ಮುಖ್ಯ ಸುದ್ದಿ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು| ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ

CHITRADURGA NEWS | 08 MARCH 2024
ಚಿತ್ರದುರ್ಗ: ಯಾವುದೇ ಕೈಗಾರಿಕೆ ನೀರಾವರಿ ಸೌಲಭ್ಯಗಳಿಲ್ಲದ ಬರದ ನಾಡು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಶಿಕ್ಷಕರುಗಳಿಗೆ ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಕರೆ ನೀಡಿದರು.
ಇದೆ ತಿಂಗಳು ಕರ್ತವ್ಯದಿಂದ ವಯೋ ನಿವೃತ್ತಿಯಾಗಲಿರುವ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್ನಿಂದ ಬಡಾ ಮಕಾನ್ನಲ್ಲಿ ಗುರುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು.
ಇದನ್ನೂ ಓದಿ: ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ
ಶಿಕ್ಷಕರ ಸಂಘದ ಹೋರಾಟಕ್ಕೆ ಅಗಾಧವಾದ ಶಕ್ತಿ ಇದೆ, ನನ್ನ ಹಿಂದೆ ಶಿಕ್ಷಕರ ದೊಡ್ಡ ಪಡೆ ಇದೆ, ನನ್ನ ಕರ್ಮಭೂಮಿ, ಜನ್ಮ ಭೂಮಿ ಚಿತ್ರದುರ್ಗವನ್ನು ಎಂದಿಗೂ ಮರೆಯುವುದಿಲ್ಲ, ಸರ್ಕಾರಿ ನೌಕರಿ ಎಂದರೆ ನಿವೃತ್ತಿ ಆಗಲೇಬೇಕು, ಹಾಗಂತ ಮನಸ್ಸಿಗೆ ಬೇಸರಪಟ್ಟುಕೊಳ್ಳುವುದು ಸರಿಯಲ್ಲ, ಶಿಕ್ಷಕರುಗಳ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಅನುಭವದ ಆಧಾರದ ಮೇಲೆ ಆಡಳಿತ ನಡೆಸಿದ್ದೇನೆ, ದುಮ್ಮಾನಗಳನ್ನು ಹೊತ್ತು ಬಂದವರಿಗೆ ಸ್ಪಂದಿಸಿದ್ದೇನೆಂಬ ಆತ್ಮತೃಪ್ತಿ ಇದೆ, ನಿವೃತ್ತಿಯ ನಂತರವೂ ಚಟುವಟಿಕೆಯಿಂದ ಇರುತ್ತೇನೆಂದು ಹೇಳಿದರು.
ಶಿಕ್ಷಣ ಇಲಾಖೆ ದೊಡ್ಡದು ಜೀವನದಲ್ಲಿ ಪಶ್ಚಾತಾಪ ಪಟ್ಟು ಕೊಳ್ಳುವಂತ ಕೆಲಸ ಯಾರು ಮಾಡಬಾರದು, ಸಕರಾತ್ಮಕ ಚಿಂತನೆ ಇದ್ದರೆ ಜೀವನದಲ್ಲಿ ಯಶಸ್ಸು ಕಾಣಬಹುದು, ಅಬ್ದುಲ್ ಕಲಾಂ ಅವರಂತಹ ವ್ಯಕ್ತಿಗಳನ್ನು ಸೃಷ್ಟಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ, ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಿ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ರೋಗಿಗಳಿಗೆ ಸಿಹಿ ಸುದ್ದಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್ ಮಾತನಾಡಿ, ಸ್ನೇಹಜೀವಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರವಿಶಂಕರ್ ರೆಡ್ಡಿ ಅವರಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ಗುಣ ಇರುವುದರಿಂದ ಎಲ್ಲರ ಮನಸ್ಸು ಮುಟ್ಟಿದ್ದಾರೆ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡಿದ್ದಾರೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಸಿದ್ಧಪಡಿಸುವ ಕೆಲಸ ಶಿಕ್ಷಕರುಗಳಿಂದ ಮಾತ್ರ ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್ ಮಾತನಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಒಂದನೇ ಸ್ಥಾನಕ್ಕೆ ತರುವಲ್ಲಿ ಕ್ಷಮಿಸಿದ ರಾಜ್ಯದಲ್ಲಿಯೇ ಜಿಲ್ಲೆಯ ಹೆಸರನ್ನು ಮೊಳಗಿಸಿರುವ ಡಿ.ಡಿ.ಪಿ.ಐ. ಕೆ.ರವಿಶಂಕರ್ ರೆಡ್ಡಿ ಶಿಕ್ಷಕರುಗಳಲ್ಲಿ ಶಿಕ್ಷಕರಾಗಿ ಮಕ್ಕಳಲ್ಲಿ ಮಕ್ಕಳಾಗಿ ಬರುತ್ತಿದ್ದಾರೆ, ಶಿಕ್ಷಕರುಗಳ ಸಂಘಟನೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಪದವೀಧರ ಶಿಕ್ಷಕರುಗಳಿಗೆ ಬಡ್ತಿ, ಎನ್ಪಿಎಸ್ ಸಹ ಶಿಕ್ಷಕರುಗಳಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ, 7ನೇ ವೇತನ ಆಯೋಗ, ಉರ್ದು ಶಾಲೆಗಳಲ್ಲಿನ ಸಮಸ್ಯೆ ಇವುಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಹೋರಾಟ ನಿರಂತರವಾಗಿರುತ್ತದೆ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರುಗಳು ಒತ್ತು ಕೊಡಬೇಕೆಂದು ತಿಳಿಸಿದರು.
ಇದನ್ನೂ ಓದಿ: ರೈತರ ಧರಣಿ | ತಾತ್ಕಾಲಿಕ ಸ್ಥಗಿತ | ಕಾರ್ಯಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಸಂಪತ್ ಕುಮಾರ್, ಡಿ ವೈ ಪಿ ಸಿ ವೆಂಕಟೇಶಪ್ಪ, ಕೆಂಚಪ್ಪ, ಇಸಿಓ ಸಮೀರ, ತಾಜೀರ್ ಭಾಷ, ಪರ್ವಿನ್ ತಾಜ್, ಎಂ. ಎಸ್. ಲತಾ, ಉಮರ್ ಭಾಷ, ಕರ್ನಾಟಕ ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.
