Connect with us

    OLD STUDENTS; ಸರ್ಕಾರಿ ಕಲಾ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ

    ಸರ್ಕಾರಿ ಕಲಾ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ

    ಮುಖ್ಯ ಸುದ್ದಿ

    OLD STUDENTS; ಸರ್ಕಾರಿ ಕಲಾ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ

    CHITRADURGA NEWS | 29 JULY 2024

    ಚಿತ್ರದುರ್ಗ: ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ವಿಭಾಗದ ಹಳೇ (OLD STUDENTS)ಬಿ.ಕಾಂ ವಿದ್ಯಾರ್ಥಿಗಳಿಂದ ನಗರದ ಹೊರವಲಯದಲ್ಲಿರುವ ಹಳೆಯ ಖಾದಿ ಭಂಡಾರ ಮಳಿಗೆ ಸಭಾಂಗಣದಲ್ಲಿ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಲಾಗಿತ್ತು.

    ಕ್ಲಿಕ್ ಮಾಡಿ ಓದಿ: Award; ಬೇಡ ಜಂಗಮ ಸಮಾಜದಿಂದ ಪ್ರತಿಭಾ ಪುರಸ್ಕಾರ | ಕೆ.ಎಸ್.ನವೀನ್, ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಭಾಗೀ 

    ಈ ವೇಳೆ ಅರ್ಥಶಾಸ್ತ್ರ ಉಪನ್ಯಾಸಕ ಎಸ್.ಲಕ್ಶ್ಮಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗುರು ಶಿಷ್ಯರ ಬಾಂಧವ್ಯ ಕ್ಷಣ ಸುತ್ತಿದೆ ಎಂಬುದು ಒಂದು ದೊಡ್ಡ ವಿಪರ್ಯಾಸ ಸಂಗತಿ. ಅದಕ್ಕೆ ಕಾರಣ ಮೊಬೈಲ್ ಹಾವಳಿ ಆದರೆ ಹಿಂದಿನ ಕಾಲದಲ್ಲಿ ಗುರು ಶಿಷ್ಯರ ಬಾಂಧವ್ಯ ಹೆಚ್ಚು ಇತ್ತು ಎಂಬುದಕ್ಕೆ 36 ವರ್ಷಗಳ ನಂತರ ನನ್ನ ಶಿಷ್ಯರು ಏರ್ಪಡಿಸಿರುವ ಈ ಗುರುವಂದನಾ ಕಾರ್ಯಕ್ರಮವೇ ಸಾಕ್ಷಿ ಎಂದರು.

    ನಾನು ಉಪನ್ಯಾಸಕ ವೃತ್ತಿ ಆರಂಭಿಸಿದಾಗ ದೊರೆತ ಮೊದಲ ಈ ವಿದ್ಯಾರ್ಥಿಗಳ ತಂಡ ನಿಮಗೆ ಚೆನ್ನಾಗಿ ಪಾಠ ಮಾಡಬೇಕು ಎನ್ನುವ ಸಲುವಾಗಿ ನಾನು ಒಬ್ಬ ವಿದ್ಯಾರ್ಥಿಯಂತೆ ಎಚ್ಚೆಚ್ಚು ವ್ಯಾಸಂಗ ಮಾಡಿ ತಯಾರಿ ಮಾಡಿಕೊಂಡು ತರಗತಿಗೆ ಬಂದು ಪ್ರವಚನ ಮಾಡುತ್ತಿದ್ದೆ. ಈ ಪ್ರಯತ್ನದಿಂದ ನಾನು ಒಬ್ಬ ಒಳ್ಳೇಯ ಉಪನ್ಯಾಸಕ ಎಂದು ಹೆಸರು ಬರಲು ನೀವುಗಳೇ ಕಾರಣಕರ್ತರು ಎಂದರು.

    ಅಂದಿನ ನನ್ನ ಹೆಚ್ಚಿನ ಬಿ.ಕಾಂ ವಿದ್ಯಾರ್ಥಿಗಳು ಎಲ್.ಐ.ಸಿ ಮತ್ತು ಬ್ಯಾಂಕ್ ವಲಯದಲ್ಲಿ ರಾಷ್ಟ್ರದ ನಾನಾ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಉನ್ನತ ಅಧಿಕಾರಿಗಳಾಗಿ ಕರ್ತವ್ಯನಿರ್ವಹಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

    ಕ್ಲಿಕ್ ಮಾಡಿ ಓದಿ: Upper Bhadra Project : ಶೀಘ್ರ 8 ಕೆರೆಗಳಿಗೆ ಭದ್ರಾ ನೀರು | ಡಿಸಿಎಂ ಡಿ.ಕೆ.ಶಿವಕುಮಾರ್‌ ಭರವಸೆ

    ಮುಂಬೈ ಎಲ್.ಐ.ಸಿ ಪ್ರಧಾನ ಕಛೇರಿಯಲ್ಲಿ ವಿಭಾಗ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಾಹೀದ್‌ರವರು ಮಾತನಾಡಿ, ನನ್ನ ಗುರುಗಳ ಜ್ಞಾನದ ಮಾರ್ಗದರ್ಶನ ನೀಡಿದ ಪ್ರತಿಫಲವಾಗಿ ನಾನು ರಾಷ್ಟ್ರದ ನಾನಾ ರಾಜ್ಯದಲ್ಲಿ ಹಾಗೂ ಸೌದಿರಾಷ್ಟ್ರಗಳಲ್ಲಿ ಎಲ್.ಐ.ಸಿ ವಿಭಾಗದಲ್ಲಿ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವುದಕ್ಕೆ ಸಾಧ್ಯವಾಯಿತು ಎಂದರು.

    ಹಳೇ ವಿದ್ಯಾರ್ಥಿಗಳಾದ ವಿಜಯ, ಶಿವಮೊಗ್ಗ ಎಲ್.ಐ.ಸಿ ವಿಭಾಗ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಬೇದ್ರೆ ಅವರು ಮಾತನಾಡಿದರು.

    ಕಾರ್ಯಕ್ರಮಕ್ಕೆ ಗುಜರಾತ್, ಬಾಂಬೆ, ಬೆಂಗಳೂರು, ಶಿವಮೊಗ್ಗ, ಹಾವೇರಿ ಮುಂತಾದ ಕಡೆಯಿಂದ ಹಳೇ ವಿದ್ಯಾರ್ಥಿಗಳು ಆಗಮಿಸಿದ್ದರು.

    ಹಳೇ ವಿದ್ಯಾರ್ಥಿಗಳಿಂದ ಅಂದಿನ ಗುರುಗಳಾದ ಅರ್ಥಶಾಸ್ತ್ರ ಉಪನ್ಯಾಸಕ ಎಸ್.ಲಕ್ಶ್ಮಣ ಅವರನ್ನು ಸನ್ಮಾನಿಸಲಾಯಿತು.

    ಕ್ಲಿಕ್ ಮಾಡಿ ಓದಿ: POLICE; ಪೊಲೀಸರ ಮೇಲೆ ಕಲ್ಲು ತೂರಿದ್ದ ಗ್ಯಾಂಗ್ | ಆಂಧ್ರ ಮೂಲದ ಕಳ್ಳನ ಬಂಧನ

    ಈ ಸಂದರ್ಭದಲ್ಲಿ ಎಸ್.ಬಿ.ಐ ಬ್ಯಾಂಕಿನ ವ್ಯವಸ್ಥಾಪಕ ರಾಘವೇಂದ್ರ, ಎಲ್.ಐ.ಸಿ ಆಡಳಿತ ಅಧಿಕಾರಿ ಶ್ಯಾಮಣ್ಣ, ಎ.ಎ.ಓ ವೆಂಕಟೇಶ್, ಎಚ್.ಜಿ.ಎ. ಇಂದಿರಾ, ಉಮಾ, ವಾಣಿ, ಭಾರತಿ, ಮಂಜುಳಾ, ರಾಜೇಶ್ವರಿ, ಸತೀಶ್, ಈಶ್ವರ್ ನಾಯ್ಕ್, ಶಶಿಧರ್, ಅರವಿಂದ್, ಪರಮ ಜ್ಯೋತಿ, ಶಶಿಧರ ಸೇರಿದಂತೆ ಇತರರು ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top