Connect with us

    ಚಿತ್ರದುರ್ಗ ಪತ್ರಕರ್ತರಿಗೆ ಪ್ರಶಸ್ತಿಗಳ ಮಳೆ | ರಾಜ್ಯಮಟ್ಟದ ಪುರಸ್ಕಾರಕ್ಕೆ ಐದು ಜನ ಆಯ್ಕೆ

    Henjarappa, K.M.Ravishankar, Dinesh Gowdigere

    ಮುಖ್ಯ ಸುದ್ದಿ

    ಚಿತ್ರದುರ್ಗ ಪತ್ರಕರ್ತರಿಗೆ ಪ್ರಶಸ್ತಿಗಳ ಮಳೆ | ರಾಜ್ಯಮಟ್ಟದ ಪುರಸ್ಕಾರಕ್ಕೆ ಐದು ಜನ ಆಯ್ಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 03 JANUARY 2024

    ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಪತ್ರಕರ್ತರಿಗೆ ಪ್ರಶಸ್ತಿಗಳ ಸುರಿಮಳೆಯೇ ಸುರಿದಿದೆ.

    ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಾಧ್ಯಮ ಅಕಾಡೆಮಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಜಿಲ್ಲೆಯ ಹಲವು ಪತ್ರಕರ್ತರು ಭಾಜನರಾಗಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗದ ಖ್ಯಾತ ಪತ್ರಕರ್ತ ಡಿ.ಉಮಾಪತಿ ಪ್ರಶಸ್ತಿಗೆ ಆಯ್ಕೆ | ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ

    ಕರ್ನಾಟಕ ಮಾಧ್ಯಮ ಅಕಾಡೆಮಿ ಘೋಷಣೆ ಮಾಡಿರುವ ವಾರ್ಷಿಕ ಪ್ರಶಸ್ತಿಗಳ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಹಿರಿಯ ಪತ್ರಕರ್ತ, ಚಂದ್ರವಳ್ಳಿ ಪತ್ರಿಕೆಯ ಸಂಪಾದಕ ಹರಿಯಬ್ಬೆ ಹೆಂಜಾರಪ್ಪ ಆಯ್ಕೆಯಾಗಿದ್ದಾರೆ.

    ಮಾಧ್ಯಮ ಅಕಾಡೆಮಿಯ ದತ್ತಿ ಪ್ರಶಸ್ತಿಗಳ ವಿಭಾಗದಲ್ಲಿ ಮಾಧ್ಯಮ ಮಹಾಸಾಧಕ ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಕ.ಮ.ರವಿಶಂಕರ್ ಭಾಜನರಾಗಿದ್ದಾರೆ.

    G.T.Satheesh M.N.Yogeesh

    ಎಂ.ಎನ್.ಯೋಗೀಶ್, ಜಿ.ಟಿ.ಸತೀಶ್

    ಇದನ್ನೂ ಓದಿ: ನಾಲ್ವರು ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ

    ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, 2020ನೇ ಸಾಲಿಗೆ ಪ್ರಜಾವಾಣಿಯ ಹಿರಿಯ ವರದಿಗಾರರಾದ ಎಂ.ಎನ್.ಯೋಗೀಶ್ , 2022ನೇ ಸಾಲಿಗೆ ಚಿತ್ರದುರ್ಗಮೂಲದ ಸತೀಶ್ ಜಿ.ಟಿ ಆಯ್ಕೆಯಾಗಿದ್ದಾರೆ.

    ಪ್ರಶಸ್ತಿಗೆ ಭಾಜನರಾದ ಪತ್ರಕರ್ತರ ಪರಿಚಯ:

    ಕ.ಮ.ರವಿಶಂಕರ್:

    ಇಂಜಿನಿಯರಿಂಗ್‌ ಪದವಿ ನಂತರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಆರಂಭಿಸಿ,  ಕನ್ನಡಪ್ರಭ ಪತ್ರಿಕೆಯಲ್ಲಿ ಸುಧೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವಿ ಪತ್ರಕರ್ತರು.

    ಬೀದರ್, ಧಾರವಾಡ, ಚಿತ್ರದುರ್ಗ ಬೆಂಗಳೂರಿನಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.

    ಬೆಸ್ಕಾಂ ವರದಿಗಾರಿಕೆಯಲ್ಲಿ ನೈಪುಣ್ಯತೆ, ತೊಗರಿ ಬೆಳೆ ನಷ್ಟದಿಂದ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರಣಿ ವರದಿ ಮೂಲಕ ಸರ್ಕಾರದ ಗಮನ ಸೆಳೆದಿದ್ದರು.

    ಕ.ಮ.ರವಿಶಂಕರ್ ರಚಿಸಿದ ಗೋರ ಕೃತಿಯನ್ನು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ.

    ಬಿ.ದಿನೇಶ್ ಗೌಡಗೆರೆ:

    ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಸಮೀಪದ ಗೌಡಗೆರೆ ಮೂಲದ ದಿನೇಶ್, ಪೋಟೋಗ್ರಾಫರ್ ವೃತ್ತಿಯಿಂದ ಪತ್ರಿಕೋದ್ಯಮಕ್ಕೆ ಬಂದು, ಹೊಸದಿಗಂತ, ಚಂದನ ವಾಹಿನಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಇಬ್ಬನಿ ಸೂರ್ಯ ಸ್ಥಳೀಯ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಹರಿಯಬ್ಬೆ ಹೆಂಜಾರಪ್ಪ:

    ಹಿರಿಯೂರು ತಾಲೂಕು ಹರಿಯಬ್ಬೆ ಗ್ರಾಮದ ಸಿ.ಹೆಂಜಾರಪ್ಪ ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ, ಸದ್ಯ ಪ್ರಾದೇಶಿಕ ಪತ್ರಿಕೆ ಚಂದ್ರವಳ್ಳಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಶತಕ ದಾಟಿದ ಸರಣಿ ವರದಿ ಬರೆದ ಹೆಗ್ಗಳಿಗೆ ಹೆಂಜಾರಪ್ಪ ಅವರದ್ದು.

    ಯೋಗೀಶ್ ಎಂ.ಎನ್:

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಮಾರೇನಹಳ್ಳಿ ಗ್ರಾಮದವರು. ಕಳೆದ ಸುಮಾರು 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಪ್ರಜಾವಾಣಿ ದಿನಪತ್ರಿಕೆಯ ಚಿತ್ರದುರ್ಗ ಜಿಲ್ಲಾ ವರದಿಗಾರರಾಗಿದ್ದಾರೆ.

    ಇದನ್ನೂ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ದಾಖಲೆ | ಹೊಸ ವರ್ಷದ ದಿನ ಎಷ್ಟು ಕಲೆಕ್ಷನ್ ನೋಡಿ..

    ಭ್ರೂಣಹತ್ಯೆ ತಡೆ, ಉನ್ನತ ಶಿಕ್ಷಣ ಸೇರಿದಂತೆ ಅಭಿವೃದ್ಧಿ ವಿಷಯಗಳ ಕುರಿತು ಪರಿಣಾಮಕಾರಿ ವರದಿಗಳನ್ನು ಪ್ರಕಟ ಮಾಡಿದ್ದಾರೆ. ‘ಜೀವಸೆಲೆ ಕಾಮೇಗೌಡ’ ಕೃತಿಯು ಮಂಡ್ಯ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ಸಕ್ಕರೆಯ ಅಕ್ಕರೆ, ವರ್ಣ ಕೃತಿಗಳು ಪ್ರಕಟವಾಗಿವೆ. ಭಾರತೀಯ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ವಿವಿಧ ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

    ಹಿಂದೂ ರಿಪೋರ್ಟರ್ ಜಿ.ಟಿ.ಸತೀಶ್:

    ಚಿತ್ರದುರ್ಗದ ಸತೀಶ್, ಮೈಸೂರು ವಿಶ್ವವಿದ್ಯಾನಿಲಯದಿಂದ English ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

    2004ರಿಂದ 2011ರವರೆಗೆ ವಿಜಯ ಟೈಮ್ಸ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. 2011 ರಿಂದ ಈವರೆಗೆ ದಿ ಹಿಂದೂ ದಿನಪತ್ರಿಕೆಯ ಹಾಸನ ವಿಭಾಗದ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಇದನ್ನೂ ಓದಿ: ಮಕ್ಕಳ ಕಳ್ಳತನಕ್ಕೆ ಯತ್ನ | ಓಮಿನಿಯಲ್ಲಿ ಬಂದ ನಾಲ್ವರಿಂದ ಕೃತ್ಯ | ನಡು ದಾರಿಯಲ್ಲೇ ಮಕ್ಕಳನ್ನು ಬಿಟ್ಟು ಎಸ್ಕೇಪ್

    ಅಭಿವೃದ್ಧಿಯ ವಿವಿಧ ಆಯಾಮಗಳ ಮೇಲೆ ಬೆಳಕು ಚೆಲ್ಲುವ ಅನೇಕ ವರದಿಗಳನ್ನು ಪ್ರಕಟಿಸಿದ್ದಾರೆ. ವಿನೋದ್ ಮೆಹ್ತಾ ಅವರ ಆತ್ಮಕಥೆ ‘ಲಖನೌ ಹುಡುಗ’, ವಿನೋದ್ ಕಾಪ್ರಿ ಅವರ ‘ಮನೆ ಸೇರಲು 1232 ಕಿ.ಮೀ ಸಾಗಿದ ದೂರ’, ನ್ಯಾಯಮೂರ್ತಿ ಕೆ.ಚಂದ್ರು ಅವರ ‘ನನ್ನ ದೂರು ಕೇಳಿ ಮಹಿಳೆಯರು ನ್ಯಾಯಾಲಯದ ಕದ ತಟ್ಟಿದಾಗ’ ಅಜಿತ್ ಪಿಳ್ಳೆ ಅವರ ‘ಇದು ಯಾವ ಸೀಮೆ ಚರಿತ್ರೆ’ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top