ಮುಖ್ಯ ಸುದ್ದಿ
ದ್ವಿತೀಯ PUC ಪರೀಕ್ಷೆ-2 | ಕನ್ನಡ ವಿಷಯದಲ್ಲಿ 344 ವಿದ್ಯಾರ್ಥಿಗಳು ಗೈರು
CHITRADURGA NEWS | 24 APRIL 2025
ಚಿತ್ರದುರ್ಗ: ಏಪ್ರಿಲ್ 24 ರಂದು ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-2 ಕನ್ನಡ ವಿಷಯದ ಪರೀಕ್ಷೆಗೆ 344 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಕನ್ನಡ ವಿಷಯದಲ್ಲಿ 1367 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 1023 ವಿದ್ಯಾರ್ಥಿಗಳು ಹಾಜರಾಗಿ, 344 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜಿಲ್ಲೆಯ 09 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
ಜಿಲ್ಲೆಯಲ್ಲಿ ಯಾವುದೇ ಡಿಬಾರ್ ಪ್ರಕರಣ ಇರುವುದಿಲ್ಲ. ಏಪ್ರಿಲ್ 25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ ವಿಷಯದ ಪರೀಕ್ಷೆ ಇರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶರು ತಿಳಿಸಿದ್ದಾರೆ.