ಮುಖ್ಯ ಸುದ್ದಿ
Bhimasamudra: ಭೀಮಸಮುದ್ರ ವ್ಯಾಪ್ತಿಯ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ
CHITRADURGA NEWS | 27 NOVEMBER 2024
ಚಿತ್ರದುರ್ಗ: ಭೀಮಸಮುದ್ರ(Bhimasamudra) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೆಟ್ಟದ ನಾಗೇನಹಳ್ಳಿ, ನೆಲ್ಲಿಕಟ್ಟೆ ಗ್ರಾಮಗಳಲ್ಲಿ ಸಿಸಿ ರಸ್ತೆ, ಸೋಲಾರ್ ವಿದ್ಯುತ್ ದೀಪ ಕಾಮಗಾರಿಗೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಭೂಮಿ ಪೂಜೆ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ನಂತರ ಮಾತನಾಡಿದ ಶಾಸಕರು, ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಬರುವ ಎಲ್ಲಾ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಕಾಮಗಾರಿಯಲ್ಲಿ ಯಾವುದೇ ಲೋಪ ದೋಷ ಬರದಂತೆ ಕೆಲಸ ಮಾಡಬೇಕು ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.
ಕ್ಲಿಕ್ ಮಾಡಿ ಓದಿ: ನೇರ ನೇಮಕಾತಿ ಸಂದರ್ಶನ ನವೆಂಬರ್ 30ಕ್ಕೆ
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಗಿರಿ. ಎಂ ಜಾನಕಲ್, ಕೆಡಿಬಿ ಸದಸ್ಯ ಸಿ.ಬಿ. ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಗ್ರಾಮ ಉಪಾಧ್ಯಕ್ಷ ಉಮೇಶ್, ಪಂಚಾಯಿತಿ ಸದಸ್ಯ ಪ್ರಕಾಶ್ ಸೇರಿದಂತೆ ಗುತ್ತಿಗೆದಾರರು, ಗ್ರಾಮಸ್ಥರು ಇದ್ದರು.