ಹೊಸದುರ್ಗ
ಸಂಗಮೇಶ್ವರ ಜಯಂತಿ ಸರಳ ಆಚರಣೆ | ಕುಂಚಿಟಿಗ ಮಠದ ಶ್ರೀ ಶಾಂತವೀರ ಮಹಾ ಸ್ವಾಮೀಜಿ
CHITRADURGA NEWS | 27 FEBRUARY 2024
ಚಿತ್ರದುರ್ಗ: ಮಳೆಯ ಅಭಾವದ ಕಾರಣಕ್ಕೆ 34ನೇ ಶ್ರೀ ಸಂಗಮೇಶ್ವರ ಜಯಂತಿಯನ್ನು ಈ ಬಾರಿ ಸರಳ ಮತ್ತು ಸಾಂಕೇತಿಕವಾಗಿ ಹೊಸದುರ್ಗದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನದ ಮಠದಲ್ಲಿ ಆಚರಿಸಲಾಗುತ್ತದೆ ಎಂದು ಕುಂಚಿಟಿಗ ಮಹಾ ಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾ ಸ್ವಾಮೀಜಿ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: https://chitradurganews.com/suma-of-chitradurga-selected-as-civil-judge/
ಪ್ರತಿ ವರ್ಷ ವೈಭವದಿಂದ ಸಮಾರಂಭ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಮಳೆಯ ಅಭಾವ ಹಾಗೂ ಅಗ್ನಿ ಅವಘಡದಲ್ಲಿ ಸಹೋದರ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಗಾಯಗೊಂಡಿರುವ ಕಾರಣ 34 ನೇ ಶ್ರೀ ಸಂಗಮೇಶ್ವರ ಜಯಂತಿ ಮಹೋತ್ಸವ, 44 ನೇ ಜನ್ಮ ಜನ್ಮದಿನೋತ್ಸವ, 27 ನೇ ವರ್ಷದ ದೀಕ್ಷಾಮಹೋತ್ಸವ ಹಾಗೂ 23 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವವನ್ನು ಅತ್ಯಂತ ಸರಳವಾಗಿ ಮಠದಲ್ಲಿ ಆಚರಿಸಲಾಗುತ್ತಿದೆ.
ಮಹೋತ್ಸವದ ಅಂಗವಾಗಿ ಫೆ.28 ರಂದು ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಭಕ್ತರು ತಮ್ಮ ಗ್ರಾಮ, ಮನೆಯಲ್ಲಿ ಶ್ರೀ ಸಂಗಮೇಶ್ವರನನ್ನು ನೆನೆದು ಭಕ್ತಿಯಿಂದ ಪೂಜೆ ಸಲ್ಲಿಸಿ ಶ್ರೀ ಗುರು-ದೇವರ ಕೃಪೆಗೆ ಪಾತ್ರರಾಗಿ ಎಂದು ಶ್ರೀ ಶಾಂತವೀರ ಮಹಾ ಸ್ವಾಮೀಜಿ ತಿಳಿಸಿದ್ದಾರೆ.