Connect with us

    NPEP competition: ಶಾಲೆಗಳಲ್ಲಿ ಎನ್‌ಪಿಇಪಿ ಸಹಪಠ್ಯ ಸ್ಪರ್ಧೆ | ಪೋಸ್ಟರ್‌ ಅನಾವರಣ

    NPEP competition

    ಮುಖ್ಯ ಸುದ್ದಿ

    NPEP competition: ಶಾಲೆಗಳಲ್ಲಿ ಎನ್‌ಪಿಇಪಿ ಸಹಪಠ್ಯ ಸ್ಪರ್ಧೆ | ಪೋಸ್ಟರ್‌ ಅನಾವರಣ

    CHITRADURGA NEWS | 12 AUGUST 2024
    ಚಿತ್ರದುರ್ಗ: ಶೈಕ್ಷಣಿಕ ಕಲಿಕೆಯೊಂದಿಗೆ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನವಾಗಲು ಎನ್‌ಪಿಇಪಿ(ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮ) ವತಿಯಿಂದ ನಡೆಸುವ ಸ್ಪರ್ಧಾ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಡಯಟ್‌ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.

    ನಗರದ ಡಯಟ್‌ನಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಸ್ಪರ್ಧಾ (NPEP competition) ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲವನ್ನು ಬೆಳೆಸುವ ಸನ್ನಿವೇಶಗಳನ್ನು ಕಲ್ಪಿಸಿ ಜನಸಂಖ್ಯೆ ಮತ್ತು ಸುಸ್ಥಿರ ಅಭಿವೃದ್ಧಿಯ ಅಂತರ್‌ ಸಂಬಂಧದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ಜಿಲ್ಲೆಯ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಪಾತ್ರಾಭಿನಯ, ಜನಪದ ನೃತ್ಯ ಸ್ಪರ್ಧೆಯನ್ನು ಆಯೋಜಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ತಾಲೂಕು ಹಂತದ ಅನುಷ್ಠಾನಾಧಿಕಾರಿಗಳು, ಶಿಕ್ಷಕರು ಪ್ರೇರಣೆ ನೀಡಬೇಕು ಎಂದರು.

    ಇದನ್ನು ಓದಿ: ಆರೋಗ್ಯ ಇಲಾಖೆ ನಿವೃತ್ತ ನೌಕರ ಎಸ್‌.ಶಿವಣ್ಣ ನಿಧನ

    ಎನ್‌ಪಿಇಪಿ ಜಿಲ್ಲಾ ನೋಡಲ್‌ ಅಧಿಕಾರಿ ಎಸ್‌.ಬಸವರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನುಭವಾತ್ಮಕ ಕಲಿಕೆ, ಸಂವಾದಾತ್ಮಕ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಿ ಆತ್ಮವಿಶ್ವಾಸ, ಸಂವೇದನಾಶೀಲತೆ, ವೈಯಕ್ತಿಕ ಸುರಕ್ಷತೆ, ಮಾನಸಿಕ ಒತ್ತಡ ನಿರ್ವಹಣೆ, ಸಕಾರಾತ್ಮಕ ಮನೋಭಾವನೆ ಬೆಳೆಸಲು ಎನ್.ಪಿ.ಇ.ಪಿ ಸ್ಪರ್ಧಾ ಚಟುವಟಿಕೆಗಳು ಪೂರಕವಾಗಿವೆ. ಸ್ಪರ್ಧೆಗಳು 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ, ತಾಲೂಕು, ಜಿಲ್ಲಾ, ಪ್ರಾದೇಶಿಕ, ರಾಜ್ಯ, ರಾಷ್ಟç ಹಂತದಲ್ಲಿ ನಡೆಯಲಿದೆ ಎಂದು ತಿಳಿಸಿದರು.

    ಪ್ರತಿ ಸ್ಪರ್ಧೆಯು ಥೀಮ್ ಆಧಾರಿತವಾಗಿದ್ದು ಪಾತ್ರಾಭಿನಯ ಸ್ಪರ್ಧೆಗೆ ನಿಗದಿಪಡಿಸಿರುವ ಆರೋಗ್ಯಕರ ಬೆಳವಣಿಗೆ, ಪೌಷ್ಠಿಕ ಆಹಾರ ಮತ್ತು ಯೋಗಕ್ಷೇಮ, ವೈಯಕ್ತಿಕ ಸುರಕ್ಷತೆ, ಅಂತರ್ಜಾಲ ಸುರಕ್ಷಿತ ಸದ್ಭಳಕೆ, ಮಾದಕ ವಸ್ತುಗಳ ದುರ್ಬಳಕೆ ತಡೆಗಟ್ಟುವಿಕೆ ಥೀಮ್‌ಗಳಲ್ಲಿ 9 ನೇ ತರಗತಿಯ 4 ರಿಂದ 5 ವಿದ್ಯಾರ್ಥಿಗಳ ತಂಡ ಒಂದು ಥೀಮ್ ಆಯ್ಕೆ ಮಾಡಿಕೊಂಡು ಹಿಂದಿ/ಇಂಗ್ಲೀಷ್‌ ಭಾಷೆಯಲ್ಲಿ ಪ್ರಸ್ತುತ ಪಡಿಸಬೇಕು ಎಂದರು.

    ಇದನ್ನು ಓದಿ: ವಿದ್ಯಾರ್ಥಿ ನಿಲಯದ ವಾರ್ಡನ್‌ ಅಮಾನತು | ಜಿಪಂ ಸಿಇಒ ಆದೇಶ

    ಜನಪದ ನೃತ್ಯ ಸ್ಪರ್ಧೆಗೆ ನಿಗದಿಪಡಿಸಿರುವ ಹುಡುಗರು ಮತ್ತು ಹುಡುಗಿಯರಿಗೆ ಸಮಾನ ಅವಕಾಶ, ಮಗುವಿನ ಬೆಳವಣಿಗೆಯಲ್ಲಿ ಅವಿಭಕ್ತ ಕುಟುಂಬದ ಪಾತ್ರ, ಪರಿಸರ ಸಂರಕ್ಷಣೆ, ಮಾದಕ ವಸ್ತುವಿನ ದುರ್ಬಳಕೆ ತಡೆಗಟ್ಟುವಿಕೆ, ಹದಿಹರೆಯದ ಸಮಯದಲ್ಲಿ ಆರೋಗ್ಯಕರ ಸಂಬಂಧಗಳು ಥೀಮ್‌ಗಳಲ್ಲಿ 8 ಮತ್ತು 9 ನೇ ತರಗತಿಯ 4 ರಿಂದ 6 ವಿದ್ಯಾರ್ಥಿಗಳ ತಂಡ ಸ್ಥಳೀಯ ಭಾಷೆಯಲ್ಲಿ ಪ್ರಸ್ತುತಪಡಿಸಲು ಅವಕಾಶವಿದೆ. ಪ್ರತಿ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.

    ಹಿರಿಯ ಉಪನ್ಯಾಸಕರಾದ ಎಸ್‌.ಜ್ಞಾನೇಶ್ವರ, ಪೂರ್ಣಿಮಾ, ಎಚ್‌.ಗಿರಿಜಾ, ಉಪನ್ಯಾಸಕರಾದ ಶಿವಲೀಲಾ, ರೇವಣ್ಣ, ಪದ್ಮ, ಶಿಕ್ಷಣ ಸಂಯೋಜಕ ಕೆ.ಆರ್‌.ಲೋಕೇಶ್, ತಾಂತ್ರಿಕ ಸಹಾಯಕ ಲಿಂಗರಾಜು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top