ಮುಖ್ಯ ಸುದ್ದಿ
ಕಬೀರಾನಂದ ಮಠದಲ್ಲಿ 95ನೇ ಶಿವನಾಮ ಸಪ್ತಾಹ | ಜ.4 ರಂದು ಪೂರ್ವಭಾವಿ ಸಭೆ
Published on
CHITRADURGA NEWS | 02 JANUARY 2025
ಚಿತ್ರದುರ್ಗ: ನಗರದ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ 2025ರ ಫೆಬ್ರವರಿಯಲ್ಲಿ ನಡೆಯಲಿರುವ 95ನೇ ಶಿವನಾಮ ಸಪ್ತಾಹದ ಅಂಗವಾಗಿ ಜ.4 ರಂದು ಪೂರ್ವಬಾವಿ ಸಭೆ ಕರೆಯಲಾಗಿದೆ ಎಂದು ಶ್ರೀ ಗುರು ಕಬೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್ ಪ್ರಶಾಂತ್ ತಿಳಿಸಿದ್ದಾರೆ.
ಫೆ.20 ರಿಂದ 26ರವರೆಗೆ ಶ್ರೀ ಸದ್ಗುರು ಕಬೀರಾನಂದಾಶ್ರಮದಲ್ಲಿ 95ನೇ ಶಿವನಾಮ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಕ್ಲಿಕ್ ಮಾಡಿ ಓದಿ: ಮಕ್ಕಳ ಕಳ್ಳತನಕ್ಕೆ ಯತ್ನ | ಓಮಿನಿಯಲ್ಲಿ ಬಂದ ನಾಲ್ವರಿಂದ ಕೃತ್ಯ | ನಡು ದಾರಿಯಲ್ಲೇ ಮಕ್ಕಳನ್ನು ಬಿಟ್ಟು ಎಸ್ಕೇಪ್
ಇದರ ರೂಪು ರೇಷೇಗಳನ್ನು ಸಿದ್ದ ಪಡಿಸುವ ಹಿನ್ನಲೆಯಲ್ಲಿ ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಜ.4ರಂದು ಮಧ್ಯಾಹ್ನ 4.30ಕ್ಕೆ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಸರ್ವ ಭಕ್ತಾಧಿಗಳು ಆಗಮಿಸುವುದರ ಮೂಲಕ ಶಿವನಾಮ ಸಪ್ತಾಹ ಯಶಸ್ವಿಗೆ ಸಲಹೆ ಸಹಕಾರವನ್ನು ನೀಡುವಂತೆ ಪ್ರಶಾಂತ್ ಮನವಿ ಮಾಡಿದ್ದಾರೆ.
Continue Reading
Related Topics:Chitradurga, Chitradurga news, Chitradurga Updates, Kabirananda Math, Kannada Latest News, Kannada News, Preliminary meeting, Shivalingananda shri, Shivanama week, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಕಬೀರಾನಂದ ಮಠ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಪೂರ್ವಭಾವಿ ಸಭೆ, ಶಿವನಾಮ ಸಪ್ತಾಹ, ಶಿವಲಿಂಗಾನಂದ ಶ್ರೀ
Click to comment