ಮುಖ್ಯ ಸುದ್ದಿ
Government Employee: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾಲತೇಶ್ ಮುದ್ದಜ್ಜಿ ಅವಿರೋಧ | ರಾಜ್ಯ ಪರಿಷತ್ತಿಗೆ ಮೂಡದ ಒಮ್ಮತ
CHITRADURGA NEWS | 30 NOVEMBER 2024
ಚಿತ್ರದುರ್ಗ: ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ (Government Employee)ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆ ಅವಿರೋಧ ಆಯ್ಕೆ ಮೂಲಕ ಸರಾಗವಾಗಿ ಬಗೆಹರಿದಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಮೆದೇಹಳ್ಳಿ ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾಲತೇಶ ಮುದ್ದಜ್ಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರ ಸಂಘ | ಯಾವ ಇಲಾಖೆಯಿಂದ ಯಾರು ಆಯ್ಕೆ | ಸಂಪೂರ್ಣ ವಿವರ
ಜಿಲ್ಲಾ ಖಜಾಂಚಿಯಾಗಿ ಗುತ್ತಿನಾಡು ಕುವೆಂಪು ಮಾದರಿ ಶಾಲೆ ಮುಖ್ಯಶಿಕ್ಷಕ ಎ.ಮಲ್ಲಿಕಾರ್ಜುನ ಕೂಡಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಚುನಾವಣಾಧಿಕಾರಿ ಸಿ.ಟಿ.ಜಗನ್ನಾಥ್ ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 20 ಕೋಳಿಮರಿ ವಿತರಣೆ | ರೈತ ಮಹಿಳೆಯರಿಂದ ಅರ್ಜಿ ಆಹ್ವಾನ
ಡಿಸೆಂಬರ್ 4 ರಂದು ಜಿಲ್ಲಾಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು.
ನಾಮಪತ್ರ ಹಿಂಪಡಯಲು ನವೆಂಬರ್ 29 ಕೊನೆಯ ದಿನವಾಗಿದ್ದು, ಸಂಜೆ ವೇಳೆಗೆ 20 ತಿಂಗಳ ಅಧಿಕಾರ ಹಂಚಿಕೆಯ ರಾಜಿ ಸೂತ್ರದೊಂದಿಗೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯ ಪರಿಷತ್ತಿಗೆ ಡಿ.4 ರಂದು ಚುನಾವಣೆ:
ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ ಸರ್ಕಾರಿ ಶಾಲೆ ಶಿಕ್ಷಕ ಎಸ್.ರಾಜಪ್ಪ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಅಧೀಕ್ಷಕ ರಾಜೇಂದ್ರ ಚಕ್ರವರ್ತಿ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಡ್ರೋನ್ ಮೂಲಕ ಫೋಟೋ, ವಿಡಿಯೋಗ್ರಫಿ ಕಲಿಯುವ ಆಸಕ್ತಿ ಇದೆಯೇ? ಆಗಿದ್ದರೆ ಇಂದೇ ಅರ್ಜಿ ಸಲ್ಲಿಸಿ
ಇಬ್ಬರ ನಡುವೆ ರಾಜಿಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಯಾರೂ ನಾಮಪತ್ರ ಹಿಂಪಡೆದಿಲ್ಲ. ಹೀಗಾಗಿ ಡಿಸೆಂಬರ್ 4 ರಂದು ಚುನಾವಣೆ ಮೂಲಕ ಆಯ್ಕೆ ನಡೆಯಲಿದೆ.