ಮುಖ್ಯ ಸುದ್ದಿ
VV Sagara: ವಿವಿ ಸಾಗರಕ್ಕೆ ಹರಿದು ಬಂತು 2195 ಕ್ಯೂಸೆಕ್ ನೀರು
CHITRADURGA NEWS | 08 AUGUST 2024
ಚಿತ್ರದುರ್ಗ: ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸುವ ಕೆಲಸ ಆರಂಭವಾಗಿದ್ದು, ಬೆಟ್ಟದಾವರೆಕೆರೆ ಬಳಿ ಒಂದು ಮೋಟಾರ್ ಮೂಲಕ ನೀರು ಪಂಪ್ ಮಾಡಲಾಗುತ್ತಿದೆ.
ವೇದಾವತಿ ನದಿ ಮೂಲಕ ವಿವಿ ಸಾಗರಕ್ಕೆ ನೀರು ಹರಿಯುತ್ತಿದ್ದು ಎರಡನೇ ದಿನ ಬರೋಬ್ಬರಿ 2195 ಕ್ಯೂಸೆಕ್ ನೀರು ಹರಿದು ಬಂದಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್‌ನಲ್ಲಿ ಚಿತ್ರದುರ್ಗ ರೈಲ್ವೇ ಯೋಜನೆಗೆ 150 ಕೋಟಿ
ಭದ್ರಾ ನೀರಿನ ಜೊತೆಗೆ ಮಳೆ ನೀರು ಜೊತೆಯಾಗಿದ್ದು, ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಮುಂದಿನ ಮೂರು ತಿಂಗಳ ಕಾಲ ವಿವಿ ಸಾಗರಕ್ಕೆ ಪ್ರತಿ ದಿನ 700 ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎಂದು ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ.
ಆಗಸ್ಟ್ 8 ಗುರುವಾರ ಬೆಳಗ್ಗೆ 8 ಗಂಟೆ ಹೊತ್ತಿಗೆ ವಿವಿ ಸಾಗರಕ್ಕೆ 2195 ಕ್ಯೂಸೆಕ್ ನೀರು ಹರಿದು ಬಂದಿದ್ದು, ಸದ್ಯ ಜಲಾಶಯ ಮಟ್ಟ 115.20 ಅಡಿಯಾಗಿದೆ. ಜಲಾಶಯದಲ್ಲಿ ಸದ್ಯ 19.01 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಹೆಚ್ಚಿದ ಒಳಹರಿವು | ಜಲಾಶಯದ ಇಂದಿನ ನೀರಿನ ಮಟ್ಟ