Connect with us

    ಹೊಳಲ್ಕೆರೆಯಲ್ಲಿ ಅತೀ ಹೆಚ್ಚು‌ಮಳೆ | ಹನುಮನಕಟ್ಟೆ ಗ್ರಾಮದಲ್ಲಿ ಚೆಕ್ ಡ್ಯಾಂ ಭರ್ತಿ | ಎಲ್ಲೆಲ್ಲಿ ಎಷ್ಟೆಷ್ಟು ಮಳೆ ವರದಿ‌ ನೋಡಿ

    ಮುಖ್ಯ ಸುದ್ದಿ

    ಹೊಳಲ್ಕೆರೆಯಲ್ಲಿ ಅತೀ ಹೆಚ್ಚು‌ಮಳೆ | ಹನುಮನಕಟ್ಟೆ ಗ್ರಾಮದಲ್ಲಿ ಚೆಕ್ ಡ್ಯಾಂ ಭರ್ತಿ | ಎಲ್ಲೆಲ್ಲಿ ಎಷ್ಟೆಷ್ಟು ಮಳೆ ವರದಿ‌ ನೋಡಿ

    ಚಿತ್ರದುರ್ಗ ನ್ಯೂಸ್.ಕಾಂ: ಬರದಿಂದ ಬೆಂದು ಹೋಗಿದ್ದ‌ ಕೋಟೆನಾಡು ಚಿತ್ರದುರ್ಗ‌ ಜಿಲ್ಲೆಗೆ ಭರ್ಜರಿ‌ ಮಳೆಯಾಗಿದೆ.

    ಜಿಲ್ಲೆಯ ಹೊಳಲ್ಕೆರೆ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಹನುಮನಕಟ್ಟೆಯ ಚೆಕ್ ಡ್ಯಾಂ ಭರ್ತಿಯಾಗಿ ಹರಿಯುತ್ತಿದೆ. ರೈತರ‌ ಜಮೀನುಗಳಲ್ಲಿರುವ ಹಲವು ಕೃಷಿ ಹೊಂಡಗಳಿಗೆ ನೀರು ಬಂದಿದೆ.

    ತಾಳ್ಯ ಬಳಿ ಕೃಷಿ ಹೊಂಡಕ್ಕೆ ಬಂದಿರುವ ಮಳೆ ನೀರು

    ತಾಳ್ಯ ಬಳಿ ಕೃಷಿ ಹೊಂಡಕ್ಕೆ ಬಂದಿರುವ ಮಳೆ ನೀರು

    ಹೊಳಲ್ಕೆರೆ ವ್ಯಾಪ್ತಿಯಲ್ಲಿ 86.8 ಮಿ.ಮೀ ಮಳೆಯಾಗಿದೆ. ಸಿರಿಗೆರೆಯಲ್ಲಿ 78 ಮಿ.ಮೀ ಮಳೆಯಾಗಿದೆ.

    ಇದನ್ನೂ ಓದಿ: ಕೋಟೆನಾಡಿಗೆ ಕಾಲಿಟ್ಟ ಮಳೆರಾಯ | ಒಂದೇ ರಾತ್ರಿಗೆ ಇಳೆಯೆಲ್ಲಾ ತಂಪು

    ಹೊಳಲ್ಕೆರೆ ತಾಲೂಕಿನಲ್ಲಿ ಅಡಿಕೆ ತೋಟದಲ್ಲಿ ನೀರು

    ಹೊಳಲ್ಕೆರೆ ತಾಲೂಕಿನಲ್ಲಿ ಅಡಿಕೆ ತೋಟದಲ್ಲಿ ನೀರು

    ಉಳಿದಂತೆ ಚಳ್ಳಕೆರೆ 4, ನಾಯಕನಹಟ್ಟಿ 16, ಡಿ.ಮರಿಕುಂಟೆ 2, ಚಿತ್ರದುರ್ಗ 21, ತುರವನೂರು 2, ಹಿರೇಗುಂಟನೂರು 3,  ಭರಮಸಾಗರ 8, ಸಿರಿಗೆರೆ 78, ಐನಳ್ಳಿ 31, ಹೊಳಲ್ಕೆರೆ 86, ರಾಮಗಿರಿ 49, ಚಿಕ್ಕಜಾಜೂರು 18, ಬಿ.ದುರ್ಗ 22, ಎಚ್ .ಡಿ.ಪುರ 36, ತಾಳ್ಯ 8, ಮೊಳಕಾಲ್ಮುರು  39, ರಾಯಾಪುರ 23, ಬಿಜಿ ಕೆರೆ 3, ರಾಂಪುರ 27, ದೇವಸಮುದ್ರ 51, ಹೊಸದುರ್ಗ 24, ಬಾಗೂರು 7, ಮತ್ತೋಡು 13, ಶ್ರೀರಾಂಪುರ 50, ಮಾಡದಕೆರೆ 26 ಮೀ.ಮಿ ಮಳೆಯಾಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top