Connect with us

    ‘ಜ್ಯೋತಿರಾಜ್‌’ ಗೆ ಜಾನಪದ ಲೋಕ ಪ್ರಶಸ್ತಿ ಗರಿ | ಸುವರ್ಣ ಕರ್ನಾಟಕ ಲೋಕೋತ್ಸವದಲ್ಲಿ ಪ್ರದಾನ

    ಮುಖ್ಯ ಸುದ್ದಿ

    ‘ಜ್ಯೋತಿರಾಜ್‌’ ಗೆ ಜಾನಪದ ಲೋಕ ಪ್ರಶಸ್ತಿ ಗರಿ | ಸುವರ್ಣ ಕರ್ನಾಟಕ ಲೋಕೋತ್ಸವದಲ್ಲಿ ಪ್ರದಾನ

    CHITRADURGA NEWS | 08 FEBRUARY 2024
    ಚಿತ್ರದುರ್ಗ: ಮಂಕಿ ಮ್ಯಾನ್ ಖ್ಯಾತಿಯ ಸಾಹಸಿ ಕೋಟೆನಾಡಿನ ಜ್ಯೋತಿರಾಜ್‌ ಸೇರಿ 19 ಜನರು ಕರ್ನಾಟಕ ಜಾನಪದ ಪರಿಷತ್ತು ನೀಡುವ ‘ಜಾನಪದ ಲೋಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಇದನ್ನೂ ಓದಿ: ಒನಕೆ ಓಬವ್ವ ವೃತ್ತಕ್ಕೆ ತರಕಾರಿ ತಂದ ಚಿಣ್ಣರು | ವಾರದ ಸಂತೆ ನಮ್ಮ ಜೊತೆ ಎಂದ ಎಸ್‌ಆರ್‌ಎಸ್‌ ಪುಟಾಣಿಗಳು

    ರಾಮನಗರದ ಹೊರವಲಯದ ಜಾನಪದ ಲೋಕದಲ್ಲಿ ಫೆ. 10 ಮತ್ತು 11ರಂದು ನಡೆಯುವ ಸುವರ್ಣ ಕರ್ನಾಟಕ ಲೋಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿ ₹10 ಸಾವಿರದಿಂದ ₹25 ಸಾವಿರದವರೆಗಿನ ನಗದು ಪುರಸ್ಕಾರ ಹಾಗೂ ಫಲಕ ಒಳಗೊಂಡಿದೆ.

    ಇದನ್ನೂ ಓದಿ: ಕೋಟೆನಾಡಿಗೆ ಬರುತ್ತಿದ್ದಾರೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ

    ಫೆ.11ರಂದು ಸಂಜೆ 5.30ಕ್ಕೆ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

    ಲೋಕೋತ್ಸವವನ್ನು ಫೆ. 10ರಂದು ಬೆಳಿಗ್ಗೆ 10.30ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿ ಹಾಗೂ ಕರಕುಶಲ ಮೇಳವನ್ನು ಬುಡಕಟ್ಟು ಸಮುದಾಯದ ಚಿಂತಕ, ಪದ್ಮಶ್ರೀ ಪುರಸ್ಕೃತ ಸೋಮಣ್ಣ ಉದ್ಘಾಟಿಸಲಿದ್ದಾರೆ. 11ರಂದು ಜಾನಪದ ಸಂಶೋಧನಾ ಕೇಂದ್ರವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top