Connect with us

    20 ರೂಪಾಯಿ ವೈದ್ಯ ಪರ್ವಪ್ಪ ನೆನಪು ಮಾತ್ರ | ಬಡವರ ಪಾಲಿನ ಆಶಾಕಿರಣ

    ಮುಖ್ಯ ಸುದ್ದಿ

    20 ರೂಪಾಯಿ ವೈದ್ಯ ಪರ್ವಪ್ಪ ನೆನಪು ಮಾತ್ರ | ಬಡವರ ಪಾಲಿನ ಆಶಾಕಿರಣ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 7 JANUARY 2024

    ಹಿರಿಯೂರು (HIRIYUR): ಬಡವರ ಪಾಲಿನ ಆಶಾಕಿರಣವಾಗಿದ್ದ ಇಪ್ಪತ್ತು ಡಾಕ್ಟರ್‌ ಎಂದೇ ಖ್ಯಾತಿಗಳಿಸಿದ್ದ ನಗರದ ಜೈನ್ ದೇವಸ್ಥಾನದ ರಸ್ತೆಯ ನಿವಾಸಿ ಡಾ.ಎನ್‌. ಪರ್ವಪ್ಪ (84) ಇನ್ನು ನೆನಪು ಮಾತ್ರ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನಹೊಂದಿದ್ದು,ಆರ್ಯವೈಶ್ಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

    ಪತ್ನಿ, ಪುತ್ರ ಮತ್ತು ಪುತ್ರಿ ತುಂಬು ಕುಟುಂಬ ಡಾ.ಎನ್‌. ಪರ್ವಪ್ಪ ಅವರದ್ದು, ಯಾವುದೇ ಕಾಯಿಲೆ ಇರಲಿ ಪರೀಕ್ಷೆ ನಡೆಸಿ ಕಡಿಮೆ ದರದ ಔಷಧಿ ಚೀಟಿ ಬರೆಯುತ್ತಿದ್ದರು. ಜತೆಗೆ ಪ್ರತಿ ರೋಗಿಯಿಂದ ಪಡೆಯುತ್ತಿದ್ದ ಹಣ ಕೇವಲ ₹ 20 ಮಾತ್ರ. ಹಣವಿಲ್ಲದರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು.

    ಇದನ್ನೂ ಓದಿ: ಐದು ವರ್ಷದ ಬಳಿಕ ನಾಯಕನಹಟ್ಟಿಗೆ ದಡ್ಲು ಮಾರಮ್ಮ ದೇವಿ ಆಗಮನ ‌| ಬಾಗಿಲು ಮುಚ್ಚಲಿದೆ ತಿಪ್ಪೇಶನ ದೇಗುಲ

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮೂಲದ ಪರ್ವಪ್ಪ ಬಡತನದಲ್ಲೇ ಹುಟ್ಟಿ ಬಳಿಕ ಜನರ ಶ್ರೀಮಂತಿಕೆ ಗಳಿಸಿದರು. ಕಡೂರು ಮತ್ತು ಬೆಂಗಳೂರಿನಲ್ಲಿ ಪಿಯುವರೆಗೆ ವ್ಯಾಸಂಗ ಮಾಡಿ, ಬಳ್ಳಾರಿಯಲ್ಲಿ ಎಂಬಿಬಿಎಸ್‌ ಪದವಿ ಪೂರ್ಣಗೊಳಿಸಿ ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆಯಲ್ಲಿ ವೃತ್ತಿ ಬದುಕು ಆರಂಭಿಸುತ್ತಾರೆ.

    ಮೊಳಕಾಲ್ಮೂರು ತಾಲ್ಲೂಕಿನಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ತಾಲ್ಲೂಕಿನ ಸ್ವರ್ಣಗಿರಿ (ಪ್ರಸ್ತುತ ರೊಪ್ಪ) ಗ್ರಾಮದಲ್ಲಿದ್ದ 200 ಜನರಲ್ಲಿ 120 ಜನ ಕುಷ್ಠರೋಗದಿಂದ ಬಳಲುತ್ತಿದ್ದರು. ಇವರಿಗೆ ಸರ್ಕಾರದಿಂದ ಕೊಡುತ್ತಿದ್ದ ಮಾತ್ರೆಗಳ ಜೊತೆ ಸ್ವಂತ ಹಣದಿಂದ ಮಾತ್ರೆ ಖರೀದಿಸಿ ನೀಡಿ ಗುಣಮುಖಗೊಳಿಸಿದ್ದರು.

    ಇದನ್ನೂ ಓದಿ: ಮಾಡದಕೆರೆ-ಎಚ್.ಡಿ.ಪುರ ಭಾಗದಲ್ಲಿ ಹದ ಮಳೆ | ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ವರದಿ ನೋಡಿ

    1979 ರಲ್ಲಿ ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ಬಂದ ಇವರು ರೋಟರಿ ಕ್ಲಬ್ ಸಹಯೋಗದಲ್ಲಿ 1018 ಜನರಿಗೆ ಉದರದರ್ಶಕ ಚಿಕಿತ್ಸೆ ಮಾಡಿಸುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಚಳ್ಳಕೆರೆ, ಆದಿವಾಲ, ಯರಬಳ್ಳಿ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು 1998 ರಲ್ಲಿ ಧರ್ಮಪುರದಲ್ಲಿ ನಿವೃತ್ತರಾಗಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top