Connect with us

    ಸಿರಿಗೆರೆಗೆ ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ | ಸದ್ಧರ್ಮ ಸಿಂಹಾಸನಾರೋಹಣಕ್ಕೆ ಕ್ಷಣಗಣನೆ

    ಮುಖ್ಯ ಸುದ್ದಿ

    ಸಿರಿಗೆರೆಗೆ ಬಿ.ವೈ.ವಿಜಯೇಂದ್ರ, ಬಸವರಾಜ ಬೊಮ್ಮಾಯಿ | ಸದ್ಧರ್ಮ ಸಿಂಹಾಸನಾರೋಹಣಕ್ಕೆ ಕ್ಷಣಗಣನೆ

    CHITRADURGA NEWS | 24 FEBRUARY 2024
    ಚಿತ್ರದುರ್ಗ: ತರಳಬಾಳು ಹುಣ್ಣಿಮೆ ಮಹೋತ್ಸವದ ಸದ್ಧರ್ಮ ಸಿಂಹಾಸನಾರೋಹಣಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಗಣ್ಯತಿಗಣ್ಯರು, ಸಹಸ್ರಾರು ಭಕ್ತರು ಈ ಭವ್ಯ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.

    ಮಧ್ಯಾಹ್ನ 3 ಗಂಟೆಗೆ ಸಿರಿಗೆರೆಯಲ್ಲಿ ತೆರೆದ ವಾಹನದಲ್ಲಿ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗ್ರಾಮ ಸಂಚಾರ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮದಲ್ಲಿ ತರಳಬಾಳು ಶ್ರೀ ಸದ್ಧರ್ಮ ಸಿಂಹಾಸನಾರೋಹಣ ನಡೆಯಲಿದೆ.

    ಇದನ್ನೂ ಓದಿ: ಲೋಕಸಭೆ ಚುನಾವಣೆ | 600 ಜನರ ಮೇಲೆ ದೂರು ದಾಖಲಿಸಿದ ಪೊಲೀಸ್ ಇಲಾಖೆ

    ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಜಿ.ಎಂ.ಸಿದ್ದೇಶ್ವರ, ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.‌ಆರ್‌.ಬಸವರಾಜಪ್ಪ ಭಾಗವಹಿಸಲಿದ್ದಾರೆ.

    ಅತಿಥಿಗಳಾಗಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಗುಂಡ್ಲುಪೇಟೆ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌,ದಿವಾಕರ್‌, ಇಸ್ರೇಲ್‌ನ ಪ್ರೊ.ಗಿಲ್‌ಬೆನ್‌ ಹೆರುಟ್‌ ಉಪಸ್ಥಿತಿವಹಿಸಲಿದ್ದಾರೆ. ಮೈಸೂರು ವಿವಿ ವಿಶ್ರಾಂತ ಕುಲಪತಿ ಕೆ. ಚಿದಾನಂದಗೌಡ, ಹಿರೇಮಗಳೂರು ಕಣ್ಣನ್‌ ಉಪನ್ಯಾಸ ನೀಡಲಿದ್ದಾರೆ.

    ಪದ್ಮಶ್ರೀ ಪುರಸ್ಕೃತ ಪಿಯರ್‌ ಸಿಲ್ವನ್‌ ಫಿಲಿಯೋಜಾ ಮತ್ತು ವಸುಂಧರಾ ಫಿಲಿಯೋಜಾ, ಪ್ಯಾರಿಸ್‌, ಹುತಾತ್ಮ ಯೋಧ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ ಪಾಲಕರಾದ ಕೆ.ಪಿ.ಅನುರಾಧ ಮತ್ತು ಎಂ. ವೆಂಕಟೇಶ್‌ ಅವರಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ.

    ಇದನ್ನೂ ಓದಿ: ರಾಜ್ಯಕ್ಕೆ ‘ಬರ’ ತಂದ ಕಾಂಗ್ರೆಸ್‌ | ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ

    ಸಿರಿಗೆರೆ ಅಕ್ಕನ ಬಳಗದಿಂದ ವಚನ ಗೀತೆ, ತರಳಬಾಳು ಕಲಾ ಸಂಘದಿಂದ ಯಕ್ಷಗಾನ, ಮಲ್ಲಕಂಬ, ಭರತನಾಟ್ಯ ಹಾಗೂ ತರಳಬಾಳು ಸಿಬಿಎಸ್‌ಇ ಶಾಲೆ ಮಕ್ಕಳು ವಚನ ನೃತ್ಯ ಪ್ರಸ್ತುತಪಡಿಸಲಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top