ಹೊಳಲ್ಕೆರೆ
Holalkere: ಶಿವಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆ | ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಆರ್.ಗಿರೀಶ್ ಭಾಗೀ
CHITRADURGA NEWS | 24 SEPTEMBER 2024
ಹೊಳಲ್ಕೆರೆ(Holalkere): ಸಹಕಾರ ಸಂಘದಲ್ಲಿ ಕೆಲಸ ಮಾಡುವುದು ಲಾಭದಾಯಕ ಹುದ್ದೆಯಲ್ಲ. ಸೇವಾ ಮನೋಭಾವನೆಯಿಂದ ಕೆಲಸ ಮಾಡುವವರ ಅಗತ್ಯ ಇದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್ ಹೇಳಿದರು.
ಹೊಳಲ್ಕರೆ ತಾಲೂಕು ಶಿವಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಇದನ್ನೂ ಓದಿ: ಭೀಮಸಮುದ್ರ, ಚನ್ನಗಿರಿ, ಶಿವಮೊಗ್ಗದಲ್ಲಿ ಇಂದಿನ ಅಡಿಕೆ ರೇಟ್
ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ಕೈ, ಬಾಯಿ ಶುದ್ದವಾಗಿರಬೇಕಿದೆ. ಆಗ ಮಾತ್ರ ಸಹಕಾರ ಸಂಘ ಬೆಳೆಯಲು ಸಾಧ್ಯವಿದೆ. ಸಹಕಾರ ಸಂಘದ ಸದಸ್ಯನಾಗಿ ನನ್ನ ಜೀವನ ಇರುವವರೆಗೂ ಯಾವ ರೈತರಿಂದಲೂ ಏನನ್ನು ಅಪೇಕ್ಷೆ ಮಾಡದೆ ಪ್ರಮಾಣಿಕವಾಗಿ ಸೇವೆ ಮಾಡುತ್ತೇನೆ ಎಂದರು.
ಇಲ್ಲಿ ಜಾತಿ ತಾರತಮ್ಯ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸಂಘವನ್ನು ಪ್ರಗತಿಪಥದತ್ತ ತೆಗೆದುಕೊಂಡು ಹೋಗಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ | ವಾಹನ ಸಂಚರಿಸಬೇಕಾದ ಮಾರ್ಗ ಇಲ್ಲಿದೆ
ಸಹಕಾರ ಸಂಘದಲ್ಲಿ ಇರುವ ಆಡಳಿತ ಮಂಡಳಿಯವರು ತಮ್ಮ ಸಂಘದ ಬಗ್ಗೆ ಕಾಳಜಿ ವಹಿಸಿ ಸಾಮಾನ್ಯ ಸಭೆ, ಸಾಲ ನೀಡುವುದು ಮರುಪಾವತಿ ಮಾಡಿಸುವುದು, ವಹಿವಾಟು ನಡೆಸಬೇಕಿದೆ ಆಗ ಮಾತ್ರ ಡಿಸಿಸಿ ಬ್ಯಾಂಕ್‍ನಲ್ಲಿ ಮತದಾನಕ್ಕೆ ಅರ್ಹರಾಗುತ್ತಾರೆ. ಈ ಚುನಾವಣೆಯಲ್ಲಿ ಜಿಲ್ಲೆಯ ಸುಮಾರು 200 ಸಂಘಗಳು ಸರಿಯಾದ ರೀತಿಯಲ್ಲಿ ವಹಿವಾಟನ್ನು ನಡೆಸದೆ ಇದ್ದಿದ್ದರಿಂದ ಅವುಗಳು ಚುನಾವಣೆಯಲ್ಲಿ ಮತದಾನದಿಂದ ಅನರ್ಹವಾಗಿವೆ ಎಂದು ತಿಳಿಸಿದರು.
ಇದನ್ನೂ ಓದಿ: ಉಪನ್ಯಾಸಕರಿಲ್ಲದೆ ಸೊರಗುತ್ತಿದೆ ಸರ್ಕಾರಿ ವಿಜ್ಞಾನ ಕಾಲೇಜು
ಮನೆಯ ಹಿರಿಯರ ಮರಣದ ನಂತರ ಅವರ ಹೆಸರಿನಲ್ಲಿನ ಭೂಮಿಯನ್ನು ವರ್ಗಾವಣೆ ಮಾಡಿಸಿಕೊಂಡು ವ್ಯವಹಾರ ನಡೆಸಿರಿ. ಸಕಾಲಕ್ಕೆ ಸಾಲ ಮರುಪಾವತಿ ಮಾಡಿ. ಸಾಲ ಮನ್ನಾ ಆಗುತ್ತದೆ ಎನ್ನುವುದನು ತಲೆಯಿಂದ ತೆಗೆದು ಹಾಕಿ ಎಂದು ಸಲಹೆ ನೀಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಉತ್ತಮ ಕೆಲಸ ಮಾಡುತ್ತಿದೆ. ಬೇರೆ ಜಿಲ್ಲೆಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚು ಸಾಲ ನೀಡುವುದಿಲ್ಲ. ಆದರೆ, ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಲಾಗುತ್ತಿದೆ. ಇದರ ಸದುಪಯೋಗ ಆಗಬೇಕು. ನಾನು ಡಿಸಿಸಿ ಬ್ಯಾಂಕ್ ನಿರ್ದೆಶಕನಾಗಲು ಸಂಘದ ಸದಸ್ಯರು ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: ಬಿಎಸ್ಸಿ, ಜಿಎನ್‍ಎಂ ನರ್ಸಿಂಗ್ ವಿದ್ಯಾರ್ಥಿಗಳಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ನಾನು ಮೂರು ಬಾರಿ ನಿರ್ದೇಶಕನಾಗಿದ್ದೇನೆ. ಇದರಲ್ಲಿ ಒಮ್ಮೆ ಮಾತ್ರ ಚುನಾವಣೆ ನಡೆದಿದೆ. ಎರಡು ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಇದಕ್ಕೆ ನಾನು ಆಭಾರಿ ಎಂದರು.
ಶಿವಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷ ಎನ್.ಮೌನೇಶ್ ಉಪಾಧ್ಯಕ್ಷೆ ಪುಷ್ಷವತಿ, ಮುಖ್ಯ ಕಾರ್ಯನಿರ್ವಣಾಧಿಕಾರಿ ಜಿ.ಸಿ.ನಾಗರಾಜ್, ನಿರ್ದೇಶಕರಾದ ವೀರಭದ್ರಪ್ಪ, ಸತೀಶ್ ನಾಡಿಗ್, ಸುರೇಶ್, ಮಂಜುನಾಥ್, ಸುಜಾತ, ತಿಪ್ಪೆಸ್ವಾಮಿ.ಎಂ.ಬಿ, ರಾಜಪ್ಪ, ಮಾಜಿ ಅಧ್ಯಕ್ಷರಾದ ದಗ್ಗೆ ಶಿವಪ್ರಕಾಶ್, ಮಂಜಣ್ಣ, ಯೋಗೇಶ್, ಸದಸ್ಯರಾದ ಮಹೇಶಣ್ಣ, ಜಿ.ಆರ್.ರಾಜಪ್ಪ, ಎಚ್. ಕುಬೇರಪ್ಪ, ದಗ್ಗೆ ದೆವೇಂದ್ರಪ್ಪ, ಉಮೇಶ್ ಈಚಗಟ್ಟ ಮತ್ತಿತರರಿದ್ದರು.
ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಹುಟ್ಟೂರಿಗೆ ಭದ್ರೆ | ನೆರವೇರಿದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಂಕಲ್ಪ