ಮುಖ್ಯ ಸುದ್ದಿ
ಡಾ.ಬಿ.ರಾಜಶೇಖರಪ್ಪ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಭಾಜನ
ಚಿತ್ರದುರ್ಗ ನ್ಯೂಸ್.ಕಾಂ: ಖ್ಯಾತ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶಾಸನ, ಮೋಡಿ ಲಿಪಿ ತಜ್ಞರು ಹಾಗೂ ಸಾಹಿತಿಗಳು ಆಗಿರುವ ರಾಜಶೇಖರಪ್ಪ ಅವರಿಗೆ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
‘ಇತಿಹಾಸ ಸಂಸ್ಕೃತ ಶ್ರೀ’ ಪ್ರಶಸ್ತಿಯನ್ನು ಬಿ.ಆರ್.ಆರ್ ಫ್ಯಾಮಿಲಿ ಚಾರಿಟಬಲ್ ಟ್ರಸ್ಟ್ ಪ್ರಯೋಜಿಸುತ್ತಿದೆ. ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಹಾಗೂಪಾರಿತೋಷಕ ಒಳಗೊಂಡಿರುತ್ತದೆ.
ನವೆಂಬರ್ 7 ರಿಂದ 9ರವರೆಗೆ ಪಾವಗಡದಲ್ಲಿ ನಡೆಯಲಿರುವ ಕರ್ನಾಟಕ ಇತಿಹಾಸ ಅಕಾಡೆಮಿಯ 37ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಇದನ್ನೂ ಓದಿ: ಕೋಪದ ಕೈಗೆ ಬುದ್ದಿ ಕೊಟ್ಟ ಅಪ್ಪ; ಮಗನ ಪ್ರಾಣವೇ ಹೋಯ್ತು
ಪ್ರಶಸ್ತಿಗೆ ಭಾಜನರಾಗಿರುವ ಡಾ.ಬಿ.ರಾಜಶೇಖರಪ್ಪ ಅವರನ್ನು ಇತಿಹಾಸ ಅಕಾಡೆಮಿಯ ಸದಸ್ಯರಾದ ಸಿ.ಎಂ.ತಿಪ್ಪೇಸ್ವಾಮಿ, ಹೆಚ್.ವಿ,ಇಂದುಶೇಖರ್ ಚಿನಿವಾರ್ ಅಭಿನಂದಿಸಿದ್ದಾರೆ.
ಇತಿಹಾಸ ಅಕಾಡೆಮಿಯಿಂದ ಈ ಹಿಂದೆಯೂ ಡಾ.ಬಿ.ರಾಜಶೇಖರಪ್ಪ ಹಲವು ಪ್ರಶಸ್ತಿಗಳನ್ನು ಪಡೆದುಕೊಮಡಿದ್ದಾರೆ. ಅದರಲ್ಲಿ ಪ್ರಮುಖವಾಘಿ ‘ಬಾ.ರ. ಗೋಪಾಲ್ ಶಾಸನ ತಜ್ಞ’ ಮತ್ತು ‘ಸಂಶೋಧನಾ ಶ್ರೀ’ ಪ್ರಶಸ್ತಿಗಳಿವೆ.
ಡಾ.ಬಿ.ರಾಜಶೇಖರಪ್ಪ 2018ರಲ್ಲಿ ಬಾದಾಮಿ ಬಳಿಯ ಶಿವಯೋಗ ಮಂದಿರದಲ್ಲಿ ನಡೆದ ಇತಿಹಾಸ ಅಕಾಡೆಮಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.