Connect with us

    Operation: ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲ | ವೈದ್ಯರಿಗೆ ದಂಡ ಹಾಕಿದ ಗ್ರಾಹಕರ ನ್ಯಾಯಾಲಯ

    District Consumer Disputes Redressal Commission

    ಮುಖ್ಯ ಸುದ್ದಿ

    Operation: ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲ | ವೈದ್ಯರಿಗೆ ದಂಡ ಹಾಕಿದ ಗ್ರಾಹಕರ ನ್ಯಾಯಾಲಯ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 06 DECEMBER 2024

    ಚಿತ್ರದುರ್ಗ: ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಿದ ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲವಾಗಿ, ಮೂರನೇ ಮಗು ಜನನವಾದ ಹಿನ್ನೆಲೆಯಲ್ಲಿ

    ವೈದ್ಯರ ವಿರುದ್ಧ ದಾಖಲಾಗಿದ್ದ ದೂರಿನ ವಿವಾರಣೆ ನಡೆಸಿದ ಚಿತ್ರದುರ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.

    ಇದನ್ನೂ ಓದಿ:ದಿನ ಭವಿಷ್ಯ | 06 ಡಿಸೆಂಬರ್ | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…

    ಜಿಲ್ಲಾ ಆಸ್ಪತ್ರೆಯ ಹಿರಿಯ ಪ್ರಸೂತಿ ತಜ್ಞ ಡಾ.ಕೆ.ಶಿವಕುಮಾರ್ ಅವರು ಲಕ್ಕಮ್ಮ ಎಂಬುವವರಿಗೆ ನಡೆಸಿದ ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲವಾಗಿತ್ತು. ಇದರಿಂದ ಮೂರನೇ ಮಗುವಿಗೆ ಗರ್ಭಧಾರಣೆ ಮಾಡಿದ್ದರು. ಇದು ವೈದ್ಯರ ಸೇವಾ ನಿರ್ಲಕ್ಷ್ಯತೆಯಿಂದ ಸಂತಾನ ಹರಣ ಶಸ್ತ್ರಚಿಕಿತ್ಸೆ ವಿಫಲತೆಯಿಂದ ಉಂಟಾಗಿರುವ ಸೇವಾ ನಿರ್ಲಕ್ಷ್ಯತೆ ಎಂದು ಪರಿಗಣಿಸಿ ಒಟ್ಟು 55 ಸಾವಿರ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

    ಡಾ.ಕೆ.ಶಿವಕುಮಾರ್ ಅವರು, 2014 ಏಪ್ರಿಲ್ 28 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ್ದರು. ಇದು ಫಲಕಾರಿಯಾಗದೆ ದೂರುದಾರ ಮಹಿಳೆ 2020 ಜನವರಿ 26 ರಂದು ಮೂರನೇ ಮಗುವಿಗೆ ಜನ್ಮ ನೀಡಿದ್ದರು.

    ಇದನ್ನೂ ಓದಿ: ತಗ್ಗೋದೆ ಇಲ್ಲ ಎನ್ನುವ ತೆಲುಗಿನ ಪುಷ್ಪನಿಗೆ ವಿರೋಧ | ಕನ್ನಡ ಧೀರಭಗತ್‍ರಾಯನಿಗಾಗಿ ಪ್ರತಿಭಟನೆ

    ಈ ಬಗ್ಗೆ ವೈದ್ಯಕೀಯ ಸೇವಾ ನಿರ್ಲಕ್ಷ್ಯಕ್ಕೆ ಪರಿಹಾರ ಕೋರಿ ಚಿತ್ರದುರ್ಗ ಜಿಲ್ಲಾ ಗ್ರಾಹಕರ ಆಯೋಗದಲ್ಲಿ 2021 ಫೆಬ್ರವರಿ 17 ರಂದು ದೂರು ದಾಖಲಿಸಿದ್ದರು.

    ಈ‌‌ ಸಂಬಂಧ ದಾಖಲೆ ಪರಿಶೀಲಿಸಿದ ಆಯೋಗ ನೊಂದ ದೂರುದಾರರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದಿರುವುದಕ್ಕೆ ಪರಿಹಾರವಾಗಿ 2024 ಡಿಸೆಂಬರ್ 5 ರಂದು 30 ಸಾವಿರ ಹಾಗೂ  ಮಾನಸಿಕ, ದೈಹಿಕ ಹಿಂಸೆಗೆ ದೂರು ಖರ್ಚು 25 ಸಾವಿರ ಸೇರಿ ಒಟ್ಟು 55 ಸಾವಿರ ಪಾವತಿಸಲು ಆದೇಶಿಸಿದ್ದರು.

    ಇದನ್ನೂ ಓದಿ: ಅಡಿಕೆ ಧಾರಣೆ | ಯಾವ ಅಡಿಕೆಗೆ ಎಷ್ಟು ರೇಟ್ | ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

    ಈ ಆದೇಶವನ್ನು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಹೆಚ್.ಎನ್‌. ಕುಮಾರಿ ಮೀನಾ, ಮಹಿಳಾ ಸದಸ್ಯರಾದ ಬಿ.ಹೆಚ್.ಯಶೋಧ ಅದೇಶ ಹೊರಡಿಸಿರುತ್ತಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top