್ಷಗಳ ಕಾಲ ಪರಕೀಯರು ಆಕ್ರಮಣ ಮಾಡಿದರು. ಶೇ.90 ರಷ್ಟಿದ್ದ ಹಿಂದುಗಳ ಸಂಖ್ಯೆ ಶೇ.70 ಕ್ಕೆ ಕುಸಿದಿದ್ದೇವೆ. ಹೊರಗಿನಿಂದ ಬಂದವರು ಮಾಡಿದ ಆಕ್ರಮಣಕಾರರಿಗಿಂತ ಹೆಚ್ಚು ದಾಳಿ ಈಗ ನಡೆಯುತ್ತಿದೆ. ದೇಶದ ಚುನಾವಣೆ ವ್ಯವಸ್ಥೆಯಲ್ಲಿ ಶೇ.18 ರಷ್ಟು ಇರುವವರ ಓಲೈಕೆ ನಡೆಯುತ್ತಿದೆ ಕಾರಣ ಅವರಲ್ಲಿನ ಒಗ್ಗಟ್ಟು. ಶೇ.70 ರಷ್ಟು ಇರುವ ಹಿಂದುಗಳಲ್ಲಿ ಒಗ್ಗಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಧರ್ಮದ ರಕ್ಷಣೆ ನಾವು ಮಾಡಿದರೆ, ಧರ್ಮ ನಮ್ಮ ರಕ್ಷಣೆ ಮಾಡುತ್ತದೆ. ಆದರೆ, ಈ ಕಾರ್ಯವನ್ನು ಯಾರೂ ಮಾಡುತ್ತಿಲ್ಲ. ದೇಶದಲ್ಲಿ ಶೇ.70 ರಷ್ಟು ಹಿಂದುಗಳಿದ್ದರೂ ಗೋವಿನ ರಕ್ಷಣೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಾದ ಸ್ಥಿತಿ ಇದೆ. ಚಿತ್ರದುರ್ಗದಲ್ಲಿ ಪ್ರತಿಭಟಿಸಲು ಅನುಮತಿ ಪಡೆಯುವ ದುಸ್ಥಿತಿಯಲ್ಲಿದ್ದೇವೆ. ಹಿಂದೂ ಪರವಾಗಿರುವ ಸರ್ಕಾರ ಬರುವವರೆಗೆ ಈ ಪರಿಸ್ಥಿತಿ ತಪ್ಪುವುದಿಲ್ಲ ಎಂದು ಎಚ್ಚರಿಸಿದರು.

    Also Read: ಇಂದಿನ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಧಾರಣೆ

    ಆಳುವ ಹಾಗೂ ಆಡಳಿತ ವರ್ಗ ಕೂಡಾ ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಗೋ ಹತ್ಯೆಗಳು ನಡೆಯುತ್ತಿವೆ. ನಿಮ್ಮ ಕುರ್ಚಿ ಶಾಶ್ವತ ಅಲ್ಲ. ಗೋ ಮಾತೆಯ ಶಾಪ ತಟ್ಟಿದರೆ ಬೆಂದು ಹೋಗುತ್ತೀರಿ ಎಂದು ಬಿ.ವಿ.ಸುರೇಶ್ ಎಚ್ಚರಿಕೆ ನೀಡಿದರು.

    ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರು ಮಾತನಾಡಿ, ಇಂದು ದೇಶದಲ್ಲಿ ಗೋವಿನ ಸಂತತಿ ಕ್ಷೀಣಿಸುತ್ತಿದೆ. ಭಗವಂತನೇ ಹುಟ್ಟಲು ಕಾರಣವಾದ ಗೋ ಮಾತೆಯ ಕೆಚ್ಚಲು ಕೊಯ್ದ ಪಾಪಿಗಳಿಗೆ ಆ ಭಗವಂತನೇ ಶಿಕ್ಷೆ ಕೊಡಬೇಕು ಎಂದು ಶಪಿಸಿದರು.

    ಶ್ರೀರಾಮನ ವಂಶದ ಮೂಲ ಪುರುಷ ದಿಲೀಪ ಚಕ್ರವರ್ತಿಗೆ ಸಂತಾನ ಆಗದಿದ್ದಾಗ ಗೋ ಸೇವೆ ಮಾಡಲು ವಸಿಷ್ಠರು ಸಲಹೆ ನೀಡುತ್ತಾರೆ. ಆನಂತರ ದಿಲೀಪ ಚಕ್ರವರ್ತಿ ಕಾಮದೇನುವಿನ ಸೇವೆ ಮಾಡಿದಾಗ ಪುತ್ರ ಸಂತಾನ ಆಗುತ್ತದೆ. ಆ ವಂಶದಿಂದ ಬಂದವನು ಶ್ರೀರಾಮ ಎಂದು ವಿವರಿಸಿದರು.

    Also Read: ಮಾರುಕಟ್ಟೆ ಧಾರಣೆ | ಇಂದಿನ ಶೇಂಗಾ, ತೊಗರಿಕಾಳು ರೇಟ್ ಎಷ್ಟಿದೆ?

    ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್, ಬಜರಂಗದಳ ಪ್ರಾಂತ ಸಹಸಂಯೋಜಕ ಪ್ರಭಂಜನ್, ಸಂಘ ಪರಿವಾರದ ಮುಖಂಡರಾದ ರಾಜಕುಮಾರ್, ಗಿರೀಶ್, ಶ್ರೀನಾಥ್, ಟಿ.ಸಂದೀಪ್, ಕೇಶವ, ನಾಗರಾಜ್, ದೇವರಾಜ್, ಜಿತೇಂದ್ರ, ನಾಗರಾಜ್, ಉದಯ್, ಪರಮೇಶ್ ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top