ಮುಖ್ಯ ಸುದ್ದಿ
SRS ಕಾಲೇಜಿನಲ್ಲಿ ಬಿ.ಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ
CHITRADURGA NEWS | 02 DECEMBER 2024
ಚಿತ್ರದುರ್ಗ: ನಗರದ SRS ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವತೀಯ ಬಿ.ಇಡಿ, ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ನಡೆಯಿತು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಜಿ.ಆರ್.ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು.
ಇದನ್ನೂ ಓದಿ: ಮಂಜುನಾಥ್ ಕೊಲೆ ಆರೋಪಿಗಳ ಬಂಧನ | ಭರಮಸಾಗರ ಪೊಲೀಸರ ಕಾರ್ಯಾಚರಣೆ
ಈ ವೇಳೆ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕನ ಪಾತ್ರ ಬಹು ಮುಖ್ಯವಾಗಿದೆ. ಬದಲಾಗುವ ಶೈಕ್ಷಣಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ಬೋಧನ ಕೌಶಲ್ಯಗಳು, ತಂತ್ರಗಳು ಹಾಗೂ ಅರ್ಹತೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಡಾ.ಕೆ.ವೆಂಕಟೇಶ್ ಮಾತನಾಡಿ, ಎರಡು ವರ್ಷದ ತರಬೇತಿಯಲ್ಲಿ ನಿಗಧಿಪಡಿಸಲಾದ ವಿವಿಧ ಪ್ರಾಯೋಗಿಕ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರಿಂದ ಸಂಶೋಧನಾ ಮನೋಭಾವ ಮತ್ತು ಸಮಸ್ಯಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವ ಸಾಮಾಥ್ರ್ಯಗಳನ್ನು ಗಳಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಂಡಿ ತಂದ ಬದಲಾವಣೆ
ಎಸ್.ಆರ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಮಾತನಾಡಿ ಬಿ.ಇಡಿ., ತರಬೇತಿಯಲ್ಲಿ ವಿದ್ಯಾರ್ಥಿ ಸಂಘದ ಮಹತ್ವ, ಅದರಿಂದ ಪ್ರಶಿಕ್ಷಣಾರ್ಥಿಗಳಲ್ಲಿ ವೃದ್ಧಿಯಾಗುವ ನಾಯಕ್ವದ ಗುಣಗಳ ಬಗ್ಗೆ ವಿವರಿಸಿದರು.
ಪ್ರಾಚಾರ್ಯ ಡಾ.ಟಿ.ಎಸ್.ರವಿ, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಹನುಮಂತಪ್ಪ, ಹಿರಿಯ ಉಪನ್ಯಾಸಕಿ ಪಿ.ಬಿ.ಆಶಾ, ಆರ್.ಮಮತಾ, ಟಿ.ಕಲ್ಲಪ್ಪ, ಬಿ.ರವಿಕುಮಾರ್, ಎಲ್.ಪಿ. ದಯಾನಂದ ಭಾಗವಹಿಸಿದ್ದರು.
ಇದನ್ನೂ ಓದಿ: ಸಿಟಿ ಇನ್ಸ್ಟಿಟ್ಯೂಟ್(City club) ಚುನಾವಣೆ | ನಿರ್ದೇಶಕರ ಫಲಿತಾಂಶ ಪ್ರಕಟ
ಪ್ರಶಿಕ್ಷಣಾರ್ಥಿಗಳಾದ ಎಚ್.ಆಶಾ ಸ್ವಾಗತಿಸಿದರು, ಎನ್.ಪೃಥ್ವಿ ಮತ್ತು ಕೆ.ರಮೇಶ್ ನಿರೂಪಿಸಿದರು. ಎನ್.ಪಲ್ಲವಿ ವಂದಿಸಿದರು.