ಮುಖ್ಯ ಸುದ್ದಿ
DCM: ಡಿ.ಕೆ.ಶಿವಕುಮಾರ್ ಪದ ಬಳಕೆಯಿಂದ ನೋವಾಗಿದೆ | ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ
CHITRADURGA NEWS | 13 DECEMBER 2024
ಚಿತ್ರದುರ್ಗ: ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಡ್ಡ ಪದ ಬಳಕೆ ಮಾಡಿರುವುದನ್ನು ಚಿತ್ರದುರ್ಗದ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಸಿದ್ದರಾಮೇಶ್ವರ ಸ್ವಾಮೀಜಿ ಖಂಡಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಮತ್ತೆ ಹರಿದ ನೀರು | 15 ದಿನಗಳಲ್ಲೇ ನಿರ್ಮಾಣವಾಯ್ತು ಹೊಸ ಸೇತುವೆ
ಸಾಂವಿಧಾನಿಕ ಹುದ್ದೆಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಿ.ಎಸ್.ಎಂ. ಕೃಷ್ಣರಿಗೆ ಸಂತಾಪ ಸೂಚಿಸುವ ವೇಳೆ ಸಮುದಾಯಕ್ಕೆ ಅವಮಾನವಾಗುವ ಪದ ಬಳಕೆ ಮಾಡಿದ್ದಾರೆ. ಇದು ಸರಿಯಲ್ಲ ಎಂದರು.
ಬಾಲ್ಯದಲ್ಲಿ ನಾನು ಬಟ್ಟೆ ಹಾಕದೇ ವಡ್ಡ ಒಡ್ಡನಾಗಿದ್ದೆ ಅಂತಾ ಪದ ಬಳಸಿದ್ದಾರೆ. ಈ ಪದ ಬಳಕೆಯನ್ನು ನಾವು ಖಂಡಿಸುತ್ತೇವೆ, ಭೋವಿ ಸಮುದಾಯ ಸೌಮ್ಯ ಸಮುದಾಯ, ಡಿಕೆಶಿ ಬಗ್ಗೆ ನಮಗೆ ಗೌರವವಿದೆ, ಭೋವಿ ಸಮಾಜಕ್ಕೆ ಸ್ಥಾನ ಮಾನ ನೀಡಿ ಡಿಕೆಶಿ ನಮ್ಮ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಡಿಸಿದ್ದಾರೆ ಎಂದೂ ಹೇಳಿದ್ದಾರೆ.
ವಡ್ಡ ಎಂಬ ಪದಕ್ಕೆ ಹಲವು ಅರ್ಥ ಬರುತ್ತೆ, ಹಿಂದುಳಿದ ಸಮುದಾಯಕ್ಕೆ ಇದು ಬೈಗುಳ ಪದವಾಗಿ ಕೂಡ ಬಳಕೆಯಾಗುತ್ತೆ, ಇದು ಮಾನಸಿಕ ಅಸ್ವಸ್ಥತೆ ತೋರಿಸುವ ಪದವಾಗಿ ಬಳಕೆಯಾಗುತ್ತೆ. ಈ ಕುರಿತು ಡಿಕೆಶಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಲು ಶಿಷ್ಯ ಬಳಗ ಚಿಂತನೆ ಮಾಡಿದೆ.
ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ರೇಟ್
ನಾವೇ ಇದು ಉದ್ದೇಶ ಪೂರ್ವಕ ಅಲ್ಲ ಅಂತಾ ನಾವೇ ಬೇಡ ಅಂದಿದ್ದೇವೆ, ಕೂಡಲೇ ಡಿಕೆಶಿ ಕಡತಕ್ಕೆ ಹೋಗಿರುವ ಈ ಪದ ಕಡತದಿಂದ ತೆಗೆಸಬೇಕು ಇದರಿಂದ ನಮಗೆ, ನಮ್ಮ ಸಮುದಾಯದ ನೋವಿಗೆ ಘಾಸಿಯಾಗಿದೆ. ಡಿಕೆಶಿ ನಮ್ಮ ಸಮುದಾಯದ ಕ್ಷಮೆ ಕೇಳಬೇಕು ಎಂದು ಸಿದ್ದರಾಮೇಶ್ವರ ಸ್ವಾಮಿಜಿ ಆಗ್ರಹಿಸಿದರು.