ಮುಖ್ಯ ಸುದ್ದಿ
Bhadra: ವಿವಿ ಸಾಗರಕ್ಕೆ ಹರಿಯುವ ಮಾರ್ಗದಲ್ಲಿದ್ದ ಸೇತುವೆ ಕುಸಿತ |ವಿವಿ ಸಾಗರಕ್ಕೆ ಹರಿಯುವ ನೀರು ಸ್ಥಗಿತ
CHITRADURGA NEWS | 30 NOVEMBER 2024
ಚಿತ್ರದುರ್ಗ: ಭದ್ರಾ (Bhadra) ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುತ್ತಿದ್ದ ಮಾರ್ಗದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ಪರಿಣಾಮ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆ, ಅಜ್ಜಂಪುರ ಸಮೀಪದ ಕಾಟಿನಗೆರೆ ಹಾಗೂ ಅಬ್ಬಿನಹೊಳಲು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಕುಸಿದು ಬಿದ್ದಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಒಳ ಹರಿವು ಬಂದ್ | ಈವರೆಗೆ ಹರಿದು ಬಂದ ನೀರಿನ ಪ್ರಮಾಣ ಎಷ್ಟು ?
ಇದರಿಂದ ಕಾಟಿನಗೆರೆ ಗ್ರಾಮದ ಸಂಪರ್ಕವೇ ಕಡಿದು ಹೋಗಿದೆ ಎಂದು ಅಲ್ಲಿನ ರೈತರು, ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಲ್ಲಿ ಕಾಲುವೆ ಮೂಲಕ ನೀರು ಹರಿಸಲು ಆಗಿರಲಿಲ್ಲ. ಈ ಕಾರಣಕ್ಕೆ ಬೆಟ್ಟದತಾವರೆಕೆರೆ ಬಳಿ ಲಿಫ್ಟ್ ಮಾಡಿದ ನೀರನ್ನು ಅಜ್ಜಂಪುರ ತಾಲೂಕಿನ ಹೆಬ್ಬೂರು ಬಳಿಯಿರುವ ವೈ ಜಂಕ್ಷನ್ ಬಳಿ ಹಳ್ಳಕ್ಕೆ ತಿರುವಿ, ಅಲ್ಲಿಂದ ವೇದಾವತಿ ನದಿ ತಲುಪಿಸಿ ವಿವಿ ಸಾಗರಕ್ಕೆ ಹರಿಸಲಾಗುತ್ತಿತ್ತು.
ಇದನ್ನೂ ಓದಿ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಲತೇಶ್ ಮುದ್ದಜ್ಜಿ ಅವಿರೋಧ | ರಾಜ್ಯ ಪರಿಷತ್ತಿಗೆ ಮೂಡದ ಒಮ್ಮತ
ಸತತ ನೀರು ಹರಿದ ಪರಿಣಾಮ ಹಳ್ಳದ ವ್ಯಾಪ್ತಿ ಕೂಡಾ ಹಿಗ್ಗಿದ್ದು, ಇಲ್ಲಿನ ಹಳೆಯ ಸೇತುವೆ ಶಿಥಿಲಗೊಂಡು, ಮಣ್ಣು ಸವಕಳಿಯಾಗಿ ಸೇತುವೆ ಕುಸಿದಿದೆ.
ಇಲ್ಲಿ ಸೇತುವೆ ನಿರ್ಮಾಣಕ್ಕೆ ಕಾಲಾವಕಾಶ ಬೇಕು. ಜನರಿಗೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ಭದ್ರಾ ಜಲಾಶಯದಿಂದ ನೀರು ಹರಿಯುವುದಿಲ್ಲ.