Connect with us

    ಗೌನ್-ಕ್ಯಾಪ್‍ನಲ್ಲಿ ಮಿಂಚಿದ ಭವಿಷ್ಯದ ವೈದ್ಯರು | ಎಸ್‍ಜೆಎಂ ಡೆಂಟಲ್ ಕಾಲೇಜು ವಿದ್ಯಾರ್ಥಿಗಳ 33ನೇ ಪದವಿ ಪ್ರದಾನ

    ಎಸ್‍ಜೆಎಂ ದಂತ ವೈದ್ಯಕೀಯ(ಡೆಂಟಲ್) ಕಾಲೇಜಿನ 33ನೇ ಪದವಿ ಪ್ರದಾನ ಕಾರ್ಯಕ್ರಮ

    ಮುಖ್ಯ ಸುದ್ದಿ

    ಗೌನ್-ಕ್ಯಾಪ್‍ನಲ್ಲಿ ಮಿಂಚಿದ ಭವಿಷ್ಯದ ವೈದ್ಯರು | ಎಸ್‍ಜೆಎಂ ಡೆಂಟಲ್ ಕಾಲೇಜು ವಿದ್ಯಾರ್ಥಿಗಳ 33ನೇ ಪದವಿ ಪ್ರದಾನ

    ಚಿತ್ರದುರ್ಗ ನ್ಯೂಸ್.ಕಾಂ: ನಗರದ ಎಸ್‍ಜೆಎಂ ದಂತ ವೈದ್ಯಕೀಯ(ಡೆಂಟಲ್) ಕಾಲೇಜಿನ 33ನೇ ಪದವಿ ಪ್ರದಾನ ಕಾರ್ಯಕ್ರಮ ಮಂಗಳವಾರ ಸಂಜೆ ಮುರುಘಾ ಮಠದ ಅನುಭವ ಮಂಟಪದ ಆವರಣದಲ್ಲಿ ನಡೆಯಿತು.

    ದಂತ ವೈದ್ಯಕೀಯ ಪದವಿ ಪೂರೈಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಂದಿನಿಂದ ವೈದ್ಯರಾಗುತ್ತಿದ್ದೇವೆ ಎನ್ನುವ ಸಂಭ್ರಮ ಎಲ್ಲರ ಮೊಗದಲ್ಲೂ ಮನೆ ಮಾಡಿತ್ತು. ಪದವಿ ಪಡೆಯುವ ಸಂದರ್ಭದಲ್ಲಿ ಅನುಭವಿಸಿದ ಎಲ್ಲ ಕಷ್ಟ, ನಷ್ಟಗಳು ಇಂದಿಗೆ ಮರೆಯಾದವು ಎನ್ನುವ ಸಂತೃಪ್ತಿ ಕಾಣಿಸುತ್ತಿತ್ತು.

    ಪದವಿ ಪಡೆಯುವಾಗ ಧರಿಸುವ ಕ್ಯಾಪ್ ಹಾಗೂ ಗೌನ್‍ನಲ್ಲಿ ಎಲ್ಲರೂ ಮಿಂಚಿದರು. ಗ್ರೂಪ್ ಪೋಟೋ ತೆಗೆಯುವಾಗ ಇಂದಿನಿಂದ ಬೇರೆ ಬೇರೆಯಾಗುತ್ತೇವೆ ಎನ್ನುವ ಬೇಸರದ ಛಾಯೆ ಕಾಣಿಸುತ್ತಿತ್ತು.

    ಇದನ್ನೂ ಓದಿ: ಅ.21 ರಿಂದ 25ರವರೆಗೆ ಶರಣ ಸಂಸ್ಕøತಿ ಉತ್ಸವ

    3ಡಿ ತಂತ್ರಜ್ಞಾನಕ್ಕೆ ವೈದ್ಯರು ತೆರೆದುಕೊಳ್ಳಬೇಕು: ಡಾ.ಕೆ.ಶಿವಶರಣ್ ಶೆಟ್ಟಿ

    ಪದವಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸದಸ್ಯ ಡಾ.ಕೆ.ಶಿವಶರಣ್ ಶೆಟ್ಟಿ ಮಾತನಾಡುತ್ತಾ, 3ಡಿ ರೀತಿಯ ಹೊಸ ತಂತ್ರಜ್ಞಾನ ಬಳಸುವ ಜ್ಞಾನ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ವೈದ್ಯಕೀಯ ವಿದ್ಯಾರ್ಥಿಗಳು ವೈಜ್ಞಾನಿಕ ಯುಗಕ್ಕೆ ಹೊಂದಿಕೊಳ್ಳುತ್ತಾ, ಹೊಸ ಆವಿಷ್ಕಾರಗಳಿಗೆ ಒಳಗಾಗಬೇಕು. ನೀವು ಈಗ ವೈದ್ಯರಾಗಿ ಪ್ರಪಂಚಕ್ಕೆ ಕಾಲಿಡುತ್ತಿದ್ದೀರಿ. ಜಗತ್ತು ನಿಮ್ಮನ್ನು ಸ್ವಾಗತಿಸುತ್ತಿದೆ. ಪ್ರಯೋಗಾಲಯದಲ್ಲಿ ತಾವು ಅನುಭವಿಸಿದ ನೋವುಗಳು ಇಂದು ಮಾಯವಾಗಿವೆ. ಈಗ ನಿಮ್ಮ ಕೈಯಲ್ಲಿ ಪದವಿ ಇದೆ. ನಿಮ್ಮ ಕೌಶಲ್ಯ ಬಳಿಸಿರಿ ಎಂದರು.

    ನಮ್ಮ ಬಳಿ ಬಂದಂತಹ ರೋಗಿಗಳನ್ನು ಪ್ರೀತಿಯಿಂದ ಮಾತನಾಡಿಸಿದರೆ ಅವರ ಅರ್ಧ ರೋಗ ಕಡಿಮೆಯಾಗುತ್ತದೆ. ನಿಮ್ಮ ಪ್ರಯಾಣ ಆರಂಭಗೊಂಡಿದ್ದು, ಹೊಸ ಆವಿಷ್ಕಾರಗಳೊಂದಿಗೆ ನಿಮ್ಮ ಮುಂದಿನ ದಾರಿ ಸಾಗಲಿ ಎಂದು ಹಾರೈಸಿದರು.

    54 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು

    54 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು

    ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ ಮಾತನಾಡಿ, ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಯಾವುದೇ ಅಸಹ್ಯ ಭಾವನೆ ಮೂಡಬಾರದು. ಪ್ರೀತಿಯಿಂದ ಅವರಿಗೆ ಚಿಕಿತ್ಸೆ ನೀಡಬೇಕು ಎಂದರು.

    ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್.ಜೆ.ಎಂ. ವಿದ್ಯಾಪೀಠದ ಸಿಇಒ ಎಂ.ಭರತ್‍ಕುಮಾರ್ ವೇದಿಕೆಯಲ್ಲಿದ್ದರು. ಎಸ್.ಜೆ.ಎಂ. ವಿದ್ಯಾಪೀಠದ ಹೆಚ್.ಆರ್.ವಿಜಯ ಕೆ ಮಠ್, ಡಾ| ರಘುನಾಥರೆಡ್ಡಿ, ಡಾ| ನಾಗರಾಜಪ್ಪ ಮತ್ತಿತರರಿದ್ದರು.

    ಕಾರ್ಯಕ್ರಮದಲ್ಲಿ ಇಬ್ಬರು ಸ್ನಾತಕೋತ್ತರ ಮತ್ತು 52 ವಿದ್ಯಾರ್ಥಿಗಳು ಸ್ನಾತಕ ಪದವಿ ಸೇರಿದಂತೆ ಒಟ್ಟು 54 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು. ಪ್ರಾಚಾರ್ಯರಾದ ಡಾ| ಗೌರಮ್ಮ ಸ್ವಾಗತಿಸಿದರು. ಡಾ| ವಿನುತ ಹಾಗೂ ಡಾ| ದಿಶಾ ನಿರೂಪಿಸಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top