ಮುಖ್ಯ ಸುದ್ದಿ
ಅಮಿತ್ ಶಾ, ಸಿ.ಟಿ ರವಿ ವಿರುದ್ಧ AAP ಪ್ರತಿಭಟನೆ
CHITRADURGA NEWS | 23 DECEMBER 2024
ಚಿತ್ರದುರ್ಗ: ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬಿಜೆಪಿ ಪಕ್ಷದಿಂದ ಹಾಗೂ ಪರಿಷತ್ ಸ್ಥಾನದಿಂದ ಉಚ್ಚಾಟಿಸುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿತು.
ಕ್ಲಿಕ್ ಮಾಡಿ ಓದಿ: ದುರ್ಗದ ಪ್ರೀತಿಗೆ ಶರಣಾದ ಕಿಚ್ಚ ಸುದೀಪ್ | ಕುಟುಂಬ ಸಮೇತ ಕೋಟೆನಾಡಿಗೆ ಆಗಮನ
ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಾಲಯದಿಂದ ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಆಗಮಿಸಿದ ಆಮ್ ಆದ್ಮಿ ಪಾರ್ಟಿಯ ಪದಾಧಿಕಾರಿಗಳು ದಾರಿಯುದ್ದಕ್ಕೂ ಅಮಿತಾ ಶಾ ಹಾಗೂ ಸಿಟಿ ರವಿ ವಿರುದ್ದ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಮಾತನಾಡಿದರು.
ಕ್ಲಿಕ್ ಮಾಡಿ ಓದಿ: ನಾಕೀಕೆರೆ ಕೋಡಿ ಆಲದ ಕೆಂಚಾಂಬಿಕಾ ದೇವಿ ಕಾರ್ತೀಕ ಮಹೋತ್ಸವ | ಹೋಳಿಗೆ ಅನ್ನ ಸಂತರ್ಪಣೆ
ಜಿಲ್ಲಾ ಕಾರ್ಯದರ್ಶಿ ರಾಮಣ್ಣ, ಹೊಳಲ್ಕೆರೆ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜನ್, ವಿನೋಧಮ್ಮ, ಶಿವಮ್ಮ, ರವಿ, ಸುಧಾಕರ್, ಪ್ರಹ್ಲಾದ್, ತನ್ವೀರ್, ಆಕ್ಬರ್‍ಖಾನ್, ಲೋಕೇಶ್, ಸಂದೀಪ್ ಸೇರಿದಂತೆ ಇತರರು ಭಾಗವಹಿಸಿದ್ದರು.