Connect with us

    ವೀರಶೈವ ಲಿಂಗಾಯತ ಸಮಾಜದ 125 ಮಕ್ಕಳಿಗೆ ಪ್ರತಿಭಾ ಪುರಸ್ಕಾರ 

    ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಹೊಳಲ್ಕೆರೆ

    ವೀರಶೈವ ಲಿಂಗಾಯತ ಸಮಾಜದ 125 ಮಕ್ಕಳಿಗೆ ಪ್ರತಿಭಾ ಪುರಸ್ಕಾರ 

    CHITRADURGA NEWS | 18 JULY 2024

    ಹೊಳಲ್ಕೆರೆ: ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ, ಶಿವಪುರದ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದಲ್ಲಿ SSLC, PUC ಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ 125 ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಇದನ್ನೂ ಓದಿ: Talent Award: ಎಚ್‌.ಆಂಜನೇಯ ಚಾರಿಟೆಬಲ್‌ ಟ್ರಸ್ಟ್‌ ಪ್ರತಿಭಾ ಪುರಸ್ಕಾರ | ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ

    ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಿ ಮಾತನಾಡಿ, ಮಕ್ಕಳು ಕೇವಲ ಪುರಸ್ಕಾರ ಪಡೆದರೆ ಸಾಲದು, ಈ ಪುರಸ್ಕಾರಕ್ಕೆ ಕಾರಣಿಕರ್ತರಾದ ತಂದೆ ತಾಯಿಗಳನ್ನು ಗೌರವಿಸಿ, ಪ್ರೀತಿಸುವ ಮೌಲ್ಯ ಬೆಳಸಿಕೊಳ್ಳಬೇಕು.

    ನನಗೆ ಬಿರುದು ನೀಡಿ ಗೌರವಿಸಿದರೆ ಸಾಲದು ಅದರಂತೆ ನೀವೂ ನಡೆದುಕೊಂಡಾಗ ಮಾತ್ರ ಇದರ ಬೆಲೆ ಜಾಸ್ತಿಯಾಗುತ್ತದೆ ಎಂದು ತಿಳಿಸಿದರು.

    ಈ ವೇಳೆ ಸ್ವಾಮೀಜಿಗೆ ಹೊಳಲ್ಕೆರೆ ಸಂಘದ ವತಿಯಿಂದ ಸಾಂಸ್ಕೃತಿಕ ಗುಮ್ಮಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ನಿವೃತ್ತ ಜಂಟಿ ನಿರ್ದೇಶಕ ಎಚ್. ಕೆ.ಲಿಂಗರಾಜು ವಚನ ಹಾಗೂ ಮೌಲ್ಯ ವಿಷಯ ಕುರಿತು ಉಪನ್ಯಾಸ ನೀಡಿದರು.

    ಇದನ್ನೂ ಓದಿ: ಬೇಲಿ ಮೇಲಿನ ಹಣ್ಣು ತಿಂದು ಮಕ್ಕಳು ಅಸ್ವಸ್ಥ | ಆಸ್ಪತ್ರೆಗೆ ದಾಖಲು

    ಈ ಸಂದರ್ಭದಲ್ಲಿ ಜಿ.ಎ.ದೇವರಾಜಯ್ಯ, ಡಾ. ಉಮಾಪತಿ, ಎನ್.ಶಿವಮೂರ್ತಿ, ಮಾಜಿ ಶಾಸಕರಾದ ಪಿ.ರಮೇಶ್, ಶರತ್ ಕುಮಾರ್ ಪಾಟೀಲ್, ಎಸ್.ಆರ್.ಗಿರೀಶ್, ಮಾರುತೇಶ್, ಕೆ.ಎಂ.ಶಿವಕುಮಾರ್, ಮುಖಂಡರಾದ ಎಂ.ರುದ್ರಪ್ಪ, ಕೆ.ದೇವರಾಜ್, ಎಂ.ಪರಮೇಶ್ವರಪ್ಪ, ಪ್ರಸನ್ನಕುಮಾರ್, ಜಯ್ಯಪ್ಪ, ಮೋಹನ್, ಜಿ.ಎಸ್.ವೇದಮೂರ್ತಿ, ನಿವೃತ್ತ ನೌಕರರ ಸಂಘ ಹಾಗೂ ತರಳಬಾಳು ಸಂಘದ ಪದಾಧಿಕಾರಿಗಳು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top