ಮುಖ್ಯ ಸುದ್ದಿ
Reservation: ಪಂಚಮಸಾಲಿ ಮೀಸಲಾತಿ ಹೋರಾಟ | ಸರ್ಕಾರದ ನಡೆಗೆ ರೇಣುಕಾಚಾರ್ಯ ಗರಂ
CHITRADURGA NEWS | 11 DECEMBER 2024
ಚಿತ್ರದುರ್ಗ: ಬೆಳಗಾವಿಯಲ್ಲಿ 2ಎ ಮೀಸಲಾತಿ(Reservation)ಗೆ ಆಗ್ರಹಿಸಿ ಹೋರಾಟದಲ್ಲಿ ಜಯ ಮೃತ್ಯುಂಜಯ ಸ್ವಾಮಿಜಿ ನೇತೃತ್ವದಲ್ಲಿ ನಡೆದಿದ್ದ ಮುತ್ತಿಗೆ ಕಾರ್ಯಕ್ರಮದಲ್ಲಿ ಸರಕಾರ ಮಾನವೀಯತೆ ಮರೆತು ಮೃಗಗಳಂತೆ ವರ್ತನೆ ಮಾಡಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ | ಕಂಪ್ಯೂಟರ್ ರಿಪೇರಿ, ಕುರಿ ಸಾಕಾಣಿಕೆ, ಮಶ್ರೂಮ್ ಕೃಷಿ, ಇನ್ನಿತರೆ ತರಬೇತಿಗೆ ಅರ್ಜಿ ಆಹ್ವಾನ
ಮಂಗಳವಾರ ರಾತ್ರಿ ಚಿತ್ರದುರ್ಗದ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಮನೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.
ಸರ್ಕಾರದಿಂದ ಮುಖ್ಯಮಂತ್ರಿ ಅಥವಾ ಸಂಬಂಧಪಟ್ಟ ಸಚಿವರು ಸ್ವಾಮೀಜಿ ಅವರ ಜೊತೆಗೆ ಮಾತನಾಡಬಹುದಿತ್ತು. ಆದರೆ, ಅಮಾನವೀಯವಾಗಿ ವರ್ತಿಸಿ ಲಾಠಿ ಚಾರ್ಜ್ ಮಾಡಿದ್ದಾರೆ. ಅಮಾಯಕರ ಕೈ, ಕಾಲು, ಮೂಳೆ ಮುರಿದಿದೆ ಸಾವಿರಾರು ಜನರಿಗೆ ಲಾಠಿ ಏಟು ಬಿದ್ದಿದೆ ಎಂದು ದೂರಿದರು.
ಇದೇ ಲಾಠಿ ಏಟು ನಿಮಗೆ ಬಿದ್ದಿದ್ರೆ ಹೇಗೆ ಇರುತ್ತಿತ್ತು..? ಎಂದು ಸರಕಾರಕ್ಕೆ, ಸಿಎಂಗೆ ರೇಣುಕಾಚಾರ್ಯ ಪ್ರಶ್ನೆ ಮಾಡಿ ಕೂಡಲೇ ನೀವು ರಾಜಿನಾಮೆ ಕೊಡಬೇಕು. ಆ ಸ್ಥಾನದಲ್ಲಿ ಮುಂದುವರೆಯಲು ನಿಮಗೆ ನೈತಿಕ ಹಕ್ಕಿಲ್ಲ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದ್ದರು.
ಕ್ಲಿಕ್ ಮಾಡಿ ಓದಿ: ಡಿ.25ಕ್ಕೆ ಹೊಳಲ್ಕೆರೆಗೆ ವೀರೇಂದ್ರ ಹೆಗ್ಗಡೆ ಭೇಟಿ | ನೂತನ ಕಟ್ಟಡ ವಿಕಾಸ ಸೌಧ ಉದ್ಘಾಟನೆ
ಆಗ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಮೀಸಲಾತಿ ನೀಡುವ ಬದಲು ಶ್ರೀಗಳಿಗೆ ಸಿಎಂ ಸಿವಾಸದಲ್ಲಿ ಅಪಮಾನ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ. ರಾಮ, ಹನುಮಾನ್, ಕೇಸರಿ ಕಂಡ್ರೆ ಈ ಸರ್ಕಾರಕ್ಕೆ ಆಗಲ್ಲ ಸಂಕಟ ಬಂದಾಗ ವೆಂಕಟರಮಣ ಎಂದು ಸಿಎಂ ಚಾಮುಂಡಿ, ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಕುಂಕುಮ ಹಚ್ಚಿಕೊಂಡ್ರು ಸಿದ್ದರಾಮಯ್ಯನವರೇ ನಿಮ್ಮ ತಂದೆತಾಯಿ ನಿಮಗೆ ದೇವರ ಹೆಸರಿಟ್ಟಿದ್ದಾರೆ ಅಂಥ ನೀವು ಹೋರಾಟ ಹತ್ತಿಕ್ಕಲು ಕ್ರೌರ್ಯ ಮೆರೆದಿದ್ದೀರಿ, ಪೊಲೀಸರನ್ನು ಬಿಟ್ಟು ಹೊಡೆಸಿದ್ರಿ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಮಾಜದ ಮುಖಂಡರಾದ ಲೋಕಿಕೇರೆ ನಾಗರಾಜ್, ಮಾಡಳು ಮಲ್ಲಿಕಾರ್ಜನ್, ಚಂದ್ರಶೇಖರ್ ಪೂಜಾರ್ ಭಾಗವಹಿಸಿದ್ದರು.