ಮೊಳಕಾಳ್ಮೂರು
ಕೊಂಡ್ಲಹಳ್ಳಿ ಶ್ರೀ ಸಾಯಿ ಪ್ರತಿಭಾ ಪುರಸ್ಕಾರ | ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಬಹುಮಾನ | ರಿಯಾಯಿತಿ ದರದಲ್ಲಿ ಕೋಚಿಂಗ್
CHITRADURGA NEWS | 19 MAY 2024
ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ಶ್ರೀ ಸಾಯಿ ಕೋಚಿಂಗ್ ಕ್ಲಾಸಸ್ ವತಿಯಿಂದ ಪ್ರಸಕ್ತ ವರ್ಷ 4 ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಪರೀಕ್ಷೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೂನ್ 9 ಭಾನುವಾರ ಬೆಳಗ್ಗೆ 10 ಗಂಟೆಗೆ ಕೊಂಡ್ಲಹಳ್ಳಿಯ ಸರ್ವೋದಯ ನ್ಯಾಷನಲ್ ಸ್ಕೂಲ್‍ನಲ್ಲಿ ಬೆಳಗ್ಗೆ 10.30ಕ್ಕೆ ಪರೀಕ್ಷೆ ನಡೆಯಲಿದೆ.
ಕನ್ನಡ, ಇಂಗ್ಲೀಷ್, ಗಣಿತ, ಪರಿಸರ ಅಧ್ಯಯನ ಹಾಗೂ ಸಾಮಾನ್ಯ ಜ್ಞಾನದಲ್ಲಿ 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿಗೆ ಪ್ರಥಮ ಬಹುಮಾನ 5001, ದ್ವಿತೀಯ ಬಹುಮಾನ 3001, ತೃತೀಯ ಬಹುಮಾನ 2001 ಹಾಗೂ ನಾಲ್ಕನೇ ಬಹುಮಾನವಾಗಿ 1001 ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ.
ಇದನ್ನೂ ಓದಿ: ರಾತ್ರಿ ಮಳೆಗೆ ಕೊಚ್ಚಿ ಹೋದ ರಸ್ತೆ | ಒಂದೇ ಮಳೆಗೆ ತುಂಬಿ ಕೋಡಿ ಹರಿದ ಕೆರೆ
ಅತೀ ಹೆಚ್ಚು ಅಂಕ ಪಡೆದ ಮೊದಲ 25 ಮಕ್ಕಳಿಗೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ನವೋದಯ ಕೋಚಿಂಗ್ ತರಗತಿಗೆ ಸೇರಿಸಿಕೊಳ್ಳಲಾಗುತ್ತದೆ. ಹಾಗೆ ಅತೀ ಹೆಚ್ಚು ಅಂಕ ಪಡೆದ 25 ಹಾಸ್ಟೆಲ್ ಮಕ್ಕಳಿಗೆ ಉಚಿತವಾಗಿ ಕೋಚಿಂಗ್ ನೀಡಲಾಗುತ್ತದೆ (ಊಟ ವಸತಿ ವೆಚ್ಚ ಪಾವತಿಸಬೇಕು).
ಪರೀಕ್ಷೆಗೆ ನೊಂದಣಿ ಮಾಡಿಕೊಳ್ಳಲು ಜೂನ್ 08 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ 9900186812, 9900388674, 8792400819 ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.