Connect with us

    Madakari Nayaka; ಮದಕರಿ ಪ್ರತಿಮೆಗೆ ವಾಲ್ಮೀಕಿ ಶ್ರೀ ಪುಷ್ಪಾರ್ಚನೆ | ದುರ್ಗದ ದೊರೆಯ ಅದ್ದೂರಿ ಜಯಂತಿಗೆ ನಿರ್ಧಾರ

    ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ

    ಮುಖ್ಯ ಸುದ್ದಿ

    Madakari Nayaka; ಮದಕರಿ ಪ್ರತಿಮೆಗೆ ವಾಲ್ಮೀಕಿ ಶ್ರೀ ಪುಷ್ಪಾರ್ಚನೆ | ದುರ್ಗದ ದೊರೆಯ ಅದ್ದೂರಿ ಜಯಂತಿಗೆ ನಿರ್ಧಾರ

    CHITRADURGA NEWS | 13 OCTOBER 2024

    ಚಿತ್ರದುರ್ಗ: ರಾಜವೀರ ಮದಕರಿ ನಾಯಕ ಜಯಂತೋತ್ಸವ ಅಂಗವಾಗಿ ನಗರದ ಮದಕರಿ ವೃತ್ತದಲ್ಲಿ ಇರುವ ರಾಜವೀರ ಮದಕರಿ ನಾಯಕ(Madakari Nayaka) ಪ್ರತಿಮೆಗೆ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಪುಷ್ಪಾರ್ಚನೆ ಸಲ್ಲಿಸಿದರು.

    ಕ್ಲಿಕ್ ಮಾಡಿ ಓದಿ: Membership Registration; ಸದಸ್ಯತ್ವ ನೊಂದಣಿ ಹೆಚ್ಚಾದರೆ ಜಿಪಂ ಚುನಾವಣೆ ಗೆಲುವು ಸುಲಭ | ಎಂ.ಚಂದ್ರಪ್ಪ

    ನಂತರ ಮಾತನಾಡಿದ ಶ್ರೀಗಳು, ರಾಜವೀರ ಮದಕರಿ ನಾಯಕ ಯಾವೊಂದು ಜಾತಿಗೆ ಸೀಮಿತವಾಗದೆ, ಜಾತ್ಯಾತೀತ ನಾಯಕನಾಗಿದ್ದವರು.

    ನಾಡಿನಾದ್ಯಂತ ಇಂದು ಚಿತ್ರದುರ್ಗ ಆಳಿದ ನಾಡದೂರೆ ರಾಜವೀರ ಮದಕರಿ ನಾಯಕ ಜಯಂತೋತ್ಸವ ಅತಂತ್ಯ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.

    ಬಹುತೇಕ ದಕ್ಷಿಣ ಭಾರತದಲ್ಲಿ ಮೊಗಲರ ಧಾಳಿಯನ್ನು ಸಮರ್ಥವಾಗಿ ಎದುರಿಸಿದ ತನ್ನ ಸುತ್ತಾ-ಮುತ್ತಲ್ಲಿನ ವೈರಿಗಳನ್ನು ಹಿಮೆಟ್ಟಿಸಿ ಚಿತ್ರದುರ್ಗ ಮದಕರಿ ನಾಯಕ 25 ವರ್ಷಗಳ ಆಳ್ವಿಕೆ ನಡೆಸಿದ ನಾಯಕ ಮದಕರಿ ನಾಯಕ.

    ಯಾವುದೇ ರೀತಿಯ ತಾರತಮ್ಯ ಮಾಡದೆ ಎಲ್ಲಾ ಜಾತಿಯವರನ್ನು ಸಮಾನಾಗಿ ಕಾಣುವುದರ ಮೂಲಕ ರಾಜ್ಯಭಾರ ನಡೆಸಿದ್ದಾನೆ ಎಂದರು.

    ಕ್ಲಿಕ್ ಮಾಡಿ ಓದಿ: Jaldhi Festival; ಬುಡಕಟ್ಟು ಸಂಪ್ರದಾಯದ ಜಲಧಿ ಉತ್ಸವ | ಶಾಂತವೀರ ಶ್ರೀ ಭಾಗೀ

    ಮದಕರಿ ನಾಯಕ ಜಯಂತಿಯನ್ನು ಪ್ರತಿ ವರ್ಷ ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ವರ್ಷ ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತಿದೆ. ಮುಂದಿನ ವರ್ಷ ಮದಕರಿ ನಾಯಕ ಜಯಂತಿ ಅದ್ದೂರಿಯಾಗಿ ಆಚರಿಸಲಾಗುವುದು.

    ಈಗ ದಸರಾ, ಶರಣ ಸಂಸ್ಕೃತಿ ಉತ್ಸವ ನಡೆದಿದೆ. ನಿನ್ನೆ ಅದರ ಮೆರವಣಿಗೆ ಆಗಿದೆ. ಮದಕರಿ ಜಯಂತಿಯ ಅದ್ದೂರಿ ಅಚರಣೆಯ ಬಗ್ಗೆ ತೀರ್ಮಾನ ತೆಗೆದುಕೊಂಡು ಎಲ್ಲರನ್ನು ಜೊತೆಗೂಡಿಸಿ ಆಚರಣೆ ಮಾಡಲಾಗುವುದು ಎಂದರು.

    ಕ್ಲಿಕ್ ಮಾಡಿ ಓದಿ: Bichchugatti Bharamanna Nayaka; ಜಯದೇವ ಶ್ರೀಗಳಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ವಂಶಸ್ಥರಿಂದ ಭಕ್ತಿ ಸಮರ್ಪಣೆ

    ಜಯಂತೋತ್ಸವದಲ್ಲಿ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್, ಜೆಡಿಎಸ್‌ನ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಬಿಜೆಪಿ ಮುಖಂಡರಾದ ರತ್ನಮ್ಮ, ಸೋಮು, ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಕಾಟೇಹಳ್ಳಿ ಕರಿಯಣ್ಣ, ಜಿ.ಟಿ.ರಾಜೇಶ್, ನಗರಸಭಾ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಅಹೋಬಲ ಕಂಪನಿಯ ಅರುಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top