Connect with us

    106 ಜನರಿಗೆ 4.80 ಕೋಟಿ ರೂ. ವಂಚನೆ | ಚಿತ್ರದುರ್ಗ ಜಿಲ್ಲೆಯಲ್ಲಿ ಬಯಲಿಗೆ ಬಂತು ದೊಡ್ಡ ವಂಚನೆ ಪ್ರಕರಣ

    SP DHARMENDAR KUMAR MEENA

    ಕ್ರೈಂ ಸುದ್ದಿ

    106 ಜನರಿಗೆ 4.80 ಕೋಟಿ ರೂ. ವಂಚನೆ | ಚಿತ್ರದುರ್ಗ ಜಿಲ್ಲೆಯಲ್ಲಿ ಬಯಲಿಗೆ ಬಂತು ದೊಡ್ಡ ವಂಚನೆ ಪ್ರಕರಣ

    CHITRADURGA NEWS | 14 FEBRUARY 2024

    ಚಿತ್ರದುರ್ಗ: ಎರಡು ತಿಂಗಳಲ್ಲಿ ಹಣ ಡಬ್ಬಲ್ ಮಾಡಿಕೊಡುವ ಮೋಸದ ಜಾಲಕ್ಕೆ ಸಿಲುಕಿ 106 ಜನ ಅಂದಾಜು 4.80 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಈ ವಂಚನೆ ಪ್ರಕರಣ ದಾಖಲಾಗಿದ್ದು, ಚಿಕ್ಕಜಾಜೂರಿನ ರೈಲ್ವೇ ಜಂಕ್ಷನ್‍ನಲ್ಲಿ ಕೆಲಸ ಮಾಡುವ ಸಾಕಷ್ಟು ಜನ ಉದ್ಯೋಗಿಗಳು, ಅವರ ಸಂಬಂಧಿಕರು, ಸ್ನೇಹಿತರು ಹಣ ಡಬ್ಬಲ್ ಮಾಡಿಕೊಡುವ ಕಂಪನಿಯೊಂದನ್ನು ನಂಬಿ ಹಣ ಕಳೆದುಕೊಂಡಿದ್ದಾರೆ.

    ಇದನ್ನೂ ಓದಿ: ಮುರುಘಾ ಮಠಕ್ಕೂ ಈ ಊರಿಗೂ ಅವಿನಾಭವ ಸಂಬಂಧ

    2023 ಡಿಸೆಂಬರ್ 15 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮರುಜೀವ ನೀಡಿದ್ದು, ಪ್ರಕರಣವನ್ನು ಸೈಬರ್ ಠಾಣೆಗೆ ವರ್ಗಾಯಿಸಿ ದಿ ಬ್ಯಾನಿಂಗ್ ಆಫ್ ಅನ್‍ರೆಗ್ಯುಲೇಟೆಡ್ ಡಿಪೋಸಿಟ್ ಸ್ಕೀಮ್ಸ್ ಆರ್ಡಿನೆನ್ಸ್-2019(ಬಡ್ಸ್) ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.

    ಚಿಕ್ಕಜಾಜೂರು ಪೊಲೀಸ್ ಠಾಣೆ

    ಚಿಕ್ಕಜಾಜೂರು ಪೊಲೀಸ್ ಠಾಣೆ

    ಏನಿದು 106 ಜನರಿಗೆ ವಂಚನೆ ಮಾಡಿರುವ ಪ್ರಕರಣ:

    ಸುಮಾರು 9 ತಿಂಗಳ ಹಿಂದೆ ಚಿಕ್ಕಜಾಜೂರು ರೈಲ್ವೇ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಪಿ.ವಿ.ಶೇಷಯ್ಯ ಹಾಗೂ ಎಂ.ಏಳುಕುಂಡಲು ಅವರ ಮೂಲಕ ಮಾಹಿತಿ ಪಡೆದುಕೊಂಡು ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯ ಕೋಡೆ ರಮಣಯ್ಯ ಎಂಬುವವರ ಕ್ರೌಡ್ ಕ್ಲಬ್ ಇಂಟರ್‍ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ 60 ದಿನಗಳಲ್ಲಿ ಡಬಲ್ ಆಗುತ್ತದೆ ಎಂದು ಚಿಕ್ಕಜಾಜೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊಸದುರ್ಗ ತಾಲೂಕಿನ ಬಾಗೂರು ಮೂಲದ ರಮೇಶಪ್ಪ ಎಂಬುವವರು ಸ್ನೇಹಿತ ರವೀಂದ್ರ ಹೆಸರಿನಲ್ಲಿ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.

    ಇದನ್ನೂ ಓದಿ: ಕ್ರಷರ್ ಮಾಲಿಕರ ಸಂಘದ ಅಧ್ಯಕ್ಷನ ಮೇಲೆ ಗಣಿ ಇಲಾಖೆ ಅಧಿಕಾರಿಯಿಂದ ಹಲ್ಲೆ

    2 ತಿಂಗಳ ನಂತರ ರಮೇಶಪ್ಪನಿಗೆ 1.96 ಲಕ್ಷ ರೂ.ಗಳನ್ನು ಹಿಂದಿರುಗಿಸಿದ್ದಾರೆ. ಇದರಿಂದ ನಂಬಿಕೆ ಬಂದಂತಾಗಿದೆ. ಆನಂತರ ಮತ್ತೆ ಇದೇ ಕ್ರೌಡ್ ಕ್ಲಬ್ ಕಂಪನಿಗೆ 1.4 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.

    ಇವರಂತೆ ಅಲ್ಲಿದ್ದ ಇತರೆ ಸಿಬ್ಬಂದಿ, ಸಂಬಂಧಿರು, ಸ್ನೇಹಿತರು ಸೇರಿ ಒಟ್ಟು 106 ಮಂದಿ ವಿವಿಧ ಬ್ಯಾಂಕುಗಳ ಮೂಲಕ ಒಟ್ಟು 4,79,99,000 (4 ಕೋಟಿ 79 ಲಕ್ಷ 99 ಸಾವಿರ) ರೂ.ಗಳನ್ನು ಈ ಕಂಪನಿಯ ಖಾತೆಗೆ ವಿವಿಧ ಬ್ಯಾಂಕುಗಳಿಂದ ಹೂಡಿಕೆ ಮಾಡಿದ್ದಾರೆ.

    ಇದನ್ನೂ ಓದಿ: ಬಾಲ ರಾಮನಿಗೆ ಭಾವ ತುಂಬಿದ ಭಾವನಾ

    ಈ ಸಂಬಂಧ ಕ್ರೌಡ್ ಕ್ಲಬ್ ಕಂಪನಿಯ ಮಾಲಿಕ ಕೋಡೆ ರಮಣಯ್ಯ ಒಪ್ಪಂಧವನ್ನು ಮಾಡಿಕೊಂಡಿದ್ದಾರೆ. ಆದರೆ, ಅಗ್ರಿಮೆಂಟ್ ಪ್ರಕಾರ ಎರಡು ತಿಂಗಳು ಕಳೆದ ನಂತರ ಹಣ ಹಿಂದಿರುಗಿಸಿಲ್ಲ. ಅವರು ಕೊಟ್ಟಿದ್ದ ಎಲ್ಲ ನಂಬರ್‍ಗಳಿಗೆ ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ವಾಟ್ಸಪ್ ಮೆಸೇಜ್ ಕಳಿಸಿದರೂ ಉತ್ತರಿಸಿಲ್ಲ.

    ಈ ಸಂಬಂಧ ಕ್ರೌಡ್ ಕ್ಲಬ್ ಇಂಟರ್ ನ್ಯಾಷನಲ್ ಕಂಪನಿಯ ಕೋಡೆ ರಮಣಯ್ಯ 106 ಜನರಿಗೆ ಹಣ ಡಬ್ಬಲ್ ಮಾಡಿಕೊಡುವುದಾಗಿ 4.79 ಕೋಟಿ ರೂ.ಗಳನ್ನು ವಂಚನೆ ಮಾಡಿದ್ದಾರೆ ಎಂದು ರಮೇಶಪ್ಪ ದೂರು ದಾಖಲಿಸಿದ್ದಾರೆ.

    ಇದನ್ನೂ ಓದಿ: ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ಚಿತ್ರದುರ್ಗ

    ಚಿಕ್ಕಜಾಜೂರಿನಲ್ಲಿ ದಾಖಲಾಗಿದ್ದ ಸದರಿ ದೂರನ್ನು ಸೈಬರ್ ಠಾಣೆಗೆ ವರ್ಗಾವಣೆ ಮಾಡಿಕೊಂಡು, ಬಡ್ಸ್ ಕಾಯ್ದೆ ಅಡಿ ತನಿಖೆ ಮಾಡಲಾಗುತ್ತಿದೆ.

    ಆರೋಪಿ ಕೋಡೆ ರಮಣಯ್ಯ ಈವರೆಗೆ ಪತ್ತೆಯಾಗಿಲ್ಲ. ಆತನಿಗೆ ಸಂಬಂಧ ಪಟ್ಟ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲು ಆಂಧ್ರಪ್ರದೇಶದ ಪೊಲೀಸರು, ಸರ್ಕಾರದ ವಿವಿಧ ಇಲಾಖೆಗಳಿಗೆ ಇಲ್ಲಿಂದ ಪತ್ರ ಬರೆಯಲಾಗಿದೆ. ಕೋಡೆ ರಮಣಯ್ಯನ ಆಸ್ತಿ ವಿವರ ನೀಡುವಂತೆ ಅಲ್ಲಿನ ಉಪನೊಂದಣಾಧಿಕಾರಿ ಕಚೇರಿಗೂ ಪತ್ರ ಬರೆಯಲಾಗಿದೆ.

    | ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    Click to comment

    Leave a Reply

    Your email address will not be published. Required fields are marked *

    More in ಕ್ರೈಂ ಸುದ್ದಿ

    To Top