ಮುಖ್ಯ ಸುದ್ದಿ
ಹಿರಿಯೂರು, ಚಳ್ಳಕೆರೆಯಲ್ಲಿ ಲೋಕಾಯುಕ್ತ ದಾಳಿ | ಅರಣ್ಯ ಇಲಾಖೆ ACF ಸುರೇಶ್‍ಗೆ ಬೆಳ್ಳಂ ಬೆಳಗ್ಗೆ ಶಾಕ್
Published on
CHITRADURGA NEWS | 10 DECEMBER 2024
ಚಿತ್ರದುರ್ಗ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಉಪವಿಭಾಗದ ಅರಣ್ಯ ಇಲಾಖೆ ಎಸಿಎಫ್ (ACF) ಸುರೇಶ್ ಮನೆ ಅವರಿಗೆ ಸೇರಿದ ಚಳ್ಳಕೆರೆಯ ವಿಠಲ ನಗರದ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೈಡ್ ಮಾಡಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿಯಲ್ಲಿ 51 ಸಾವಿರ ದಾಟಿದ ರಾಶಿ ಅಡಿಕೆ
ಚಳ್ಳಕೆರೆಯ ನಿವಾಸ, ಹೊಸ ಬ್ಯಾಡರಹಟ್ಟಿ ಮನೆ, ಬೆಂಗಳೂರಿನಲ್ಲಿರುವ ಮನೆ ಹಾಗೂ ಹಿರಿಯೂರಿನಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.
ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ್ ಅವರ ಮಾರ್ಗದರ್ಶನ ಹಾಗೂ ಇನ್ಸ್‍ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
Continue Reading
Related Topics:ACF, Bangalore, Challakere, Chitradurga, Chitradurga Latest, Chitradurga news, Chitradurga Updates, featured, forest department, Hiriyur, Illegal Property, Kannada News, Lokayukta Attack, Police, ಅಕ್ರಮ ಆಸ್ತಿ, ಅರಣ್ಯ ಇಲಾಖೆ, ಎಸಿಎಫ್, ಕನ್ನಡ ಸುದ್ದಿ, ಚಳ್ಳಕೆರೆ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಪೊಲೀಸ್, ಬೆಂಗಳೂರು, ಲೋಕಾಯುಕ್ತ ದಾಳಿ, ಹಿರಿಯೂರು
Click to comment