ಮುಖ್ಯ ಸುದ್ದಿ
VV SAGARA: ವಿವಿ ಸಾಗರಕ್ಕೆ ಮತ್ತೆ ಹರಿದು ಬಂದಳು ಭದ್ರೆ | ಕೋಡಿ ಬೀಳಲು ಎರಡೂವರೆ ಅಡಿ ಬಾಕಿ
CHITRADURGA NEWS | 08 NOVEMBER 2024
ಚಿತ್ರದುರ್ಗ: ಮಳೆ ನಿಂತ ಮೇಲೆ ಮತ್ತೆ ವಿವಿ ಸಾಗರ(VV SAGARA)ಕ್ಕೆ ನೀರಿ ಹರಿಯುವುದು ಅನುಮಾನ ಹಾಗಾಗಿ ಈ ವರ್ಷ ಜಲಾಶಯ ಕೋಡಿ ಬೀಳುವುದು ಡೌಟು ಎನ್ನುತ್ತಿದ್ದಾಗಲೇ ಭದ್ರಾ ನೀರು ಹರಿಯಲು ಶುರುವಾಗಿದೆ.
ಕ್ಲಿಕ್ ಮಾಡಿ ಓದಿ: CMCRI: ಚಿತ್ರದುರ್ಗ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಡೀನ್ ನೇಮಕ
ಹೌದು, ಕಳೆದೊಂದು ತಿಂಗಳಿಂದ ಜಿಲ್ಲೆಯ ವೇದಾವತಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಾಣಿವಿಲಾಸ ಸಾಗರ ಜಲಾಶಯಕ್ಕೆ 6 TMC ಗಿಂತಲೂ ಅಧಿಕ ಪ್ರಮಾಣದ ನೀರು ಹರಿದು ಬಂದಿತ್ತು. ಇದರಿಂದಾಗಿ ವಿವಿ ಸಾಗರ ಜಲಾಶಯ ಮಟ್ಟ ಬರೋಬ್ಬರಿ 127 ಅಡಿ ದಾಟಿತ್ತು.
ಆನಂತರ ಮಳೆ ಬಿಡುವು ಕೊಟ್ಟಾಗ ಜಲಾಶಯದ ಒಳಹರಿವು ಸಂಪೂರ್ಣ ನಿಂತು ಹೋಗಿತ್ತು. ಈಗ ಭದ್ರಾ ಮೇಲ್ದಂಡೆ ಯೋಜನೆಯಡಿ ಜಲಾಶಯಕ್ಕೆ ಮತ್ತೆ ನೀರು ಹರಿಸಲು ಆರಂಭಿಸಲಾಗಿದೆ.
ಇದರಿಂದ ನ.7 ರಂದು 924 ಕ್ಯೂಸೆಕ್ ಹಾಗೂ ಇಂದು ಅಂದರೆ ನವೆಂಬರ್ 8 ರಂದು 924 ಕ್ಯೂಸೆಕ್ ನೀರಿ ಹರಿದು ಬಂದಿದೆ.
ಕ್ಲಿಕ್ ಮಾಡಿ ಓದಿ: Municipal Council: ನಗರಸಭೆಯಿಂದ ಪ್ರೋತ್ಸಾಹ ಹಾಗೂ ಸಹಾಯಧನಕ್ಕೆ ಅರ್ಜಿ ಆಹ್ವಾನ
ಜಲಾಶಯಕ್ಕೆ ಮತ್ತೆ ಒಳಹರಿವು ಪ್ರಾರಂಭವಾಗಿದ್ದು, ಕೋಡಿ ಬೀಳಲು ಇನ್ನು ಎರಡುವರೆ ಅಡಿ ಮಾತ್ರ ಬಾಕಿ ಇದೆ.
ಸದ್ಯ ಜಲಾಶಯದಲ್ಲಿ 127.40 ಅಡಿಗೆ ನೀರು ಬಂದಿದ್ದು, ಒಟ್ಟಾರೆ 28.24 TMC ಅಡಿ ನೀರು ಸಂಗ್ರಹವಾಗಿದೆ.