Connect with us

    Defamation suit: ಮಾನನಷ್ಟ ಮೊಕದ್ದಮೆ, ನ್ಯಾಯಾಂಗ ನಿಂದನೆ ಕುರಿತು ಉಪನ್ಯಾಸ | ಚಿತ್ರದುರ್ಗ ಪತ್ರಕರ್ತರ ಸಂಘದಿಂದ ಆಯೋಜನೆ

    ಮಾನನಷ್ಟ ಮೊಕದ್ದಮೆ, ನ್ಯಾಯಾಂಗ ನಿಂದನೆ ಕುರಿತು ಉಪನ್ಯಾಸ

    ಮುಖ್ಯ ಸುದ್ದಿ

    Defamation suit: ಮಾನನಷ್ಟ ಮೊಕದ್ದಮೆ, ನ್ಯಾಯಾಂಗ ನಿಂದನೆ ಕುರಿತು ಉಪನ್ಯಾಸ | ಚಿತ್ರದುರ್ಗ ಪತ್ರಕರ್ತರ ಸಂಘದಿಂದ ಆಯೋಜನೆ

    CHITRADURGA NEWS | 09 NOVEMBER 2024

    ಚಿತ್ರದುರ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಮಾನನಷ್ಟ ಮೊಕದ್ದಮೆ(Defamation suit), ನ್ಯಾಯಾಂಗ ನಿಂದನೆ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ 

    ವಕೀಲರು, ಪತ್ರಕರ್ತರು, ಚಿತ್ರನಟರಾದ ಎಂ.ವಿ.ರೇವಣಸಿದ್ದಯ್ಯ ಮಾನನಷ್ಟ ಮೊಕದ್ದಮೆ, ನ್ಯಾಯಾಂಗ ನಿಂದನೆ ಕುರಿತು ಉಪನ್ಯಾಸ ನೀಡಿ, ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ 4ನೇ ಅಂಗವಾಗಿ ವಾಚ್ ಡಾಗ್ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಪತ್ರಿಕಾರಂಗ ಪ್ರಬಲವಾದ ಮಾಧ್ಯಮವಾಗಿದೆ. ಪತ್ರಿಕೆ ಓದುವುದರಿಂದ ಮನಸ್ಸಿಗೆ ಸಂತೋಷ ನಿಡುತ್ತದೆ. ದೃಶ್ಯ ಮಾಧ್ಯಮಗಳು ಪತ್ರಿಕೆಗಳು ನೀಡಿದಂತೆ ಸರಿಯಾದ ರೀತಿಯಲ್ಲಿ ಜನರಿಗೆ ಸುದ್ದಿಯನ್ನು ನೀಡುತ್ತಿಲ್ಲ, ಯಾವಾಗಲೂ ತಮ್ಮ TRP ಕಡೆ ಗಮನ ನೀಡುತ್ತಾರೆ.

    ನೋಡುಗರಿಗೆ ಬೇಕಾದ ಮಾಹಿತಿಯಾಗಲಿ ಸುದ್ದಿಯನ್ನಾಗಲೀ ನೀಡುವುದಿಲ್ಲ, ದೃಶ್ಯ ಮಾಧ್ಯಮಗಳು ಬಂದ ಮೇಲೆ ಪತ್ರಿಕೆಗಳು ಕಡಿಮೆಯಾಗುತ್ತವೆ ಎಂದು ಬಹಳಷ್ಟು ಜನತೆ ಹೇಳುತ್ತಿದ್ದರು. ಆದರೆ ಯಾವ ಪತ್ರಿಕೆಗಳು ಕಡಿಮೆಯಾಗಿಲ್ಲ ಇನ್ನೂ ಹೆಚ್ಚಿನ ರೀತಿಯಲ್ಲಿ ಹೊಸ ಹೊಸ ಪತ್ರಿಕೆಗಳು ಬರುತ್ತಿವೆ ಎಂದರು.

    ಪತ್ರಿಕೆಗಳಲ್ಲಿ ಮಾನಹಾನಿಗೆ ಸಂಬಂಧಪಟ್ಟಂತೆ ಸುದ್ದಿ ಪ್ರಕಟವಾದರೆ ಅದಕ್ಕೆ ಸಂಬಂಧಪಟ್ಟಂತೆ ಶೇ.10 ರಿಂದ 20 ರಷ್ಟು ಜನ ಮಾತ್ರ ನ್ಯಾಯಾಲಯದ ಮೊರೆ ಹೋಗುತ್ತಾರೆ. ಇದರಲ್ಲಿ ಶೇ.10ರಷ್ಟು ಜನ ಮಾತ್ರ ಮುಂದುವರೆಯುತ್ತಾರೆ.

    ಕ್ಲಿಕ್ ಮಾಡಿ ಓದಿ: ವಿವಿ ಸಾಗರದ ಒಳಹರಿವು ಹೆಚ್ಚಳ | 127.50 ಅಡಿ ಮುಟ್ಟಿದ ಜಲಾಶಯ

    ವಕೀಲರು, ಪತ್ರಕರ್ತರಾದ ಎಂ.ವಿ.ರೇವಣಸಿದ್ದಯ್ಯ ಮಾನನಷ್ಟ ಮೊಕದ್ದಮೆ, ನ್ಯಾಯಾಂಗ ನಿಂದನೆ ಕುರಿತು ಉಪನ್ಯಾಸ

    ವಕೀಲರು, ಪತ್ರಕರ್ತರಾದ ಎಂ.ವಿ.ರೇವಣಸಿದ್ದಯ್ಯ ಮಾನನಷ್ಟ ಮೊಕದ್ದಮೆ, ನ್ಯಾಯಾಂಗ ನಿಂದನೆ ಕುರಿತು ಉಪನ್ಯಾಸ

    ಇದರಲ್ಲಿಯೂ ಸಹಾ ಶೇ.5 ರಷ್ಟು ಜನ ಮಾತ್ರ ನ್ಯಾಯಾ ಸಿಗುವವರೆಗೂ ಹೋರಾಟವನ್ನು ಮಾಡುತ್ತಾರೆ. ಪತ್ರಕರ್ತರಾದವರು ನ್ಯಾಯಾಲಯದ ತೀರ್ಪಿನ ಬಗ್ಗೆಯೂ ಸಹಾ ತಮ್ಮ ಪತ್ರಕೆಗಳಲ್ಲಿ ಬರೆಯಬಹುದಾಗಿದೆ ಆದರೆ ಅದಕ್ಕೆ ತಕ್ಕ ಸಾಕ್ಷಿ, ಪುರಾವೆಗಳನ್ನು ಇಟ್ಟುಕೊಳ್ಳಬೇಕಿದೆ.

    ನ್ಯಾಯಾಲಯದ ಸುದ್ದಿಗಳನ್ನು ಪ್ರಕಟ ಮಾಡಿದರೆ ನ್ಯಾಯಾಂಗ ನಿಂದನೆಯಾಗುವುದಿಲ್ಲ, ನ್ಯಾಯಾಲದ ವಿರುದ್ದ ಏನಾದರೂ ಸುದ್ದಿ ಪ್ರಕಟವಾದರೆ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ, ತಮ್ಮ ಪತ್ರಿಕೆಗಳಲ್ಲಿ ನ್ಯಾಯಾಲಯದ ಬಗ್ಗೆಯಾಗಲಿ, ನ್ಯಾಯಾಧೀಶರ ಬಗ್ಗೆ ಬರೆಯುವಾಗ ಸರಿಯಾದ ಸಾಕ್ಷಿಗಳನ್ನು ಇಟ್ಟುಕೊಳ್ಳಬೇಕಿದೆ ಎಂದು ತಿಳಿಸಿದರು.

    ಹಿರಿಯ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ತಪ್ಪು ಮಾಡಿದಾಗ ನೈಜ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ ಎಂದು ಹೇಳಿದರು.

    ಕ್ಲಿಕ್ ಮಾಡಿ ಓದಿ:  ಶಸ್ತ್ರಾಸ್ತ್ರ ತಂದು ಪೊಲೀಸ್ ಠಾಣೆಗೆ ಒಪ್ಪಿಸಿ | ಡಿಸಿ ವೆಂಕಟೇಶ್

    ಮಾನನಷ್ಠ ಮೊಕದ್ದಮೆ, ನಾಯ್ಯಾಲಯ ನಿಂದನೆ ಇವೆರಡು ಪತ್ರಕರ್ತರ ಮುಂದಿರುವ ಸವಾಲುಗಳು, ದೌರ್ಜನ್ಯ, ದಬ್ಬಾಳಿಕೆ, ಕಿರುಕುಳದಿಂದ ಸಾರ್ವಜನಿಕರು ಹೇಗೆ ಕಾನೂನು ಮೂಲಕ ರಕ್ಷಣೆ ಪಡೆದುಕೊಳ್ಳಬಹುದು ಎಂದು ಮಾಧ್ಯಮಗಳು ಬರವಣಿಗೆಯ ಮೂಲಕ ಅರಿವು ಮೂಡಿಸಬೇಕು ಎಂದರು.

    ಸ್ವಾಸ್ಥ್ಯ ಸಮಾಜ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಅತಿ ಮುಖ್ಯ. ನ್ಯಾಯಾಲಯ ಪ್ರಜಾಪ್ರಭುತ್ವದಲ್ಲಿ ನ್ಯಾಯ ಕೊಡುವ ಅಂಗ. ಅದೇ ರೀತಿ ಪತ್ರಿಕಾರಂಗ ಸಂವಿಧಾನದ ನಾಲ್ಕನೇ ಅಂಗ. ಸರ್ಕಾರ ತಪ್ಪು ಮಾಡಿದಾಗ ನೈಜ ಸುದ್ದಿಗಳನ್ನು ಪ್ರಕಟಿಸಿ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ.

    ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಅಹೋಬಲಪತಿ ಮಾತನಾಡಿ, ಪತ್ರಕರ್ತನಾದವನು ಎಲ್ಲವನ್ನು ಬಲ್ಲೆ ಎಂಬ ಭ್ರಮೆಯಲ್ಲಿರಬಾರದು. ವಿದ್ಯಾರ್ಹತೆ, ವೃತ್ತಿಯ ಜೊತೆಯಲ್ಲಿ ಕಾನೂನು ಅರಿವು ಮುಖ್ಯ. ಸುದ್ದಿಯನ್ನು ಪ್ರಕಟಿಸುವ ತವಕದಲ್ಲಿ ಕೆಲವೊಮ್ಮೆ ಮಾನನಷ್ಟಕ್ಕೊಳಗಾಗಬೇಕಾಗುತ್ತದೆ.

    ನ್ಯಾಯಾಂಗ ನಿಂದನೆಯಾಗದಂತೆಯೂ ಎಚ್ಚರಿಕೆಯಿಂದ ಸುದ್ದಿ ಪ್ರಕಟಿಸುವ ಚಾಣಾಕ್ಷತನ ಪತ್ರಕರ್ತನಿಗಿರಬೇಕು. ಅದಕ್ಕಾಗಿ ಪತ್ರಕರ್ತ ಇಂತಹ ಉಪನ್ಯಾಸಗಳ ಮೂಲಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕು ಎಂದರು.

    ಕ್ಲಿಕ್ ಮಾಡಿ ಓದಿ: ಹಸಿವು ಎಂದು ಅನ್ನ ಕೇಳಿದ ಮಗುವನ್ನೇ ಗುದ್ದಿ ಕೊಂದನಾ ತಂದೆ..!

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ದಿನೇಶ್‍ ಗೌಡಗೆರೆ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ತುಕಾರಾಂ, ಎಸ್.ಜೆ.ಎಂ.ಕಾನೂನು ಕಾಲೇಜು ಪ್ರಾಧ್ಯಾಪಕರಾದ ಸುಮನ ಅಂಗಡಿ ಇದ್ದರು.

    ನಿಹಾರಿಕ ಪ್ರಾರ್ಥಿಸಿದರು, ವಿನಾಯಕ ಸ್ವಾಗತಿಸಿದರು. ತಿಪ್ಪೇಸ್ವಾಮಿ ನಾಕಿಕೆರೆ ನಿರೂಪಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top