ಹಿರಿಯೂರು
ಅಬ್ಬಿನಹೊಳೆ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವ | ಏಪ್ರಿಲ್ 23 ರಂದು ಬ್ರಹ್ಮ ರಥೋತ್ಸವ
CHITRADURGA NEWS | 18 APRIL 2024
ಹಿರಿಯೂರು: ತಾಲ್ಲೂಕಿನ ಅಬ್ಬಿನಹೊಳೆ ಗ್ರಾಮದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಏಪ್ರಿಲ್ 23ರಂದು ನಡೆಯಲಿದೆ.
ಇದನ್ನೂ ಓದಿ: ದುರ್ಗದಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ
ಏಪ್ರಿಲ್ 19ರಂದು ಅಂಕುರಾರ್ಪಣದ ಕಳಸ ಸ್ಥಾಪನೆ, ಹೋಮ ಧ್ವಜಾರೋಹಣ, ಅಗ್ನಿ, ಪ್ರತಿಷ್ಠೆ, ಮೂರ್ತಿ ಹೋಮಾದಿ ಕಾರ್ಯಕ್ರಮ, ಅಂದು ರಾತ್ರಿ ಹನ್ಮಂತ ಮಹೋತ್ಸವ ಜರುಗಲಿದೆ. ಏ.20ರಂದು ಧ್ವಜಾರೋಹಣ, ಮೂರ್ತಿ ಹೋಮಾದಿ ಕಾರ್ಯಕ್ರಮಗಳು, ಅಂದು ರಾತ್ರಿ ಸಿಂಹ ವಾಮನೋತ್ಸವ ಕಾರ್ಯಕ್ರಮ ಜರುಗಲಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಭರ್ಜರಿ ಜಿಗಿತ | ಒಂದೇ ದಿನ1500 ರೂ. ಹೆಚ್ಚಳ
ಏ.21 ರಂದು ರಾತ್ರಿ ಗರುಡೋತ್ಸವ, ಬೆಳಗಿನ ಜಾವ 4 ಗಂಟೆಯಿಂದ 6 ರವರೆಗೆ ವೃಷಭ ಲಗ್ನದಲ್ಲಿ ಕಲ್ಯಾಣೋತ್ಸವ, ಏ.22ರಂದು ಗಜೇಂದ್ರ ಮೋಕ್ಷ, ಏ.23ರಂದು ಮೂರ್ತಿ ಹೋಮಾದಿ ಕಾರ್ಯಗಳು ಹಾಗೂ ಮಧ್ಯಾಹ್ನ 12 ರಿಂದ 1.30 ರವರೆಗೆ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ.
ಏ.24 ರಂದು ಮೂರ್ತಿ ಹೋಮಾದಿ ಕಾರ್ಯಗಳು, ಜಲ ಕ್ರೀಡೋತ್ಸವ, ಮೃಗ ಯಾತ್ರೋತ್ಸವ, ಏ.25 ರಂದು ಮೂರ್ತಿ ಹೋಮಾದಿ ಕಾರ್ಯ, ವಸಂತೋತ್ಸವ ಕಾರ್ಯ, ಧ್ವಜಾರೋಹಣ ಕಾರ್ಯ, ಕಂಕಣ ವಿಸರ್ಜನೆ ಹಾಗೂ ಪೂರ್ಣಾಹುತಿ 101 ಮಂಗಳಾರತಿ ಕಾರ್ಯ ನಡೆಯಲಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ನೈತಿಕತೆಯಿಲ್ಲ | ವಿಧಾನ ಪರಿಷತ್ ಸದಸ್ಯ ಎನ್.ಆರ್.ರವಿಕುಮಾರ್
ಏ.26ರಂದು ಶುಕ್ರವಾರ ಕೊನೆಯ ದಿನದಂದು ಸಂಜೆ 6 ಗಂಟೆಗೆ ಅಬ್ಬಿನಹೊಳೆ ಶ್ರೀ ಕಣಿವೆಮಾರಮ್ಮ ದೇವಿಗೆ ಸುಮಂಗಲೆಯರಿಂದ ಅಕ್ಕಿ ತಬ್ಬಿಟ್ಟಿನ ಆರತಿ ಕಾರ್ಯ ನಡೆಯಲಿದೆ. ಜಾತ್ರಾ ಮಹೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.