Connect with us

    IMA AWARD; ಚಿತ್ರದುರ್ಗ ಮೂಲದ ವೈದ್ಯ ಡಾ.ಜಿ.ವಿ.ಬಸವಾಜ್ ಅವರಿಗೆ ಅತ್ಯುನ್ನತ ಪ್ರಶಸ್ತಿ

    Dr.G.V.Basavaraj

    ಮುಖ್ಯ ಸುದ್ದಿ

    IMA AWARD; ಚಿತ್ರದುರ್ಗ ಮೂಲದ ವೈದ್ಯ ಡಾ.ಜಿ.ವಿ.ಬಸವಾಜ್ ಅವರಿಗೆ ಅತ್ಯುನ್ನತ ಪ್ರಶಸ್ತಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 02 JULY 2024

    ಚಿತ್ರದುರ್ಗ: ಭಾರತೀಯ ವೈದ್ಯಕೀಯ (IMA AWARD) ಸಂಘದಿಂದ ಕೊಡಮಾಡುವ ಪ್ರತಿಷ್ಠಿತ ಎಮಿನೆಂಟ್ ಡಾಕ್ಟರ್ ಪರ್ಸನಾಲಿಟಿ ರಾಷ್ಟ್ರೀಯ ಪ್ರಶಸ್ತಿಗೆ (Eminent Doctors Personality Award) 2024ನೇ ಸಾಲಿನಲ್ಲಿ ಕನ್ನಡಿಗ ಹಾಗೂ ಹೊಳಲ್ಕೆರೆ ತಾಲೂಕು ಗಂಗಸಮುದ್ರ ಮೂಲದ ಪ್ರೊ.ಡಾ.ಜಿ.ವಿ.ಬಸವರಾಜ್ ಭಾಜನರಾಗಿದ್ದಾರೆ.

    ವೈದ್ಯರ ದಿನಾಚರಣೆ ಹಿನ್ನೆಲೆಯಲ್ಲಿ ಸೋಮವಾರ ಹೊಸದಿಲ್ಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಡಾ.ಬಸವರಾಜ್ ಅವರಿಗೆ ಸೋಮವಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಇದನ್ನೂ ಓದಿ:  ರಾಜಾವೀರ ಮದಕರಿ ನಾಯಕ ಪಟ್ಟಾಭಿಷೇಕ | ಚಿತ್ರದುರ್ಗದಂತಹ ಕೋಟೆ ಏಷ್ಯಾ ಖಂಡದಲ್ಲೇ ಇಲ್ಲ | ಡಾ.ಎಸ್.ಎನ್.ಮಹಾಂತೇಶ್

    ಈ ಪ್ರಶಸ್ತಿಯನ್ನು ಅಸಾಧಾರಣ ಕೊಡುಗೆಗೆ ಸಂದ ಗೌರವ ಎಂದು ಬಣ್ಣಿಸಲಾಗಿದೆ. ವೃತ್ತಿಯಲ್ಲಿನ ಅಪರಿಮಿತ ಅನುಭವದಿಂದಾಗಿ ಹಲವು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

    ಪ್ರಸ್ತುತ ರಾಷ್ಟ್ರೀಯ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಭಾರತದಾದ್ಯಂತ ಮಕ್ಕಳ ಆರೈಕೆಯ ಕ್ಷೇತ್ರದಲ್ಲಿ ಹಲವಾರು ಸಂಶೋಧನೆ ಮತ್ತು ಯೋಜನೆಗಳಿಗೆ ಮುಂದಾಳತ್ವ ವಹಿಸಿದ್ದಾರೆ.

    ಇದನ್ನೂ ಓದಿ:ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ

    ಜಿಲ್ಲೆಯ ಹೊಳಲ್ಕೆರೆ ತಾಲೂಕು ಗಂಗಸಮುದ್ರದ ಬಸವರಾಜ್ ಪ್ರಸ್ತುತ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

    ರಾಜ್ಯದ ಹಲವು ಜಿಲ್ಲೆಗಳಿಂದ ವಿವಿಧ ನ್ಯೂನತೆಯಿಂದ ನರಳುವ ಮಕ್ಕಳನ್ನು ತಜ್ಞ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸು ಮಾಡಿದರೆ, ಅವರ ಕುರಿತು ಹೆಚ್ಚು ಕಾಳಜಿ ವಹಿಸುವ ಮೂಲಕ ವೃತ್ತಿಯ ಘನತೆ, ಗೌರವ ಕಾಪಾಡುತ್ತಿದ್ದಾರೆ. ಆರೈಕೆ ವಿಚಾರದಲ್ಲಿಯೂ ಉತ್ತಮ ಹೆಸರು ಪಡೆದಿದ್ದಾರೆ. ಅವರ ಈ ಸೇವೆ ಗುರುತಿಸಿ ವೈದ್ಯರ ದಿನಾಚರಣೆಯಂದು ಕೊಡಮಾಡುವ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ಹೊಳಲ್ಕೆರೆ ತಾಲೂಕು ಗಂಗಸಮುದ್ರದ ಸಾಮಾನ್ಯ ಕುಟುಂಬದಲ್ಲಿ ಜನಿಸಿ ಗ್ರಾಮದಲ್ಲಿ 1 ರಿಂದ 6, ರಾಮಗಿರಿಯಲ್ಲಿ 6 ರಿಂದ 10ನೇ ತರಗತಿ ವರೆಗೆ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದೆ. ಬಳಿಕ ಚಿತ್ರದುರ್ಗ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿ ಓದಿದೆ. ನಂತರ ಬೆಂಗಳೂರಿನ ಬಿಎಂಸಿ ಕಾಲೇಜಿನಲ್ಲಿ ಎಂಬಿಬಿಎಸ್, ಜೈಪುರದ ಎಸ್‍ಎಂಸಿ ಕಾಲೇಜಿನಲ್ಲಿ ಎಂಡಿ, ದೆಹಲಿಯಲ್ಲಿ ಫೆಲೋಶಿಪ್ ಪದವಿ ಪಡೆದಿದ್ದೆನೆ. ಛಲ, ಗುರಿ ಇದ್ದರೆ  ಹಳ್ಳಿಯವನಾಗಿದ್ದರೂ ಸಾಧನೆ ಮಾಡಬಹುದು.

    | ಡಾ.ಜಿ.ವಿ.ಬಸವರಾಜ್.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top