ಮುಖ್ಯ ಸುದ್ದಿ
Fair: ಬುರುಜನಹಟ್ಟಿ ಮಲೆನಾಡ ಚೌಡೇಶ್ವರಿ ಜಾತ್ರೆ | ಕಣ್ಮನ ಸೆಳೆದ ದೇವಿಯ ಅಲಂಕಾರ
CHITRADURGA NEWS | 08 DECEMBER 2024
ಚಿತ್ರದುರ್ಗ: ನಗರದ ಬುರುಜನಹಟ್ಟಿಯ ಶ್ರೀ ಮಲೆನಾಡ ಚೌಡೇಶ್ವರಿ ದೇವಿ(choudeshwari Devi)ಯ ಗಂಗಾ ಪೂಜೆ ಮತ್ತು ಕಡೇ ಕಾರ್ತಿಕ ಜಾತ್ರಾ(Fair) ಮಹೋತ್ಸವ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಕ್ಲಿಕ್ ಮಾಡಿ ಓದಿ: 12. ಜಂಗಮಯ್ಯರ ಆಗಮನ
ಪ್ರಯುಕ್ತ ಗರ್ಭಗುಡಿ ದೇವಿ ಹಾಗೂ ಉತ್ಸವ ಮೂರ್ತಿಗಳಿಗೆ ಮನಮೋಹಕವಾಗಿ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯಿತು.
ಪಂಚಾಮೃತ ಅಭಿಷೇಕ, ಮಂಗಳಸ್ಥಾನ, ಗೋ ಪೂಜೆ, ಅಮ್ಮನವರಿಗೆ ಕಂಕಣಧಾರಣೆ, ಮದುವಣಗಿತ್ತಿ ಶಾಸ್ತ್ರ, ಮಹಾಮಂಗಳಾರತಿ ನೆರವೇರಿಸಿದ ಬಳಿಕ ಕೋಟೆಯ ಕರುವರ್ತಿ ಈಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಗಂಗಾ ಪೂಜೆ ಮತ್ತು ಕುಂಭ ಪೂಜೆ ನೆರವೇರಿಸಿದ ಬಳಿಕ ಹೂವಿನ ಅಲಂಕಾರ ಮತ್ತು ಜಾನಪದ ಕಲಾ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಜರುಗಿತು.
ಉರುಮೆ, ಡೊಳ್ಳು, ವೀರಗಾಸೆ, ಬೊಂಬೆ ಕುಣಿತ, ಸೇರಿದಂತೆ ಜಾನಪದ ಕಲಾ ಮೇಳಗಳು ಮೆರಣಿಗೆಗೆ ಮೆರುಗು ನೀಡಿದವು. ಮಹಿಳೆಯರು, ಯುವತಿಯರಾದಿಯಾಗಿ ವಾದ್ಯಗಳ ಸದ್ದಿಗೆ ಕುಣಿದು ಸಂಭ್ರಮಿಸಿದರು. ಭಕ್ತರ ತಮ್ಮ ಮನೆಗಳ ಮುಂಭಾಗ ನೀರು ನೀರು, ರಂಗೋಲಿ ಹಾಕಿ ಸ್ವಾಗತಿಸಿದರು. ಕೆಲವರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
ಕ್ಲಿಕ್ ಮಾಡಿ ಓದಿ: ವ್ಯಾಪಾರ ಹೆಚ್ಚಾಗವಂತೆ ಪೂಜೆ ಮಾಡುವುದಾಗಿ ಹೇಳಿ ಚಿನ್ನ ಕದ್ದು ಎಸ್ಕೇಪ್
ಕಡೇ ಕಾರ್ತಿಕ ಜಾತ್ರಾ ಮಹೋತ್ಸವದ ಅಂಗವಾಗಿ ಅಮ್ಮನವರಿಗೆ ದೇವಿಗೆ ಉಯ್ಯಾಲೋತ್ಸವ ನೆರವೇರಿಸಲಾಯಿತು. ಪಂಚಾಮೃತ ಅಭಿಷೇಕ ಮತ್ತು ಅಲಂಕಾರ ನಂತರ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಮಹಾ ಮಂಗಳಾರತಿ ನಂತರ ದೇವಸ್ಥಾನದ ಆವರಣದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಸ್ಥಳೀಯರು ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸವಿದರು.
ಕಾರ್ತಿಕ ಜಾತ್ರಾ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಥಳೀಯ ಮಹಿಳೆಯರು, ಯುವತಿಯರು ಬಣ್ಣ, ಬಣ್ಣದ ವೈವಿಧ್ಯಮಯ ರಂಗೋಲಿ ಬಿಡಿಸಿದರು. ಅಲ್ಲದೇ ನಾನಾ ಸ್ಪರ್ಧೆಗಳನ್ನು ಕೂಡ ನಡೆಸಲಾಯಿತು.
ಕ್ಲಿಕ್ ಮಾಡಿ ಓದಿ: ವಿಕಲಚೇತನರಿಗೆ ಶಾಸಕ ಎಂ.ಚಂದ್ರಪ್ಪ ತ್ರಿಚಕ್ರ ವಾಹನ, ಲ್ಯಾಪ್‍ಟಾಪ್ ವಿತರಣೆ
ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಶನಿವಾರ ಬುರುಜನಹಟ್ಟಿ ಮತ್ತು ನಗರದ ನಾನಾ ಬಡಾವಣೆಗಳ ಭಕ್ತರ ಮನೆಗಳಿಗೆ ಕರೆದೊಯ್ದು ಭಕ್ತರಿಂದ ಪೂಜೆ ಸ್ವೀಕರಿಸಲಾಯಿತು. ಫಲಹಾರ ಸೇರಿದಂತೆ ಪಾನಕ, ಕೋಸಂಬರಿ ಪ್ರಸಾದ ಅರ್ಪಿಸಿ ಭಕ್ತರು ಪೂಜೆ ನೆರವೇರಿಸಿದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶ್ರೀ ಮಲೆನಾಡ ಚೌಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ಪದಾಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.