
CHITRADURGA NEWS | 30 NOVEMBER 2024
ಚಿತ್ರದುರ್ಗ: ಮಾತು ಮತ್ತು ಆಲೋಚನೆಗಳು ಉದಾತ್ತಗೊಂಡಾಗ ನಮ್ಮ ಚಿಂತನೆಯ ಗುಣಮಟ್ಟ ಕೂಡಾ ಉತ್ತಮಗೊಳ್ಳುತ್ತದೆ ಎಂದು ಆಕಾಶವಾಣಿ ತಾಂತ್ರಿಕ ವಿಭಾಗದ ಮುಖ್ಯಸ್ಥ ಕೆ.ಕೆ.ಮಣಿ ಹೇಳಿದರು.
ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ, ಪ್ರಸಾರ ಭಾರತಿ ಹಾಗೂ ಚಿತ್ರದುರ್ಗ ಆಕಾಶವಾಣಿ ಕೇಂದ್ರದಿಂದ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಶೀರ್ಷಿಕೆಯಡಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನೂ ಓದಿ: ಚಿತ್ರದುರ್ಗ ಮೆಡಿಕಲ್ ಕಾಲೇಜು | ಬೋಧಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಜ್ಞಾನಕ್ಕೆ ಮಿಗಿಲಾದುದು ಯಾವುದೂ ಇಲ್ಲ. ಮಾತುಗಳು ಮತ್ತು ಆಲೋಚನೆಗಳು ಜಗತ್ತನ್ನು ಆಳುತ್ತವೆ. ಈ ನಿಟ್ಟಿನಲ್ಲಿ ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕನ್ನಡವನ್ನು ಕಟ್ಟುವ ನೆಲೆಗಟ್ಟಿನಲ್ಲಿ ಆಕಾಶವಾಣಿಯ ನಿರೂಪಕರ ಪಾತ್ರ ಮಹತ್ವದ್ದು. ಹೆಚ್ಚು ಹೆಚ್ಚು ನಾವೀನ್ಯತೆಯೊಂದಿಗೆ ಧ್ವನಿಯ ಮೂಲಕ ಭಾವ ಸಾಧ್ಯತೆಗಳನ್ನು ಶೋತೃಗಳ ಹೃದಯಕ್ಕೆ ದಾಟಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಭೀಮಸಮುದ್ರದಲ್ಲಿ ಜಿ.ಮಲ್ಲಿಕಾರ್ಜುನಪ್ಪ, ಶ್ರೀಮತಿ ಹಾಲಮ್ಮ ಪುಣ್ಯತಿಥಿ
ನಿಲಯದ ಕಾರ್ಯಕ್ರಮದ ಮುಖ್ಯಸ್ಥರಾದ ಎಸ್.ಆರ್.ಭಟ್ ಮಾತನಾಡಿ, ಕನ್ನಡದ ನೆಲ, ಜಲ ಭಾμÉ ಉಳಿಸಿ ಬೆಳೆಸುವುದರೊಂದಿಗೆ ಮಾಹಿತಿ, ಮನೋರಂಜನೆ, ಸಾಹಿತ್ಯ, ಶಿಕ್ಷಣ, ಕಲೆ ಇವುಗಳನ್ನು ಸ್ಪರ್ಧಾತ್ಮಕ ಮಾಧ್ಯಮ ಜಗತ್ತಿನಲ್ಲಿ ಇಂದಿಗೂ ಗುಣಾತ್ಮಕ ಒಳನೋಟದೊಂದಿಗೆ ನಿತ್ಯವೂ ಪ್ರಸ್ತುತ ಪಡಿಸುತ್ತಿದೆ ಎಂದರು.
ಪ್ರಸಾರ ವಿಭಾಗದ ಮುಖ್ಯಸ್ಥರಾದ ಡಿ.ಆರ್.ಶಿವಪ್ರಕಾಶ್ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಆಕಾಶವಾಣಿ ವರ್ಷದ 365 ದಿನಗಳ ಕಾಲ ಆಯಾ ರಾಜ್ಯದ ಭಾμÉ, ನಾಡು, ನುಡಿಗಾಗಿ ಸೇವೆಸಲ್ಲಿಸುತ್ತಿದೆ. ಭಾರತದ ಭಾμÉ, ಸಂಸ್ಕøತಿ, ನುಡಿ, ಪರಂಪರೆಯನ್ನು ಈ ನಾಡಿಗೆ ಅರ್ಥಪೂರ್ಣವಾಗಿ ಕಟ್ಟಿಕೊಡುವ ಕೆಲಸ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಕಾರ್ಯಕ್ರಮದಲ್ಲಿ ತಾಂತ್ರಿಕ ವಿಭಾಗದ ಆನಂದಪ್ಪ, ಶಿವಮೂರ್ತಿ, ತ್ಯಾಗರಾಜ್, ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
